ಶಿಕಾರಿಪುರ: ಪೋಡಿ ಕಾರ್ಯಕ್ಕೆ, ದಾಖಲೆ ಡಿಜಿಟಲ್ ಮಾಡುವ ಕಾರ್ಯ ತಾಲೂಕಿನಲ್ಲಿ ವೇಗ ಪಡೆಯಬೇಕಿದೆ. ಸರ್ವೆ ಇಲಾಖೆ ಕಾರ್ಯವೈಖರಿ ಕುರಿತು ಜನರು ಆರೋಪ ಹೆಚ್ಚಾಗಿದೆ. ಮನೆ ನಿರ್ಮಾಣಕ್ಕೆ ಜನರು ಅರಣ್ಯ, ಕಂದಾಯ ಜಮೀನಿನಲ್ಲಿ ಮಣ್ಣು ಪಡೆದರೆ ಅದಕ್ಕೆ ದುಬಾರಿ ದಂಡ ಹಾಕುವುದು ಬೇಡ. ಅದನ್ನೆ ದಂಧೆ ಮಾಡುವರಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಶಿಕಾರಿಪುರ: ಪೋಡಿ ಕಾರ್ಯಕ್ಕೆ, ದಾಖಲೆ ಡಿಜಿಟಲ್ ಮಾಡುವ ಕಾರ್ಯ ತಾಲೂಕಿನಲ್ಲಿ ವೇಗ ಪಡೆಯಬೇಕಿದೆ. ಸರ್ವೆ ಇಲಾಖೆ ಕಾರ್ಯವೈಖರಿ ಕುರಿತು ಜನರು ಆರೋಪ ಹೆಚ್ಚಾಗಿದೆ. ಮನೆ ನಿರ್ಮಾಣಕ್ಕೆ ಜನರು ಅರಣ್ಯ, ಕಂದಾಯ ಜಮೀನಿನಲ್ಲಿ ಮಣ್ಣು ಪಡೆದರೆ ಅದಕ್ಕೆ ದುಬಾರಿ ದಂಡ ಹಾಕುವುದು ಬೇಡ. ಅದನ್ನೆ ದಂಧೆ ಮಾಡುವರಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ಅಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಾವಿರಾರು ಕೋಟಿ ರು. ವ್ಯಯಿಸಿ ತಾಲೂಕಿನಲ್ಲಿ ಏತನೀರಾವರಿ ಯೋಜನೆ ಜಾರಿಗೊಳಿಸಿದೆ. ಅದರಿಂದ ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಇರುವಂತೆ ಮಾಡಲು ಆಗದಿದ್ದರೆ ಹೇಗೆ. ಅದಕ್ಕಾಗಿ ಹೊಸನೀತಿ ಜಾರಿಗೆ ಚಿಂತನೆ ನಡೆಸಬೇಕು ಎಂದರು. ತಾಲೂಕಿನ 290 ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದೆ ಆದರೂ ಬೇಸಿಗೆಯಲ್ಲಿ ಕೆರೆಗೆ ನೀರು ಹರಿಸಲು ಆಗುತ್ತಿಲ್ಲ. ಮಳೆಗಾಲದ ದಿನಗಳು, ನದಿಯಲ್ಲಿ ನೀರು ಹರಿಯುವ ವಾಸ್ತವತೆ ಆಧಾರದಲ್ಲಿ ಬೇಸಿಗೆ ಸಮೀಪಿಸುವ ಸಂದರ್ಭಕ್ಕೆ ಕೆರೆಗಳಿಗೆ ನೀರು ಹರಿಸಬೇಕು. ಆದರೆ, ಈಗಿನ ನಿಯಮ ಪ್ರಕಾರ ಮಳೆಗಾಲದಲ್ಲಿ ಮಾತ್ರ ನೀರೆತ್ತುವ ಕೆಲಸ ಆಗುತ್ತಿದೆ. ಕೊನೆ ನೀರು ಹರಿಸಿದ ನಂತರ ಕೆರೆ ನೀರು ಜನರು ಖಾಲಿ ಮಾಡುವುದಕ್ಕೆ ಅವಕಾಶ ನೀಡಬಾರದು. ಹೀಗೆ ಹಲವು ನಿಯಮ ಆಯಾ ವರ್ಷದ ಮಳೆ ಆಧಾರದಲ್ಲಿ ನೀತಿ ರೂಪಿಸಿ ಯೋಜನೆ ಯಶಸ್ವಿಗೊಳ್ಳುವಂತೆ ಮಾಡಬೇಕು ಎಂದು ಸೂಚಿಸಿದರು.ಜೆಜೆಎಂ, ಬಹುಗ್ರಾಮ ಕುಡಿಯುವ ನೀರು ಯೋಜನೆಗೂ ನೂರಾರು ಕೋಟಿ ರು. ವ್ಯಯಿಸಿದ್ದು ಅದಕ್ಕೆ ಅಂಜನಾಪುರ ಜಲಾಶಯ ನೀರು ನೆಚ್ಚಿಕೊಳ್ಳಲಾಗಿದೆ. ರೈತರ ಬೆಳೆಗೆ ನೀರು ನೀಡುವ ಜೊತೆ ಕುಡಿಯುವ ನೀರಿಗೂ ಆದ್ಯತೆ ನೀಡಬೇಕಿದೆ. ಈ ನಡುವೆ ಮಳೆ ಕೊರತೆಯಾದರೆ ಯೋಜನೆ ಗತಿಯೇನು ಈ ಕುರಿತು ಚಿಂತನೆ ನಡೆಸಬೇಕು. ಪರ್ಯಾರ ನೀರಿನ ಮೂಲಕ್ಕೆ ಚಿಂತನೆ ನಡೆಸಿ ವರದಿ ನೀಡುವಂತೆ ಉಪವಿಭಾಗಾಧಿಕಾರಿ ಯತೀಶ್ ಅವರಿಗೆ ಸೂಚಿಸಿದರು.
ರೈತರ ಬೋರ್‍ವೆಲ್‍ಗೆ ಬೇಸಿಗೆಯಲ್ಲಿ 7 ಗಂಟೆ ವಿದ್ಯುತ್ ನೀಡಬೇಕು, ಫೆ.11ಕ್ಕೆ ಶಿವಮೊಗ್ಗದಲ್ಲಿ ಮೆಸ್ಕಾಂ ಎಂ.ಡಿ. ಜತೆ ಸಭೆಯಿದ್ದು ಆ ವೇಳೆಗೆ ಸೊರಬ, ಶಿಕಾರಿಪುರ ತಾಲೂಕಿನ ಟಿಸಿ ರಿಪೇರಿ, ತುರ್ತು ಅಗತ್ಯ ಕಾಮಗಾರಿ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಸಮಗ್ರ ವರದಿ ಸಿದ್ಧಪಡಿಸಿರಿ ಅಲ್ಲಿಯೇ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದರು.ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ನಕಲು ಮಾಡಿಸುವುದು ಬೇಡ, ಮಕ್ಕಳಿಗೆ ಜ್ಞಾನ ನೀಡುವುದಕ್ಕೆ ಆದ್ಯತೆ ನೀಡಿರಿ ಶಿಕ್ಷಣಕ್ಕೆ ಹಲವು ಸೌಲಭ್ಯ ಸರ್ಕಾರ ನೀಡುತ್ತಿದೆ. ಮಕ್ಕಳು ಸರ್ಕಾರಿ ಶಾಲೆಗೆ ಬರುವಂತೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಪದವಿ ಹಂತದ ಶಿಕ್ಷಣಕ್ಕೆ ಹಾವೇರಿ, ಹೊನ್ನಾಳಿ, ಹಾನಗಲ್ ಜಿಲ್ಲೆಯ ವಿದ್ಯಾರ್ಥಿಗಳು ತಾಲೂಕಿಗೆ ಆಗಮಿಸುತ್ತಿದ್ದು ಅವರಿಗಾಗಿ ಹೆಚ್ಚುವರಿ 3 ಮಹಿಳಾ ವಸತಿ ನಿಲಯ ಮಂಜೂರಾತಿ ಮಾಡುವುದು ಅಗತ್ಯವಿದೆ. ಕೊಠಡಿಯಲ್ಲಿ ಹೆಚ್ಚು ಮಕ್ಕಳನ್ನು ಉಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ಬಿಸಿಎಂ ಅಕಾರಿ ಉಮೇಶ್ ಹೇಳಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಎಲ್ಲ ಇಲಾಖೆ ಹಿರಿಯ ಅಕಾರಿಗಳು, ಕೆಡಿಪಿ ಸದಸ್ಯ ಮಾರವಳ್ಳಿ ಉಮೇಶ್, ಮಂಜಪ್ಪ, ಲೋಕಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.