ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಕೊನೆಗಾಣಲಿ

KannadaprabhaNewsNetwork |  
Published : May 27, 2025, 12:54 AM IST
ಕೆ ಕೆ ಪಿ ಸುದ್ದಿ 02: ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ವಿಕಾಸ್ ನೇತೃತ್ವ ದಲ್ಲಿ ದಲಿತ ಸಮುದಾಯದ ಕುಂದು- ಕೊರತೆ ಸಭೆ ನಡೆಸಲಾಯಿತು.  | Kannada Prabha

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ಆಸ್ಪೃಶ್ಯತೆ ಆಚರಣೆ ಆಗದಂತೆ ತಡೆಗಟ್ಟಲು ಹಾಗೂ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಆಗದಂತೆ ತಡೆಗಟ್ಟಲು ಸಂವಿಧಾನದ ಅಡಿ ಕಾನೂನು ರೂಪಿತವಾಗಿದ್ದು ತಾಲೂಕಿನಲ್ಲಿ ಅಸ್ಪೃಶ್ಯ ಆಚರಣೆಗಳು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಕನಕಪುರ

ಸಮಾಜದಲ್ಲಿ ಅಸ್ಪಶ್ಯತೆ ಆಚರಣೆ ಸಂಪೂರ್ಣ ನಿವಾರಣೆಯಾಗಬೇಕಾದರೆ ಮೊದಲು ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ವಿಕಾಸ್ ತಿಳಿಸಿದರು.

ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ದಲಿತ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಆಸ್ಪೃಶ್ಯತೆ ಆಚರಣೆ ಆಗದಂತೆ ತಡೆಗಟ್ಟಲು ಹಾಗೂ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಆಗದಂತೆ ತಡೆಗಟ್ಟಲು ಸಂವಿಧಾನದ ಅಡಿ ಕಾನೂನು ರೂಪಿತವಾಗಿದ್ದು ತಾಲೂಕಿನಲ್ಲಿ ಅಸ್ಪೃಶ್ಯ ಆಚರಣೆಗಳು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಮಶಾನದ ಕೊರತೆ ಇರುವ ಕಡೆಗಳಲ್ಲಿ ಜಾಗ ಗುರುತಿಸಿಲು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಭೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ರವರು ಕಂದಾಯ ಇಲಾಖೆ ಹಾಗೂ ಪೋಲಿಸ್ ಇಲಾಖೆಗೆ ಸೂಚನೆ ನೀಡಿರುವುದರಿಂದ ಸ್ಮಶಾನಕ್ಕೆ ಜಾಗದ ಕೊರತೆಯಾಗದಂತೆ ತಾಲೂಕು ಆಡಳಿತ ಹಾಗೂ ನಾವು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್ ಮಾತನಾಡಿ, ದಲಿತ ಕಾಲೋನಿ ಜನರಿಗೆ ಸಂವಿಧಾನ ಮತ್ತು ಕಾನೂನು ಪಾಲನೆಯ ಬಗ್ಗೆ ಬಗ್ಗೆ ತಿಳಿಸಿ ಕೊಡಲು ಕಾಲೋನಿಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಬೇಕೆಂದು ಸಲಹೆ ನೀಡಿದರು.

ಶೇಷಣ್ಣ, ಗ್ರಾಮಾಂತರ ಠಾಣೆ ಎಸ್ಐ ಆಕಾಶ್, ಕೋಡಿಹಳ್ಳಿ ಎಸ್ಐ ಪ್ರದೀಪ್‌ ಕುಮಾರ್, ಸಾತನೂರು ಎಸ್ಐ ದುರ್ಗೇಗೌಡ, ಅಪರಾಧ ವಿಭಾಗದ ಎಸ್ಐ ರುದ್ರಪ್ಪ, ಕೋಡಿಹಳ್ಳಿ ಎಸ್ಐ ರಾಮಕೃಷ್ಣ ರಾವ್, ದಲಿತ ಮುಖಂಡರಾದ ಜೆ.ಎಂ.ಶಿವಲಿಂಗಯ್ಯ, ಸಾತನೂರು ಮಲ್ಲಿಕಾರ್ಜುನ್, ಚುಂಚಿ ಕಾಲೋನಿ ಶಿವು, ಗೋಪಿ, ಪುಟ್ಟಸ್ವಾಮಿ ವೇಳೆ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02: ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ವಿಕಾಸ್ ನೇತೃತ್ವದಲ್ಲಿ ದಲಿತ ಸಮುದಾಯದ ಕುಂದುಕೊರತೆ ಸಭೆ ನಡೆಸಲಾಯಿತು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್