ಕನ್ನಡಪ್ರಭ ವಾರ್ತೆ ಬೀದರ್
ಈ ವೇಳೆ ನಿವೃತ್ತ ಸೈನಿಕ ಜಗದೀಶ ಸ್ವಾಮಿ ಮಾತನಾಡಿ, ಸೈನ್ಯದಲ್ಲಿ ಸೇರಿ 18 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದು ನುಡಿದರು.
ಎಬಿವಿಪಿ ಹಿರಿಯ ಮುಖಂಡರಾದ ರೇವಣಸಿದ್ದ ಜಾಡರ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಶೌರ್ಯ, ತ್ಯಾಗ, ಬಲಿದಾನದ ಸಂಕೇತವಾಗಿದೆ. ತಾರುಣ್ಯದಲ್ಲಿಯೇ ತಮ್ಮ ವೈಯಕ್ತಿಕ ಸುಖ ಭೋಗ ತ್ಯಜಿಸಿ ದೇಶಕ್ಕಾಗಿ ಕಾರ್ಗಿಲ್ ಯುದ್ದದಲ್ಲಿ 527 ಜನ ವೀರ ಯೋಧರು ಹುತಾತ್ಮರಾಗಿದ್ದರು. ಅವರ ತ್ಯಾಗ ಬಲಿದಾನ ಇಂದಿನ ಯುವ ಪೀಳಿಗೆಗೆ ಪ್ರೆರಣೆಯಾಗಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಭಾಷೆ, ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುವ, ಮಾದಕ ವಸ್ತುಗಳ ಮೂಲಕ ಯುವಶಕ್ತಿ ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದ್ದು ಯುವಶಕ್ತಿ ದೇಶದ ಸಂಪತ್ತಾಗಿದ್ದು ಅದನ್ನು ಅರಿತು ಜಾಗೃತರಾಬೇಕು. ಶಿಕ್ಷಣದ ಜೊತೆಗೆ ರಾಷ್ಟ್ರ ಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ದವಿಂದ್ರ ಹಂಚೆ, ಎಬಿವಿಪಿ ನಗರ ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ಕಾರ್ಯದರ್ಶಿ ಪವನ ಕುಂಬಾರ, ನಾಗರಾಜ ಸುಲ್ತಾನಪೂರ, ಸಾಯಿ ಭೋಸ್ಲೆ ರಾಜ್ಯ ಕಾರ್ಯಕಾರಣಿ ಸದಸ್ಯೆ ಪ್ರಾರ್ಥನಾ, ಮಮತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.