ಕನ್ನಡ ಭಾಷೆ ನಮ್ಮೆಲ್ಲರ ಉಸಿರಾಗಲಿ

KannadaprabhaNewsNetwork | Published : Nov 30, 2024 12:46 AM

ಸಾರಾಂಶ

ಕನ್ನಡ ನಮ್ಮ ತಾಯಿ ಭಾಷೆ, ನಮ್ಮ ಕಣ ಕಣದಲ್ಲಿ ಕನ್ನಡ ನೆಲೆಸಿದೆ. ಕನ್ನಡ ಸಾಹಿತ್ಯವು ಜಗತ್ತಿನ ಅಮೂಲ್ಯ ಸಾಹಿತ್ಯಗಳಲ್ಲಿ ಒಂದಾಗಿದೆ

ಲಕ್ಷ್ಮೇಶ್ವರ: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು. ಕನ್ನಡ ನಾಡು ಕಲೆ, ಭಾಷೆ, ಸಂಸ್ಕೃತಿಗೆ ಭಾರತಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ನೀಡಿದ ಭಾಷೆ ನಮ್ಮದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಶಿಗ್ಲಿ ಹೋಬಳಿ ಘಟಕದ ಅಧ್ಯಕ್ಷ ರಾಜು ರಜಪೂತ ಹೇಳಿದರು.

ಪಟ್ಟಣದ ಕಮಲಾ ಮತ್ತು ವೆಂಕಪ್ಪ ಎಂ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ 69 ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಅಗಡಿ ಕನ್ನಡ ಸಂಘದ 10 ರ ಸಂಭ್ರಮದ ಅಂಗವಾಗಿ ಜರುಗಿದ ಅಗಡಿ ಕನ್ನಡ ಹಬ್ಬಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಮ್ಮ ತಾಯಿ ಭಾಷೆ, ನಮ್ಮ ಕಣ ಕಣದಲ್ಲಿ ಕನ್ನಡ ನೆಲೆಸಿದೆ. ಕನ್ನಡ ಸಾಹಿತ್ಯವು ಜಗತ್ತಿನ ಅಮೂಲ್ಯ ಸಾಹಿತ್ಯಗಳಲ್ಲಿ ಒಂದಾಗಿದೆ. ಕನ್ನಡ ಭಾಷೆಗೆ ಅನೇಕ ಕವಿಗಳು, ಕತೆಗಾರರು. ಸಾಹಿತ್ಯಾಭಿಮಾನಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಯು ಜಗತ್ತಿನ ಸುಂದರ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ನಾಡಿನ ಸಂಸ್ಕೃತಿ, ಪರಂಪರೆಯು ನಮ್ಮ ಜೀವಾಳವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ಪ್ರಾ ಚಾರ್ಯ ಡಾ. ಪರಶುರಾಮ ಬಾರ್ಕಿ ವಹಿಸಿದ್ದರು. ಅಗಡಿ ಸನ್ ರೈಸ್ ಆಸ್ಪತ್ರೆಯ ಡಾ. ರಾಜಶೇಖರ್ ಮೂಲಿಮನಿ, ಡಾ. ಎನ್. ಹಯವದನ, ಡಾ. ಆರ್.ಎಂ. ಪಾಟೀಲ, ಡಾ. ಸುಭಾಷ್ ಮೇಟಿ, ಪ್ರೊ. ವಿಕ್ರಮ ಶಿರೋಳ್, ಡಾ. ಗಿರೀಶ ಯತ್ತಿನಹಳ್ಳಿ ಕನ್ನಡ ಹಬ್ಬದ ಸಂಯೋಜಕ ಪ್ರೊ. ಸೋಮಶೇಖರ ಕೆರಿಮನಿ ಇದ್ದರು.

ಪ್ರೊ. ಪ್ರತಿಮಾ ಮಹಾಪುರುಷ ಸ್ವಾಗತಿಸಿದರು. ಮೇಘಾ ಪಾಶೆಟ್ಟಿ, ತಸ್ಲೀಮಾ ಕಾರಡಗಿ ಪ್ರೊ. ರಾಜೇಶ್ವರಿ ಗಾಮನಗಟ್ಟಿ, ಪ್ರೊ. ಷಣ್ಮುಖ. ಜಿ ಕಾರ್ಯಕ್ರಮ ನಿರೂಪಿಸಿದರು, ಪ್ರೊ.ರಾಜೇಂದ್ರ ಶೆಟ್ಟರ ವಂದಿಸಿದರು.

Share this article