-ಕಿತ್ತೂರುರಾಣಿ ಚೆನ್ನಮ್ಮನ 2೦೦ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶ್ರೀವಚನಾನಂದ ಮಹಾಸ್ವಾಮೀಜಿ
ಕನ್ನಡಪ್ರಭವಾರ್ತೆ ಮೊಳಕಾಲ್ಮುರು
ಅನೇಕ ಸಂಸ್ಥಾನಗಳು ಬ್ರಿಟಿಷರಿಗೆ ತಲೆಬಾಗಿ ಕಪ್ಪ ನೀಡಿ ಅವರ ಶರತ್ತುಗಳಿಗೆ ಒಳಪಟ್ಟು ಸಂಸ್ಥಾನಗಳನ್ನುನಡೆಸುತ್ತಿದ್ದಂತ ಕಾಲ ಘಟ್ಟದಲ್ಲಿ ಒಬ್ಬ ಮಹಿಳೆಯಾಗಿ ಬ್ರಿಟಿಷರಿಗೆ ತಲೆತಗ್ಗಿಸದೆ ಎದೆಯೊಡ್ಡಿ ಹೋರಾಟ ಮಾಡಿದ್ದ ಕಿತ್ತೂರ ರಾಣಿ ಚೆನ್ನಮ್ಮ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕೆಂದು ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮೀಜಿ ಹೇಳಿದರು.ತಾಲೂಕಿನ ರಾಂಪುರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಕಿತ್ತೂರುರಾಣಿ ಚೆನ್ನಮ್ಮನ 2೦೦ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆರಳೆಣಿಕೆಯಷ್ಟು ಸೈನ್ಯವಿದ್ದರೂ ಬ್ರಿಟಿಷರಿಗೆ ತಲೆತಗ್ಗಿಸದೆ ಧೈರ್ಯವಾಗಿ ಎದೆಯೊಡ್ಡಿ ಬ್ರಿಟಿಷರ ವಿರುದ್ಧ ಹೋರಾಡಿ ಜಯ ಸಾಧಿಸಿದರು. ಮಹಿಳೆಯರು ಜಾಗೃತರಾಗಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದರೆ ಪ್ರತಿಯೊಬ್ಬರು ಸಂಘಟಿತರಾಗಬೇಕು. ಸದೃಢ ಸಮಾಜವನ್ನು ಕಟ್ಟಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದರು.
ಇದೇ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಉಲ್ಲತಿ ಜಿಲ್ಲಾಧ್ಯಕ್ಷ ಪ್ರಕಾಶ್, ತಾಲೂಕು ಅಧ್ಯಕ್ಷ, ಆರ್.ಜಿ. ಜಯಕುಮಾರ್, ಜಿ. ಸಿ. ನಾಗರಾಜ್, ಯುವ ಘಟಕ ಅಧ್ಯಕ್ಷ ವಿನಯ್ ಕುಮಾರ್, ಮಹಿಳಾ ಘಟಕ ಅಧ್ಯಕ್ಷರಾದ ಸಿದ್ದಮ್ಮ, ಶ್ರುತಿ, ನಿವೃತ ಪ್ರಾಂಶುಪಾಲ ಮೋಹನ್, ರಮೇಶ್, ಮಲ್ಲಿಕಾರ್ಜುನ್ ಕುಮಾರ್, ನವೀನ್, ಬಳೆ ಗಂಗಾಧರ್ ಹಿರೇಕಹಳ್ಳಿ ಪ್ರಭಾಕರ್, ನಾಗಸಮುದ್ರ ಸುಧಾಕರ್, ಸಿದ್ದಾಪುರ ಉಮಾಶಂಕರ್ ಮುಖಂಡರು ಉಪಸ್ಥಿತರಿದ್ದರು.