ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಮಸ್ಕಿ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಹಮಾಲ ರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ದಿನವಿಡೀ ಮೈಮುರಿದು ದುಡಿಯುವ ಶ್ರಮಿಕ ವರ್ಗದ ಹಮಾಲರು ಕಾಯಕ ಮಾಡುವ ಮೂಲಕ ಸುಂದರವಾದ ಬದುಕು ಕಟ್ಟಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ದೇವರಾಜ್ ಮಡಿವಾಳರ, ಈಗಾಗಲೇ 350 ಮಂದಿ ಅರ್ಹ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಮಾಲಿ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಭರವಸೆಕೊಟ್ಟರು.ಈ ಸಂದರ್ಭದಲ್ಲಿ ಎಐಸಿಸಿಟಿಯು ಅಧ್ಯಕ್ಷ ಚಾಂದ್ಸಾಬ ಬೆಳ್ಳಿಗನೂರು, ಎಐಎಆರ್‌ಎಲ್‌ಎ ಜಿಲ್ಲಾ ಸಂಘದ ಅಧ್ಯಕ್ಷ ಗಂಗಪ್ಪ ತೊರಣದನ್ನಿ, ಮಹಿಬೂಬಸಾಬ್ ಮುದ್ದಾಪೂರು, ಹನುಮಂತ ದಿನ್ನಿಸಮುದ್ರ, ಬಸವರಾಜ, ರಾಮಣ್ಣ ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.