ದೇಶದಲ್ಲಿ ವಿಜ್ಞಾನಿಗಳ ಸಂಖ್ಯೆ ಹೆಚ್ಚಲಿ: ಶಿಕ್ಷಕಿ ಎ.ಎಂ. ಶೋಭಾ

KannadaprabhaNewsNetwork |  
Published : Mar 04, 2025, 12:30 AM IST
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. | Kannada Prabha

ಸಾರಾಂಶ

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯದೇ ಸ್ವಾವಲಂಬಿಗಳಾಗಲು ಸಾಧ್ಯವಿಲ್ಲ.

ಬ್ಯಾಡಗಿ: ಭಾರತ ಸ್ವಾವಲಂಬಿ ರಾಷ್ಟ್ರವಾಗಬೇಕಾದರೆ, ಭವಿಷ್ಯದ ದಿನಗಳಲ್ಲಿ ದೇಶದೆಲ್ಲೆಡೆ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಚಿಂತನೆ ಅಳವಡಿಸುವ ವಾತಾವರಣ ಶಾಲೆಗಳಲ್ಲಿ ನಿರ್ಮಾಣವಾಗಬೇಕಾಗಿದೆ ಎಂದು ಶಿಕ್ಷಕಿ ಎ.ಎಂ. ಶೋಭಾ ಅಭಿಪ್ರಾಯಪಟ್ಟರು.

ತಾಲೂಕಿನ ಕದರಮಂಡಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯದೇ ಸ್ವಾವಲಂಬಿಗಳಾಗಲು ಸಾಧ್ಯವಿಲ್ಲ. ಸಾರ್ವಭೌಮತ್ವ ಪಡೆಯುವ ಉದ್ದೇಶದಿಂದ ವಿಶ್ವದೆಲ್ಲೆಡೆ ಬಹಳಷ್ಟು ರಾಷ್ಟ್ರಗಳು ಸ್ಪರ್ಧೆಗಿಳಿದಿವೆ. ನೂತನ ಅವಿಷ್ಕಾರಗಳಿಗಾಗಿ ಕೋಟಿಗಟ್ಟಲೇ ಹಣ ವ್ಯಯಿಸುತ್ತಿವೆ ಎಂದರು.

ಜಾಗತಿಕ ನಾಯಕತ್ವಕ್ಕಾಗಿ ಭಾರತದ ಯುವಕರನ್ನು ಸಬಲೀಕರಣಗೊಳಿಸುವುದು ಎಂಬ ಧ್ಯೇಯವಾಕ್ಯಕ್ಕೆ ಸಂಬಂಧಿಸಿದಂತೆ 2025ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಥೀಮ್ ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮತ್ತು ವೈಜ್ಞಾನಿಕ ಪ್ರಗತಿಯಲ್ಲಿ ಆಸಕ್ತಿ ಉತ್ತೇಜಿಸಲು ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಸಂವಿಧಾನದ 4ನೇ ಭಾಗದಲ್ಲಿನ ಮೂಲಭೂತ ಕರ್ತವ್ಯಗಳ ವಿಧಿ 51ಎ(ಎಚ್) ಅನುಸಾರ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿಜ್ಞಾನ ವಸ್ತು ಪ್ರದರ್ಶನದ ವೇಳೆ ಬೆಳಕು ಮತ್ತು ಉಷ್ಣ, ಕಾಂತಗಳು, ಮಳೆ ನೀರು ಕೊಯ್ಲು, ಪವನ ವಿದ್ಯಉತ್ ಉತ್ಪಾದನೆ, ಸೌರಶಕ್ತಿ ಉತ್ಪಾದನೆ, ಚಂದ್ರಯಾನ, ಹಸಿಕಸ ಮತ್ತು ಒಣಕಸ ಬೇರ್ಪಡಿಸುವ ಕ್ರಿಯಾತ್ಮಕ ಮಾದರಿಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಮುಖ್ಯಶಿಕ್ಷಕ ಎಚ್.ವೈ. ಓಲೇಕಾರ, ಶಿಕ್ಷಕರಾದ ವಿ.ಟಿ. ಎಲಿ, ಎಂ.ಬಿ. ಬಸಮ್ಮ ಮತ್ತು ಶಾಲೆ ಗುರುವೃಂದ ಉಪಸ್ಥಿತರಿದ್ದರು.ಪ್ರತಿಯೊಬ್ಬರೂ ಕ್ರೀಡೆಗೆ ಆದ್ಯತೆ ನೀಡಲಿ

ಶಿಗ್ಗಾಂವಿ: ಪ್ರಸ್ತುತ ಯುಗದಲ್ಲಿ ಸ್ಥಳೀಯ ಕ್ರೀಡೆಗಳು ಮತ್ತು ಸ್ಪರ್ಧೆಗಳ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು ಎಂದು ತಾಪಂ ಮಾಜಿ ಸದಸ್ಯ ಕೆ.ಎಸ್. ಭಗಾಡೆ ತಿಳಿಸಿದರು.

ತಾಲೂಕಿನ ಹಿರೇಮಣಕಟ್ಟಿಯಲ್ಲಿ ಮುರಘೇಂದ್ರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ವಿಶ್ವಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.ಸ್ಥಳೀಯ ಕ್ರೀಡೆಗಳು ಸಂಸ್ಕೃತಿ, ಪರಂಪರೆ ಮತ್ತು ಸಮುದಾಯದ ಏಕತೆ ಪ್ರತಿಬಿಂಬಿಸುತ್ತವೆ. ಅವು ಶಾರೀರಿಕ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸಹಾಯಕವಾಗಿವೆ ಎಂದರು. ಉತ್ತಮ ಆಹಾರಕ್ಕಾಗಿ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸಲು ಹಾಗೂ ಯೋಗಾಭ್ಯಾಸ ಮಾಡಲು ಮುಂದಾಗಬೇಕು ಎಂದರು.ಗಣ್ಯರಾದ ಶಿವಯೋಗಿ ಚರಂತಿಮಠ, ವಿರೂಪಾಕ್ಷಪ್ಪ ಪಟ್ಟೆದ್, ಸಿದ್ದಪ್ಪ ಹರಿಜನ, ರಾಮಣ್ಣ ಕಮಡೊಳ್ಳಿ, ಗೂಳಪ್ಪ ಜಾರಗಡ್ಡಿ, ಬಸವಂತಪ್ಪ ವಾಲ್ಮೀಕಿ, ವಿರೂಪಾಕ್ಷಪ್ಪ ಅಂಗಡಿ, ಶಿವಪ್ಪ ಬಿಸ್ಟನ್ನವರ್, ರಾಮಣ್ಣ ಹುಲ್ಲೂರು, ಶಿವನಗೌಡ್ ನಿಂಗನಗೌಡ್ರ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...