ನವದುರ್ಗೆಯರು ಭದ್ರಾವತಿ ಕ್ಷೇತ್ರಕ್ಕೆ ಒಳಿತು ಮಾಡಲಿ: ವಿನಯ್ ಗುರೂಜಿ

KannadaprabhaNewsNetwork |  
Published : Oct 19, 2023, 12:45 AM IST
ಚಿತ್ರ: ಡಿ೧೯-ಬಿಡಿವಿಟಿ(ಎ)ಭದ್ರಾವತಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಭಕ್ತ ವೃಂದದಿಂದ ಏರ್ಪಡಿಸಲಾಗಿದ್ದ ಕ್ಷೇತ್ರದ ಅಭಿವೃದ್ಧಿಗಾಗಿ ದುರ್ಗ ಸಪ್ತಶತಿ ಪಾರಾಯಣ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಸಭಾಭವನದ ಮಾಲೀಕರಾದ ಶಿವಕುಮಾರ್ ದಂಪತಿ ಸನ್ಮಾನಿಸಿ ಅಭಿನಂದಿಸಿದರು. | Kannada Prabha

ಸಾರಾಂಶ

ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನ

ಭದ್ರಾವತಿ: ಕ್ಷೇತ್ರದ ಜನರಿಗೆ ಯಾವುದೇ ರೀತಿ ಸಮಸ್ಯೆಗಳು ಎದುರಾಗದಿರಲಿ. ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ದುರ್ಗ ಸಪ್ತಶತಿ ಪಾರಾಯಣ ಮೂಲಕ ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ನುಡಿದರು.

ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಭಕ್ತವೃಂದದಿಂದ ಏರ್ಪಡಿಸಲಾಗಿದ್ದ ಕ್ಷೇತ್ರದ ಅಭಿವೃದ್ಧಿಗೆ ದುರ್ಗ ಸಪ್ತಶತಿ ಪಾರಾಯಣದಲ್ಲಿ ಅವರು ಮಾತನಾಡಿದರು.

ನವದುರ್ಗೆಯರ ಆರಾಧನೆಯಲ್ಲಿ ವಿಶಿಷ್ಟವಾದ ಶಕ್ತಿ ಇದೆ. ನಮ್ಮಲ್ಲಿರುವ ದುರ್ಗುಣಗಳು ನಾಶವಾಗಿ ಒಳ್ಳೆಯ ಗುಣಗಳು ವೃದ್ಧಿಸಲಿ. ಎಲ್ಲರ ಬದುಕು ಒಳ್ಳೆಯದಾಗಲಿ ಎಂಬುದು ನವರಾತ್ರಿ ಆಚರಣೆ ಉದ್ದೇಶ. ಎಲ್ಲರಿಗೂ ಒಳಿತನ್ನು ಬಯಸುತ್ತೇನೆ ಎಂದರು.

ಆರಂಭದಲ್ಲಿ ದೀಪ ಬೆಳಗಿಸುವ ಮೂಲಕ ಶ್ರೀ ಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿನಯ್ ಗುರೂಜಿ ಅವರು ಸಭಾಭವನದ ಮಾಲೀಕ ಶಿವಕುಮಾರ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.

ಭಕ್ತವೃಂದದ ಪ್ರಮುಖರಾದ ಬಿ.ಮೂರ್ತಿ, ಎಂ.ಎಸ್. ರವಿ, ವೈ.ನಟರಾಜ್, ಬಿ.ಎಸ್. ಬಸವೇಶ್, ರವಿಕುಮಾರ್ ಇನ್ನಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ವೆಂಕಟಗಿರಿ ವಂದಿಸಿದರು.

- - - (** ಈ ಫೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-ಡಿ19ಬಿಡಿವಿಟಿ:

ದುರ್ಗ ಸಪ್ತಶತಿ ಪಾರಾಯಣ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ದೀಪ ಬೆಳಗಿಸಿ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಶಿವಕುಮಾರ್, ಬಿ.ಮೂರ್ತಿ, ಎಂ.ಎಸ್. ರವಿ, ವೈ.ನಟರಾಜ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ
ಚಿಕ್ಕಮಗಳೂರು ಗಿರಿಧಾಮಗಳಲ್ಲಿ ಪ್ರವಾಸಿಗರ ಕಾರುಬಾರು