ಪ್ರಕರಣಗಳ ಇತ್ಯರ್ಥಕ್ಕೆ ಪಕ್ಷಗಾರರು ಮುಂದಾಗಲಿ

KannadaprabhaNewsNetwork |  
Published : Sep 16, 2025, 12:04 AM IST
ಲೋಕ ಅದಾಲತ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಕ್ಷಗಾರರ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಿ, ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರದಿಂದ 3 ತಿಂಗಳಿಗೊಮ್ಮೆ ಲೋಕ್ ಅದಾಲತ್‌ನ್ನು ನಡೆಸುತ್ತಿದೆ. ಪಕ್ಷಗಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು 5 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಕ್ಷಗಾರರ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಿ, ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರದಿಂದ 3 ತಿಂಗಳಿಗೊಮ್ಮೆ ಲೋಕ್ ಅದಾಲತ್‌ನ್ನು ನಡೆಸುತ್ತಿದೆ. ಪಕ್ಷಗಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು 5 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ರಾಮಮೂರ್ತಿ.ಎನ್ ಅವರು ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದವರ ಎರಡೂ ಪಕ್ಷಗಳಿಗೆ ತಿಳುವಳಿಕೆ ಹೇಳಿ, ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮದುವೆಯಾಗಿ ಎರಡು ವರ್ಷಕ್ಕೆ ಕೋರ್ಟ್‌ ಮೆಟ್ಟಿಲೇರಿದ್ದ ಮಹಿಳೆ, ತನ್ನ ಪತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಒಂದು ವರ್ಷದಲ್ಲಿ 9 ಬಾರಿ ನ್ಯಾಯಾಲಯಕ್ಕೆ ಅಲೆದಿದ್ದರು. ದಂಪತಿಗಳಿಬ್ಬರೂ ದೂರಾಗುವ ಸಂಭವವಿತ್ತು. ಕೌಟುಂಬಿಕ ದೌರ್ಜನ್ಯದ ಅಡಿ ದಾಖಲಾಗಿದ್ದ ಪ್ರಕರಣ ರಾಜೀ ಸಂಧಾನದ ಮೂಲಕ ಸುಖಾಂತ್ಯ ಕಂಡು ದಂಪತಿ ಮಧ್ಯೆ ಮಂದಹಾಸ ಮೂಡಿದೆ. ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 7739 ಪ್ರಕರಣಗಳ ಪೈಕಿ 2516 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಅವುಗಳಲ್ಲಿ ಒಟ್ಟು 1420 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಜೊತೆಗೆ ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು ಹಾಗೂ ಬ್ಯಾಂಕ್‌ ಪ್ರಕರಣಗಳು ಸೇರಿ ಒಟ್ಟು 981 ಪ್ರಕರಣಗಳಲ್ಲಿ 183 ಪ್ರಕರಣಗಳು ರಾಜಿ ಸಂಧಾನದ ಮೂಲಕ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸಚಿನ್ ಕೌಸಿಕ್ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಅವರು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.ಈ ವೇಳೆ ವಕೀಲರಾದ ಎಂ.ಬಿ.ಬಿರಾದಾರ ಮತ್ತು ಆರ್.ವೈ.ನಾಲತವಾಡ ಮಾತನಾಡಿ, ಲೋಕ್ ಅದಾಲತ್‌ನಿಂದ ಪಕ್ಷಗಾರರಿಗೆ ಆಗುವ ಲಾಭಗಳ ಬಗ್ಗೆ ವಿವರಿಸಿದರು. ಅದಾಲತ್‌ನಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ಎಚ್.ಜಿ.ನಾಗೋಡ, ಎನ್.ಬಿ.ಮುದ್ನಾಳ ಹಾಗೂ ಎಂ.ಆರ್.ಮುಜಾವರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ನ್ಯಾಯವಾದಿಗಳಾದ ವಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಂ.ಎಸ್.ನಾವದಗಿ, ಎಸ್.ಎಂ.ಗುಡದಿನ್ನಿ, ಎಸ್.ಆರ್.ಸಜ್ಜನ, ಎನ್.ಜಿ.ಕುಲಕರ್ಣಿ, ಎನ್.ಆರ್.ಮೋಕಾಶಿ, ಎಂ.ಆರ್.ಪಾಟೀಲ, ಸಂಗಮೇಶ ಹೂಗಾರ, ನ್ಯಾಯವಾದಿಗಳಾದ ಎಸ್.ಆರ್.ಜೋಗಿ, ಚೇತನ ಶಿವಶಿಂಪಿ, ಎಸ್.ಎಂ.ಕಿಣಗಿ, ಬಿ.ಎ.ಚಿನಿವಾರ, ಆರ್.ಎಸ್.ತುಪ್ಪದ, ಸಂತೋಷ ಎಚ್.ಎಂ, ಸಾಬಣ್ಣ ಚಳ್ಳಗಿ, ಬಿ.ಎಮ್.ಮುಂದಿನಮನಿ, ಎಲ್.ಆರ್.ನಾಲತವಾಡ, ಐ.ಎಸ್.ಹಗಟಗಿ, ಎಲ್.ಎಸ್.ಮೇಟಿ, ಬಿ.ವೈ.ಮೇಟಿ, ಎಂ.ಎ.ಲಿಂಗಸೂರ, ಎಂ.ಎಲ್.ರಿಸಾಲದಾರ, ಬಿ.ಎ.ನಾಡಗೌಡರ, ಪಿ.ಬಿ.ಜಾಧವ, ಎಚ್.ಎಚ್.ಬಡಿಗೇರ, ಎಸ್.ಸಿ.ಹಿರೇಮಠ, ಎಸ್.ಇ.ಹಿರೇಮಠ, ಸಿದ್ದನಗೌಡ ಬಿರಾದಾರ, ಬಿ.ಪಿ.ಮ್ಯಾಗೇರಿ, ಶೋಭಾ ಪಾಟೀಲ, ಶ್ರೀದೇವಿ ರಾಜೂರ, ರೇಣುಕಾ ಪಾಟೀಲ, ಪೂರ್ಣಿಮಾ ಮೇಟಿ, ಶಿವು ದಡ್ಡಿ, ವಿರೇಶ ಬಿರಾದಾರ, ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ