ಕನ್ನಡಪ್ರಭ ವಾರ್ತೆ ಹಾವೇರಿ
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸದಾಶಿವ ಆಯೋಗದ ಜಾರಿಗಾಗಿ ಹಾಗೂ ಮಾದಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಸೋಮವಾರ ಹಮ್ಮಿಕೊಂಡಿದ್ದ ಮಾದಿಗರ ಆತ್ಮಗೌರವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಾಶಿವ ಆಯೋಗ ಜಾರಿಗೆ ಆಗಬೇಕು ಎಂಬ ನಮ್ಮ ಕೂಗಿಗೆ ಕಳೆದ ಬಿಜೆಪಿ ನೇತೃತ್ವದ ಸರ್ಕಾರ ಒತ್ತು ನೀಡಿತ್ತು. ಅದು ಜಾರಿಗೆ ಬರಬೇಕು. ಸಮುದಾಯದ ಹೋರಾಟದ ಫಲವಾಗಿ ನಮ್ಮ ಬೇಡಿಕೆಗಳ ಈಡೇರಿಕಗಳಿಗೆ ಬಲ ಬಂದಂತಾಗಿದೆ. ಸಮುದಾಯದ ಹಿತಕ್ಕಾಗಿ ನಾವೆಲ್ಲರೂ ಬದ್ಧರಾಗೋಣ ಎಂದರು.ರಾಜ್ಯ ತಂಡದ ಮುಖಂಡರಾದ ಬಲ್ಲಾಹುಣಿಸಿ ರಾಮಣ್ಣ ಹಾಗೂ ಡಾ. ಶಿವಪ್ರಸಾದ ಮಾತನಾಡಿ, ಸರ್ಕಾರಗಳ ಸೌಲಭ್ಯಗಳನ್ನು ಪಡೆಯಲು ಜಾಗೃತರಾಗಬೇಕು. ಸದಾಶಿವ ಆಯೋಗದ ಜಾರಿಗಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಸಮಾವೇಶಗಳು ಆಯೋಜನೆ ಮಾಡಲಾಗುತ್ತಿದ್ದು, ಹೋರಾಟದ ಮುಂದುವರಿಸಬೇಕು ಎಂದರು.
ಮಾದಿಗ ಸಮಾಜದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಪ್ರಮುಖರಾದ ಮಹಾಲಕ್ಷ್ಮೀ ಕಂದರಿ, ನಾಗಲಿಂಗ ಮೊಳೆಕೊಪ್ಪ ಮಾತನಾಡಿದರು.ನೀಲಕಂಠಪ್ಪ ಕುಸನೂರ, ಕರಿಯಪ್ಪ ಕಟ್ಟಿಮನಿ, ಮಾಲತೇಶ ಕರ್ಜಗಿ, ಸುರೇಶ ಆಸಾದಿ, ಜಗದೀಶ ಡೊಳ್ಳೇಶ್ವರ, ಮಂಜಪ್ಪ ಮರೋಳ, ಯಲ್ಲಪ್ಪ ಮಾಸೂರ, ಮಾರುತಿ ಸೊಟ್ಟಪ್ಪನವರ, ಚಂದ್ರಪ್ಪ ಹರಿಜನ, ಶಾರದಾ ದೊಡ್ಡಮನಿ, ಸುಭಾಸ ಮಾಳಗಿ, ಹನಮಂತಪ್ಪ ಸಿ.ಡಿ., ಜಗದೀಶ ಹರಿಜನ, ನಾಗರಾಜ ಬಣಕಾರ, ಸಂತೋಷ ಗುಡ್ಡಪ್ಪನವರ, ಪಾರ್ವತಿ ಗೊಣಿಬಸಮ್ಮನವರ, ರಾಜು ಭರಡಿ, ಹನಮಂತಪ್ಪ ಹೌಂಶಿ, ಮಹೇಶಪ್ಪ ಶ್ಯಾಕರ, ಮಂಜು ದೊಡ್ಡಮರೆಮ್ಮನವರ, ಬಸವರಾಜ ಕಾಳೆ, ದೇವರಾಜ ಹರಿಜನ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.