ಧಾರವಾಡ:
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ನಡೆದ ಶ್ರೀ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಕಾಲ ಬದಲಾದಂತೆ ನವ ಮಾಧ್ಯಮಗಳ ಮುಖಾಂತರ ಬಸವೇಶ್ವರ ವಚನ ಮತ್ತು ತತ್ವಗಳನ್ನು ಪ್ರಸಾರ ಮಾಡಬೇಕಾಗಿದೆ. ಅವರ ತತ್ವಗಳನ್ನು ನಿಷ್ಠೆಯಿಂದ ಆಚರಣೆ ಮಾಡುವ ಅಗತ್ಯವಿದೆ ಎಂದ ಅವರು, ಜನ ಭಾಷೆಯನ್ನೇ ದೈವ ಭಾಷೆಯನ್ನಾಗಿ ಮಾಡಿದ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ ಎಂದರು.
ಮುರಗೋಡ ಮಹಾಂತ ಶಿವಯೋಗಿಗಳು ಮಹಾನ್ ಸಂತರಾಗಿದ್ದರು. ಅವರು ಯಾವುದೇ ಪ್ರಲೋಭಗಳಿಗೆ ಒಳಗಾಗಿರಲಿಲ್ಲ. ಕವಿವಿ ಬಸವೇಶ್ವರ ಪೀಠ ನಿರ್ಮಾಣ ಮಾಡುವಲ್ಲಿ ಅವರ ಕೊಡುಗೆ ದೊಡ್ಡದು ಎಂದು ಹೇಳಿದರು.ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ಬಸವಣ್ಣನ ತತ್ವ, ಸಿದ್ಧಾಂತದ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಬಸವಣ್ಣನವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿದೆ. ಜಗತ್ತಿಗೆ ''''''''ಕಾಯಕವೇ ಕೈಲಾಸ'''''''' ಎಂಬ ತತ್ವ ನೀಡಿದ ಬಸವಣ್ಣನಿಗೆ "ಕಾಯಕ ತತ್ವದ ಮಹಾಗುರು'''''''' ಎಂದು ಘೋಷಿಸಬೇಕು. ಕವಿವಿ ಬಸವ ಅಧ್ಯಯನ ಪೀಠವು ಬಸವೇಶ್ವರ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಕವಿವಿ ಬಸವೇಶ್ವರ ಪೀಠ ಎಲ್ಲ ವಿವಿಗಳಿಗೆ ಮಾದರಿಯಾಗಿದ್ದು, ಬಸವ ಅಧ್ಯಯನ ಪೀಠಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ನಡೆದಂತೆ ನುಡಿದಿದ್ದರಿಂದ ಬಸವಣ್ಣ ಮಹಾತ್ಮರೆನಿಸಿದರು. ಬಸವಣ್ಣ ಎಂದಿಗೂ ಪ್ರಸ್ತುತವಾಗಿದ್ದು, ಬಸವಾದಿ ಶರಣರ ವಚನಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ ಎಂದರು.
ಡಾ. ವೀರಣ್ಣ ರಾಜೂರ ಮತ್ತು ಡಾ. ಸಿ.ಎಂ. ಕುಂದಗೋಳ ಸಂಪಾದನೆಯ ಸುವರ್ಣ ದೀಪ್ತಿ ಸ್ಮರಣೆ ಸಂಚಿಕೆ ಸೇರಿದಂತೆ ಒಟ್ಟು 16 ವಿವಿಧ ಪುಸ್ತಕ ಮತ್ತು ಬಸವೇಶ್ವರ ಪೀಠದ ಕುರಿತು ಮಾಡಿದ ಸಾಕ್ಷ್ಯ ಚಿತ್ರವನ್ನು ಸಾನ್ನಿಧ್ಯ ವಹಿಸಿದ್ದ ವಿವಿಧ ಮಠಾಧೀಶರು ಲೋಕಾರ್ಪಣೆ ಮಾಡಿದರು.
ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಬೆಂಗಳೂರಿನ ಬೇಲಿಮಠದ ಶೀವರುದ್ರ ಸ್ವಾಮೀಜಿ, ಧಾರವಾಡದ ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಹುಬ್ಬಳ್ಳಿಯ ಸ್ವರ್ಣಾ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ ಪ್ರಸಾದ, ಡಾ. ಎಂ.ಎಂ. ಕಲಬುರಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿದರು.ಅಧ್ಯಕ್ಷತೆಯನ್ನು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ವಹಿಸಿದ್ದರು. ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ, ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಕವಿವಿ ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ, ಬಸವೇಶ್ವರ ಪೀಠದ ಸಂಯೋಜಕ ಡಾ. ಸಿ.ಎಂ.ಕುಂದಗೋಳ ಇದ್ದರು. ವಚನ ಗ್ರಂಥ ಮೆರವಣಿಗೆ
ಕವಿವಿಯಲ್ಲಿ ಶರಣ ಗ್ರಾಮ ಸ್ಥಾಪನೆಗಾಗಿ ಅನುದಾನ ಕೊರತೆಯನ್ನು ಸಮಾರಂಭದಲ್ಲಿ ವೀರಣ್ಣ ರಾಜೂರ ಪ್ರಸ್ತಾಪಿಸಿದರು. ವೇದಿಕೆ ಮೇಲಿದ್ದ ಕೊಪ್ಪಳದ ಕುಷ್ಟಗಿಯ ಶಿವಲಿಂಗ ಸ್ವಾಮೀಜಿ ₹ 2 ಲಕ್ಷ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ₹ 1 ಲಕ್ಷ ಹಾಗೂ ಸ್ವರ್ಣಾ ಸಮೂಹ ಸಂಸ್ಥೆಯ ಡಾ. ವಿ.ಎಸ್.ವಿ. ಪ್ರಸಾದ ₹ 5 ಲಕ್ಷ ದೇಣಿಗೆ ಕೊಡುವುದಾಗಿ ಘೋಷಿಸಿದರು.