ಸಾಮಾಜಿಕ ಸಮಸ್ಯೆಗಳ ಮೇಲೆ ಕವಿ ಬೆಳಕು ಚೆಲ್ಲಲಿ

KannadaprabhaNewsNetwork |  
Published : Apr 01, 2026, 03:00 AM IST
ನಿಲಜಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಸಾಹಿತ್ಯ ಕೇವಲ ಕಲ್ಪನಾ ಲೋಕವಲ್ಲ, ಅದು ಶೋಷಿತರ, ಮಹಿಳೆಯರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಬೇಕು. ಅಂದಾಗ ಮಾತ್ರ ಸಾಹಿತ್ಯ ಶ್ರೀಮಂತವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕವಿ ತನ್ನ ಕವಿತ್ವದ ಮೂಲಕ ವರ್ತಮಾನದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಾಹಿತ್ಯ ಕೇವಲ ಕಲ್ಪನಾ ಲೋಕವಲ್ಲ, ಅದು ಶೋಷಿತರ, ಮಹಿಳೆಯರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಬೇಕು. ಅಂದಾಗ ಮಾತ್ರ ಸಾಹಿತ್ಯ ಶ್ರೀಮಂತವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕವಿ ತನ್ನ ಕವಿತ್ವದ ಮೂಲಕ ವರ್ತಮಾನದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಆಯೋಜಿಸಿದ್ದ ಸಾಹಿತಿ, ಸಹಶಿಕ್ಷಕಿ ಗೀತಾ ಸುಭಾಷ ಬಸ್ತವಾಡ(ಶೇಠಿ) ವಿರಚಿತ ಗೀತ-ಗುಚ್ಛ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಸಂವೇದನೆಗಳು ಇಂದು ಹೊಸ ಆಯಾಮ ಪಡೆಯುತ್ತಿವೆ. ಸ್ತ್ರೀವಾದಿ ಚಿಂತನೆಗಳು ಕೇವಲ ಪ್ರತಿರೋಧವಲ್ಲ, ಅವು ಸಮಾನತೆಯ ಹಾದಿಯನ್ನು ತೋರಿಸುವ ಬೆಳಕು. ಹಾಗಾಗಿ, ಸಾಹಿತ್ಯ ಲಿಂಗ ಸಮಾನತೆ-ಸಾಮಾಜಿಕ ನ್ಯಾಯದ ಧ್ವನಿಯೂ ಆಗಬೇಕು ಎಂದು ಆಶಿಸಿದರು.ಬರೆಯುವ ಕೈಗಳಿಗೆ ಸತ್ಯ ಹೇಳುವ ಧೈರ್ಯವಿರಬೇಕು. ಕೇಳುವ ಕಿವಿಗೆ ವಿಮರ್ಶೆ ಸ್ವೀಕರಿಸುವ ಸಂಯಮವಿರಬೇಕು. ಸಾಹಿತ್ಯದ ಕೊಂಡಿ ಕಳಚುತ್ತಿರುವ ಹೊತ್ತಿನಲ್ಲಿ ಮಾರ್ಗದರ್ಶನ ಮಾಡುವ ಸಾಹಿತ್ಯ ಕೃಷಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಹಿತ್ಯ ಮನರಂಜನೆ ಸಾಧನ ಮಾತ್ರವಲ್ಲ, ಸಮಾಜ ತಿದ್ದುವ ಮತ್ತು ಚರಿತ್ರೆ ದಾಖಲಿಸುವ ಪ್ರಬಲ ಮಾಧ್ಯಮ. ಇದರ ಬಗ್ಗೆ ಬದ್ಧತೆ ಇರಬೇಕು. ಯುವ ಲೇಖಕರು ಕೇವಲ ಅಕ್ಷರ ಜೋಡಿಸದೆ, ಸಮಾಜದ ನೋವುಗಳಿಗೆ ಸ್ಪಂದಿಸಬೇಕು ಎಂದು ಮಹಾವೀರ ನಿಲಜಗಿ ಸಲಹೆ ನೀಡಿದರು.ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಕಾವ್ಯ ಜಗತ್ತಿಗೆ ಯುದ್ಧೋನ್ಮಾದ ನಿಯಂತ್ರಿಸುವ ವಸ್ತುವಾಗಿಸಿಕೊಂಡು ಜಾಗೃತಿ ಮೂಡಿಸಿ, ಶಾಂತಿ ಸೌಹಾರ್ದತೆಯ ಶಸ್ತ್ರಾಸ್ತ್ರಗಳಾಗಬೇಕು. ಇಂದಿನ ಸಾಹಿತ್ಯ ಕ್ಷೇತ್ರಕ್ಕೆ ಕೇವಲ ಸೃಜನಶೀಲ ಬರವಣಿಗೆಯಷ್ಟೇ ಅಲ್ಲ, ವಾಸ್ತವವನ್ನು ತೆರೆದಿಡುವ ಗಂಭೀರ ಸಂಶೋಧನೆಗಳ ಅಗತ್ಯವಿದೆ. ಸಾಹಿತ್ಯಿಕ ಚರ್ಚೆಗಳು ಸಭಾಂಗಣಕ್ಕೆ ಸೀಮಿತವಾಗದೇ ಸಾಮಾನ್ಯ ಜನರನ್ನು ತಲುಪುವಂತಾಗಬೇಕು ಎಂದರು.ಕವನ ಸಂಕಲನ ವಿರಚಿತ ಸಾಹಿತಿ ಗೀತಾ ಬಸ್ತವಾಡ ಹಾಗೂ ಸುಭಾಷ ಬಸ್ತವಾಡ ದಂಪತಿಯನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ವಿಜಯ ರವದಿ, ಚಿಕ್ಕೋಡಿ ಡಿವೈಪಿಸಿ ರೇವತಿ ಮಠದ, ಕ್ಷೇತ್ರ ಸಮನ್ವಯ ಅಧಿಕಾರಿ ಎ.ಎಸ್.ಪದ್ಮಣ್ಣವರ, ನಿವೃತ್ತ ಉಪನ್ಯಾಸಕ ಪ್ರೊ.ಪಿ.ಜಿ.ಕೊಣ್ಣೂರ, ಅರಿಹಂತ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಚೌಗಲಾ, ಕಸಾಪ ಪದಾಧಿಕಾರಿ ನಂಜುಂಡಪ್ಪ, ಬಾಲಕೃಷ್ಣ ಕೋಳೆಕರ, ಮಹಾದೇವ ಕುಂಬಾರ, ಶಾಂತಾ ಬಸ್ತವಾಡ, ಸುರೇಖಾ ಶೇಠಿ ಮತ್ತಿತರರು ಉಪಸ್ಥಿತರಿದ್ದರು.ವಿಶ್ರಾಂತ ಉಪನ್ಯಾಸಕ ಡಾ.ರಾಜಶೇಖರ ಇಚ್ಚಂಗಿ ಕವನ ಸಂಕಲನ ಪರಿಚಯಿಸಿದರು. ಶಿಕ್ಷಕ ಎಂ.ಎನ್.ತೇರದಾಳೆ ಪ್ರಾರ್ಥಿಸಿದರು. ಚಿತ್ರಕಲಾ ಶಿಕ್ಷಕ ಎ.ಕೆ.ಬಡಿಗೇರ ಸ್ವಾಗತಿಸಿದರು. ಶಿಕ್ಷಕ ಸಿ.ಎಂ.ದರಬಾರೆ ನಿರೂಪಿಸಿದರು. ಸುಭಾಷ ಬಸ್ತವಾಡ ವಂದಿಸಿದರು. ಕವನ ಸಂಕಲನದಲ್ಲಿ 105 ಆಯ್ದ ಕವನಗಳಿದ್ದು ಆಧ್ಯಾತ್ಮ, ಹಬ್ಬಗಳು, ಪ್ರಕೃತಿ ಪ್ರೇಮ, ಋಣಾನುಬಂಧ, ಕನ್ನಡ ನಾಡು-ನುಡಿ ವೈಭವ, ವ್ಯಕ್ತಿ ವಿಶೇಷ, ಸಾಮಾಜಿಕ ಕಳಕಳಿ, ಪ್ರೀತಿ-ಪ್ರೇಮ-ಪ್ರಣಯ ಹೀಗೆ ಹಲವಾರು ಮಜಲುಗಳನ್ನು ಕವನ ಸಂಕಲನ ಒಳಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಕೆಯಲ್ಲಿ ಸಗರ ಸೇವಕ ದಿನೇಶ ಪ್ರತಿಭಟನೆ
ಚನ್ನಮ್ಮ ಸಮಾಧಿ ಅಭಿವೃದ್ಧಿಗೆ ಬೃಹತ್‌ ಹೋರಾಟ