- ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರು । ಬಿಎಲ್ಒಗಳಿಗೆ ಅಗತ್ಯ ಎಲ್ಲ ಫಾರಂ ಮುದ್ರಿಸಿ ವಿತರಣೆ: ಡಿಸಿ ಗಂಗಾಧರ ಸ್ವಾಮಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್‌ಐಆರ್‌) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬುತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜೂನ್ 30ರಿಂದಲೇ ಎನುಮೆರೇಷನ್ ಫಾರಂಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ಈ ಮಾಹಿತಿ ಸಂಗ್ರಹ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಜೂನ್ 30ರಿಂದ ಜುಲೈ 29 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಜೂನ್ 16 ರವರೆಗೆ ಒಟ್ಟು 14,99,282 ಮತದಾರರಿದ್ದು, ಬಿಎಲ್ಒಗಳಿಗೆ ಅಗತ್ಯವಿರುವ ಎಲ್ಲ ಫಾರಂಗಳನ್ನು ಮುದ್ರಿಸಿ ವಿತರಿಸಲಾಗಿದೆ. ಗಣತಿ ನಮೂನೆ ಡಿಜಿಟಲೀಕರಣದಲ್ಲಿ ಶೇ.56ರಷ್ಟು ಸಾಧನೆ ಮಾಡಲಾಗಿದೆ ಎಂದಿದ್ದಾರೆ.


ವಿಧಾನಸಭಾವಾರು ನಮೂನೆ ವಿತರಣೆ- ಗಣಕೀಕರಣ ಪ್ರಗತಿ:

ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು ಒಟ್ಟು 14,99,282 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 8,28,097 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಕ್ಷೇತ್ರವಾರು ವಿವರ:

103-ಜಗಳೂರು: ಒಟ್ಟು 2,00,836 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲಾ 2,00,836 ನಮೂನೆಗಳನ್ನು ವಿತರಿಸಲಾಗಿದ್ದು, 1,15,912 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, ಎಲ್ಲಾ 2,11,023 ನಮೂನೆಗಳನ್ನು ವಿತರಿಸಲಾಗಿದ್ದು, 1,41,875 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, ಎಲ್ಲಾ 2,58,718 ನಮೂನೆಗಳನ್ನು ವಿತರಿಸಲಾಗಿದ್ದು, 76,613 ನಮೂನೆಗಳನ್ನು ಗಣಕೀಕರಿಸಲಾಗಿದೆ.

107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, ಎಲ್ಲಾ 2,27,996 ನಮೂನೆಗಳನ್ನು ವಿತರಿಸಲಾಗಿದ್ದು, 79,545 ನಮೂನೆಗಳನ್ನು ಗಣಕೀಕರಿಸಲಾಗಿದೆ. 108-ಮಾಯಕೊಂಡ : ಒಟ್ಟು 1,97,048 ಮತದಾರರಿದ್ದು, ಎಲ್ಲಾ 1,97,048 ನಮೂನೆಗಳನ್ನು ವಿತರಿಸಲಾಗಿದ್ದು, 1,54,951 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ : ಒಟ್ಟು 2,03,628 ಮತದಾರರಿದ್ದು, ಎಲ್ಲಾ 2,03,628 ನಮೂನೆಗಳನ್ನು ವಿತರಿಸಲಾಗಿದ್ದು, 1,36,189 ನಮೂನೆಗಳನ್ನು ಗಣಕೀಕರಿಸಲಾಗಿದೆ. 110-ಹೊನ್ನಾಳಿ : ಒಟ್ಟು 2,00,033 ಮತದಾರರಿದ್ದು, ಎಲ್ಲ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,23,012 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಸ್ಥಳಾಂತರ, ಮರಣ, ದ್ವಿಪತಿ ಮತದಾರರ ಗುರುತಿಸುವಿಕೆ ಪ್ರಗತಿ:

ಮನೆ ಮನೆ ಭೇಟಿ ಸಂದರ್ಭದಲ್ಲಿ ಜುಲೈ 14ರವರೆಗೆ ಜಿಲ್ಲಾದ್ಯಂತ ಒಟ್ಟು 16,683 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 254 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 6431 ಶಾಶ್ವತ ವಲಸೆ, 7085 ಮರಣ ಪ್ರಕರಣ, 2838 ದ್ವಿಪ್ರತಿ ನಮೂನೆಗಳು ಹಾಗೂ 75 ಇತರೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಕ್ಷೇತ್ರವಾರು ವಿವರ:

ಜಗಳೂರು ಕ್ಷೇತ್ರದಲ್ಲಿ ಒಟ್ಟು 1722 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 34 ಸಂಗ್ರಹವಾಗದ, 754 ಶಾಶ್ವತ ವಲಸೆ, 573 ಮರಣ, 353 ದ್ವಿಪ್ರತಿ ಹಾಗೂ 8 ಇತರೆ ಪ್ರಕರಣಗಳಿವೆ. ಹರಿಹರ ಕ್ಷೇತ್ರದಲ್ಲಿ ಒಟ್ಟು 2265 ಪ್ರಕರಣಗಳು ಪತ್ತೆಯಾಗಿದ್ದು, 17 ಸಂಗ್ರಹವಾಗದ, 592 ಶಾಶ್ವತ ವಲಸೆ, 1172 ಮರಣ, 479 ದ್ವಿಪ್ರತಿ ಮತ್ತು 5 ಇತರೆ ಪ್ರಕರಣಗಳಿವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಒಟ್ಟು 2049 ಪ್ರಕರಣಗಳಿದ್ದು, 22 ಸಂಗ್ರಹವಾಗದ, 694 ಶಾಶ್ವತ ವಲಸೆ, 1028 ಮರಣ, 291 ದ್ವಿಪ್ರತಿ ಹಾಗೂ 14 ಇತರೆ ಪ್ರಕರಣಗಳಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 1681 ಪ್ರಕರಣಗಳಿದ್ದು, 51 ಸಂಗ್ರಹವಾಗದ, 437 ಶಾಶ್ವತ ವಲಸೆ, 689 ಮರಣ, 493 ದ್ವಿಪ್ರತಿ ಹಾಗೂ 11 ಇತರೆ ಪ್ರಕರಣಗಳಿವೆ. ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 3578 ಪ್ರಕರಣಗಳಿದ್ದು, 76 ಸಂಗ್ರಹವಾಗದ, 1399 ಶಾಶ್ವತ ವಲಸೆ, 1558 ಮರಣ, 531 ದ್ವಿಪ್ರತಿ ಹಾಗೂ 14 ಇತರೆ ಪ್ರಕರಣಗಳಿವೆ. ಚನ್ನಗಿರಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ 2525 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 34 ಸಂಗ್ರಹವಾಗದ, 1211 ಶಾಶ್ವತ ವಲಸೆ, 845 ಮರಣ, 418 ದ್ವಿಪ್ರತಿ ಹಾಗೂ 17 ಇತರೆ ಪ್ರಕರಣಗಳು ಸೇರಿವೆ. ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 2863 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 20 ಸಂಗ್ರಹವಾಗದ, 1344 ಶಾಶ್ವತ ವಲಸೆ, 1220 ಮರಣ, 273 ದ್ವಿಪ್ರತಿ ಹಾಗೂ 06 ಇತರೆ ಪ್ರಕರಣಗಳು ಒಳಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

- - -

-14ಕೆಡಿವಿಜಿ39: ಜಿ.ಎಂ. ಗಂಗಾಧರ ಸ್ವಾಮಿ