ಮಠಗಳು ಸರ್ವರನ್ನು ಒಗ್ಗೂಡಿಸುವ ಕೆಲಸ ಮಾಡಲಿ: ವರುಣಗೌಡ ಪಾಟೀಲ

KannadaprabhaNewsNetwork | Published : Mar 4, 2025 12:33 AM

ಸಾರಾಂಶ

ಮಠಗಳು ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನದಾಸೋಹ ಹಾಗೂ ಆಶ್ರಯವಾಗಿವೆ.

ಶಿಗ್ಗಾಂವಿ: ಪ್ರಸ್ತುತ ದಿನಗಳಲ್ಲಿ ನಾಡಿನ ಅಭ್ಯುದಯಕ್ಕೆ ಮಠ ಮಾನ್ಯಗಳು ಸರ್ವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಮುಖಂಡ ವರುಣಗೌಡ ಪಾಟೀಲ ತಿಳಿಸಿದರು.ತಾಲೂಕಿನ ಹಿರೇಬೆಂಡಿಗೇರಿಯ ಸದ್ಧರ್ಮ ಹಿರೇಮಠದಲ್ಲಿ ಸರ್ವಧರ್ಮ ಸಾಮರಸ್ಯ ಸದ್ಭಾವನೆಯ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಠಗಳು ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನದಾಸೋಹ ಹಾಗೂ ಆಶ್ರಯವಾಗಿವೆ ಎಂದರು.ಸಾನ್ನಿಧ್ಯ ವಹಿಸಿದ್ದ ಮಠದ ರೇವಣಸಿದ್ಧಯ್ಯ ಆಶೀರ್ವಚನ ನೀಡಿ, ನಮ್ಮದು ಬಡವರ ಮಠ. ಸರ್ವ ಧರ್ಮದವರನ್ನು ಒಗ್ಗೂಡಿಸಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎನ್ನುವ ಸಂದೇಶ ಸಾರುವುದು ಮಠದ ಉದ್ದೇಶ. ಆ ಹಿನ್ನೆಲೆ ನಾವು ಒಂದು ರಥವನ್ನು ತಯಾರಿಸಿ ಎಲ್ಲರನ್ನು ಸೇರಿಸಿಕೊಂಡು ರಥೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.ಪಂಚಮಸಾಲಿ ಯುವ ಘಟಕದ ಹಾವೇರಿ ಜಿಲ್ಲಾ ಅಧ್ಯಕ್ಷ ನಾಗರಾಜ ಕ್ಯಾಬಳ್ಳಿ, ಯುವ ರೈತ ಮುಖಂಡ ವಿನಯ ಹೊನ್ನಣ್ಣವರ, ಜಾನಪದ ಕಲಾವಿದ ಶರೀಫ ಮಾಕಪ್ಪನವರ ಹಾಗೂ ನಾಗರಾಜ ಪಟ್ಟಣಶೆಟ್ಟಿ ಸೇರಿದಂತೆ ಹಲವಾರು ಮುಖಂಡರು ಮಾತನಾಡಿದರು. ಈ ಸಂದರ್ಭದಲ್ಲಿ ಮಠದ ಪದಾಧಿಕಾರಿಗಳು ಹಾಗೂ ಗ್ರಾಮದ ಸದ್ಭಕ್ತರು ಇದ್ದರು.ಹಾವೆಮುಲ್‌ ನಿರ್ದೇಶಕರು ರೈತರ ಪ್ರಗತಿಗೆ ಶ್ರಮಿಸಲಿ

ಶಿಗ್ಗಾಂವಿ: ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಂಘದ ಮತ್ತು ಕ್ಷೇತ್ರದ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಕ್ಷೇತ್ರದಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆಯಬೇಕೆಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರು ಆಶಿಸಿದರು.ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ತಿಪ್ಪಣ್ಣ ಸಾತಣ್ಣವರ ಅವರು ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಕ್ಕೆ ಅವರನ್ನು ಅಭಿನಂದಿಸಿ ಮಾತನಾಡಿದರು.

ನೂತನ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ಮಾತನಾಡಿ, ಬಡವರು, ಕೃಷಿಕರಿಗೆ ಸಹಕಾರಿಯಾಗುವ ಕಾರ್ಯವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ, ಮಾಜಿ ಉಪಾಧ್ಯಕ್ಷ ರಮೇಶ್ ಸಾತಣ್ಣವರ, ಶಂಕ್ರಣ್ಣ ಮುಂದಿನಮನಿ, ಚನ್ನಪ್ಪ ಕುಂದಗೋಳ, ಈಶ್ವರ ಹರಕುಣಿ ಭರಮಜ್ಜ ದ್ಯಾವಣ್ಣವರ, ವಿರುಪಾಕ್ಷಪ್ಪ ಸಾತಣ್ಣವರ, ಗಂಗಾಧರ ಗೊರವರ, ವೀರನಗೌಡ ಪಾಟೀಲ, ಮಂಜುನಾಥ ಮತ್ತಿಗಟ್ಟಿ, ಸಂತೋಷ ಕುಲಕರ್ಣಿ, ಆಕಾಶ ವಂಜಾರೆ, ಗುರುನಾಥ ಅಣ್ಣಿಗೇರಿ, ವಿಶ್ವನಾಥ ಗಾಣಗೇರ, ಶ್ರೀಕಾಂತ ಶಿಲೋಚನಮಠ, ಚೇತನ ಕಲಾಲ್‌ ಇತರರು ಇದ್ದರು.

Share this article