ನರೇಗಲ್ಲ: ಗಜೇಂದ್ರಗಡದಲ್ಲಿ ಜರುಗುವ 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಾರಂಭದ ದಿನವಾದ ಭಾನುವಾರ ಬೆಳಗ್ಗೆ 11ಕ್ಕೆ ಕರ್ನಾಟಕ ಏಕೀಕರಣದ ರೂವಾರಿ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿ ಮನೆ ಮುಂಭಾಗದಿಂದ ಕನ್ನಡದ ತೇರಿಗೆ ಶಾಸಕ ಜಿ.ಎಸ್.ಪಾಟೀಲ ಚಾಲನೆ ನೀಡಿದರು.
ಕನ್ನಡ ನಾಡು ನುಡಿಗಾಗಿ ಸದಾ ಕಂಕಣಬದ್ಧರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಜಕ್ಕಲಿ ಗ್ರಾಮದಲ್ಲಿ ಕನ್ನಡಪರ, ಸಾಹಿತ್ಯಿಕ ಕಾರ್ಯಗಳು ಮುಂದಿನ ದಿನಮಾನಗಳಲ್ಲಿ ಜರುಗಲಿ ಪ್ರತಿಯೊಬ್ಬರು ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕನ್ನಡ ನಾಡು ನುಡಿಗಾಗಿ ತಮ್ಮನ್ನು ಮುಡುಪಾಗಿಟ್ಟಿದ್ದ ಕೆಚ್ಚೆದೆಯ ಹೋರಾಟಗಾರ ಅಂದಾನಪ್ಪ ನಡೆದಾಡಿದ ಈ ನೆಲದಲ್ಲಿ ಇಂದು ಸಾಹಿತ್ಯ ಸಮ್ಮೇಳನದ ತೇರಿಗೆ ಚಾಲನೆ ದೊರೆಯುತ್ತಿರುವುದು ಸಂತಸದ ಸಂಗತಿ. ಮುಂಬರುವ ದಿನಮಾನಗಳಲ್ಲಿ ಈ ಭಾಗದಲ್ಲಿ ಇನ್ನು ಹೆಚ್ಚು ಸಾಹಿತ್ಯಿಕ ಕಾರ್ಯ ಮಾಡುವ ಮೂಲಕ ಈ ಭಾಗದ ಜನತೆಯ ಕನ್ನಡ ತಾಯಿಯ ಸೇವೆ ಮಾಡಲು ನಾವು ಕಂಕಣಬದ್ದರಾಗಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಂದಾನಪ್ಪ ದೊಡ್ಡಮೇಟಿ ಮನೆಯ ಪ್ರಾಂಗಣದಲ್ಲಿ ಶಾಸಕರು ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ, ಆನಂದ ಹಡಪದ, ಗಜೇಂದ್ರಗಡ ತಾಲೂಕು ಕಸಾಪ ಅಧ್ಯಕ್ಷ ಅಮರೇಶ ಗಾಣಿಗೇರ, ತಾಲೂಕು ವೈದ್ಯಾಧಿಕಾರಿ ಬಿ.ಎಸ್.ಭಜಂತ್ರಿ, ರವೀಂದ್ರನಾಥ ದೊಡ್ಡಮೇಟಿ, ತಹಸೀಲ್ದಾರ್ ನಾಗರಾಜ, ಕ್ಷೇತ್ರಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ, ಸಿಪಿಐ ಸಿದ್ದು ಬೀಳಗಿ, ತಾಲೂಕು ದೈಹಿಕಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ, ರೋಣ ತಾಲೂಕು ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ, ತಾಪಂ ಈಓ ಚಂದ್ರಶೇಖರ ಕಂದಕೂರ, ಪಿಎಸ್ ಐ ಐಶ್ವರ್ಯ ನಾಗರಾಳ, ಡಾ.ಕೆ.ಬಿ. ಧನ್ನೂರ, ತಾಪಂ ಮಾಜಿ ಸದಸ್ಯ ಸಂದೇಶ ದೊಡ್ಡಮೇಟಿ, ಗ್ರಾಪಂ ಅಧ್ಯಕ್ಷೆ ಗಂಗಮ್ಮ ಜಾಲಣ್ಣವರ, ಪಿಡಿಓ ಎಸ್ .ಎಸ್. ರಿತ್ತಿ, ಅಶೋಕಪ್ಪ ಯಾವಗಲ್ಲ, ಎಂ.ಎಸ್.ಕೋರಿ, ಎಂ.ಎಸ್. ದಡೇಸೂರಮಠ, ಗುರುಮೂರ್ತಿ ಮಂಟಯ್ಯನಮಠ, ಪುಂಡಪ್ಪ ಮಡಿವಾಳರ, ಶಿವನಾಗಪ್ಪ ದೊಡ್ಡಮೇಟಿ, ಪ್ರಕಾಶ ಹೊಸಮನಿ, ರಾಜು ಮುಗಳಿ, ಹರ್ಷವರ್ಧನ ದೊಡ್ಡಮೇಟಿ, ಶಿಕ್ಷಕ ವಿ.ಎ. ಕುಂಬಾರ, ತಾಲೂಕು ಕಾರ್ಯದರ್ಶಿ ಎಸ್.ಬಿ. ಹಿರೇಮಠ, ಡಾ. ಎಸ್.ಪಿ. ಸಾರಂಗಮಠ, ಶಾಸಕ ಪಾಟೀಲ, ಕನ್ನಡ ಪರ ಸಂಘಟನೆಯ ಮುಖಂಡ ಎಚ್.ಎಸ್.ಸೋಂಪೂರ, ಮೈಲಾರಪ್ಪ ಚಳ್ಳಮರದ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.