ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಸಂಘಟನೆಯ ಶಕ್ತಿ ಬಳಕೆಯಾಗಲಿ

KannadaprabhaNewsNetwork |  
Published : Jan 17, 2026, 03:30 AM IST
ಕುರುಗೋಡು ೦೧ ಪಟ್ಟಣದ ಶುಕ್ರವಾರ ಡಿಎಸ್‌ಎಸ್ ತಾಲ್ಲೂಕು ಘಟಕವನ್ನು ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ ಉದ್ಘಾಟಿಸಿದರು | Kannada Prabha

ಸಾರಾಂಶ

ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಸಂಘಟನೆಯಲ್ಲಿ ಗುರುತಿಸಿಕೊಂಡು ಸರಿದಾರಿಯಲ್ಲಿ ನಡೆದು ಸಮಾಜಕ್ಕೆ ಆದರ್ಶವಾಗಬೇಕು. ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ಕೊಡಿಸುವ ಕೆಲಸ

ಕುರುಗೋಡು: ಸಂಘಟನೆಯ ಶಕ್ತಿ ದುರುದ್ದೇಶ ಮತ್ತು ದ್ವೇಷ ಸಾಧನೆಗಾಗಿ ಬಳಕೆಯಾಗದೇ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಿ ಎಂದು ಪಿಎಸ್‌ಐ ಸುಪ್ರಿತ್ ಸಲಹೆ ನೀಡಿದರು.

ಇಲ್ಲಿನ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್ ಡಿಜೆಸಾಗರ್ ಬಣ) ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಸಂಘಟನೆಯಲ್ಲಿ ಗುರುತಿಸಿಕೊಂಡು ಸರಿದಾರಿಯಲ್ಲಿ ನಡೆದು ಸಮಾಜಕ್ಕೆ ಆದರ್ಶವಾಗಬೇಕು. ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ಕೊಡಿಸುವ ಕೆಲಸ ಎಂದರು.

ದಲಿತ ಸಂಘರ್ಷ ಸಮಿತಿ (ಡಿಜೆ ಸಾಗರ್ ಬಣ) ಜಿಲ್ಲಾ ಸಮಿತಿ ಸಂಘಟನಾ ಸಂಚಾಲಕ ಗಂಗಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿ ಸಂಘಟನೆ ಪರಿಶಿಷ್ಟರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ವರ್ಗದ ಶೋಷಿತರ ನೋವಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ. ನೊಂದವರು ಸಂಘಟನೆ ಎದುರು ನೋವು ತೋಡಿಕೊಂಡರೆ ಅವರಿಗೆ ಸ್ಪಂದಿಸುವ ಕೆಲಸ ಮಾಡಲಿದೆ ಎಂದರು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ ಮಾತನಾಡಿದರು.

ತಾಲ್ಲೂಕು ಸಂಚಾಲಕ ಎಚ್.ಬಸವರಾಜ, ಖಜಾಂಚಿ ಎಚ್. ತಿಮ್ಮಪ್ಪ, ಸಂಘಟನಾ ಸಂಚಾಲಕರಾದ ಬಿ. ಬಾಬು, ಎಚ್.ರಾಮಾಂಜಿನಿ, ಎಚ್.ಕರಿಯಪ್ಪ, ಬಿಳಿಬಾಯಪ್ಪ, ಎಚ್. ಕರಿಬಸವ ಮತ್ತು ಎಸ್.ರಾಮಪ್ಪ ಇದ್ದರು.

ಕುರುಗೋಡು ಪಟ್ಟಣದ ಶುಕ್ರವಾರ ಡಿಎಸ್‌ಎಸ್ ತಾಲೂಕು ಘಟಕವನ್ನು ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!
ತನಗೆ ಮದುವೆ ಮಾಡಿದ್ದ ಪುರೋಹಿತಗೂ ರಾಜೀವ್‌ ಲಾಂಗ್‌ ತೋರಿಸಿ ಧಮ್ಕಿ