ನರಗುಂದ: ಇಂದಿನ ಸಮಾಜದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಆಚಾರ, ವಿಚಾರ, ಸಂಸ್ಕಾರ ನೀಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕನವರು ಹೇಳಿದರು.
ಅವರು ಭಾನುವಾರ ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜಗದಂಬಾ ಸರಸ್ವತಿ ಮಮ್ಮಾ ಅವರ ಸ್ಮೃತಿ ದಿವಸ ಕಾರ್ಯಕ್ರಮದ ಅಂಗವಾಗಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗೆ ಸನ್ಮಾನ ಮಾಡಿ, ಆನಂತರ ಮಾತನಾಡಿದರು. ನಮ್ಮ ಸಂಸ್ಥೆ 1936ರಲ್ಲಿ ಭಕ್ತರ ಉದ್ಧಾರಕ್ಕೆ ಪ್ರಾರಂಭವಾಯಿತು. ಜಗದಂಬಾ ಸರಸ್ವತಿ ಮಮ್ಮಾ ಅವರು ಕೇವಲ 14 ವರ್ಷದವರಿದ್ದಾಗ ಈ ಸಂಸ್ಥೆಯ ಸೇರಿ ಜಪ, ತಪಸ್ಸಿನ ಶಕ್ತಿಯಿಂದ ಸಾಕಷ್ಟು ಈ ಸಂಸ್ಥೆಯನ್ನು ಬೆಳೆಸಿದರು. ಸದ್ಯ ನಮ್ಮ ಸಂಸ್ಥೆ 142 ದೇಶಗಳಲ್ಲಿ ಆಧ್ಯಾತ್ಮಕವಾಗಿ ಪ್ರವಚನ, ಜಪ, ತಪಸ್ಸುಗಳ ಬಗ್ಗೆ ಜನರಿಗೆ ತಿಳಿಸುವ ಸೇವೆ ಮಾಡುತ್ತಿದೆ ಎಂದು ಹೇಳಿದರು.ಮಕ್ಕಳು ಕೇವಲ ರ್ಯಾಂಕ್ ಪಡೆದರೆ ಸಾಲದು. ಅವರು ಜೀವನ ನಡೆಸುವ ಕಲೆ ಅರಿಯಬೇಕು ಎಂದು ಪ್ರಭಕ್ಕ ಅವರು ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದ ಭಕ್ತರು ಪ್ರತಿ ವರ್ಷ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪಾದಯಾತ್ರೆ ಮಾಡುತ್ತಿದ್ದು, ಭಕ್ತರನ್ನು ಗೌರವಿಸಿದರು.ಕಾರ್ಯಕ್ರಮದಲ್ಲಿ ಚನ್ನಯ್ಯ ಪರ್ವತದೇವರಮಠ, ಬಸಯ್ಯ ಹಿರೇಮಠ, ನೇತಾಜಿಗೌಡ ಕೆಂಪನಗೌಡ್ರ, ರುದ್ರಗೌಡ ಕೆಂಚನಗೌಡ್ರ, ಈಶ್ವರ ಮುಗಳಿ, ಯಲ್ಲಪ್ಪ ಮರ್ಚಪ್ಪನವರ, ಬಸಪ್ಪ ಲದ್ದಿ, ಗುರುಪ್ಪ ಚಂದಣ್ಣವರ, ಬಸವರಾಜ ಬ್ಯಾಳಿ, ಶಂಕರಣ್ಣ ಇಂಗಳಳ್ಳಿ, ಉಮೇಶ ಸುಬೇದಾರ, ತಾನೇಜಿ ತವೈತಾಡ, ಗಿರೀಶ, ಅಶೋಕ ಎಲಿ, ಜಯಶ್ರೀ ಗಡಾದ, ಸುಧಾ ಮುದೋಳೆ, ಶಾರದಾ ನಾಶಿ, ವಿಶಾಲ ವಾಳದ, ನಂದಾ ಕೋರಿ ಮತ್ತಿತರರು ಉಪಸ್ಥಿತರಿದ್ದರು.