ಚಿತ್ರದುರ್ಗ: ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾಗಿರುವುದರಿಂದ ಸೆಪ್ಟಂಬರ್ ಒಳಗೆ ಚಿತ್ರದುರ್ಗದಲ್ಲಿ ಮೂರು ದಿನಗಳ ಸೇವಾದಳ ಕ್ಯಾಂಪ್ ಆಗಲೆಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ರಾಮಚಂದ್ರಪ್ಪ ಸೇವಾದಳಕ್ಕೆ ಸೂಚಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸೇವಾದಳದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ಬೂತ್‍ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದಿದ್ದರೆ ಏನು ಕಾರಣ. ಸೇರ್ಪಡೆಯಾಗಿದ್ದರೆ ಅವರು ಎಲ್ಲಿದ್ದಾರೆ ಎಂದು ಅವರ ವಿಳಾಸವನ್ನು ತಿಳಿದುಕೊಳ್ಳುವಂತೆ ರಾಹುಲ್‌ಗಾಂಧಿ ಸೂಚಿಸಿದ್ದಾರೆ. ತುರುವನೂರಿನಲ್ಲಿ ಒಂದು ದಿನದ ಕ್ಯಾಂಪ್ ಮಾಡಬೇಕು. ಆಗದವರು ರಾಜಿನಾಮೆ ನೀಡಿ ಮನೆಗೆ ಹೋಗಬಹುದು ಎಂದರು.
ಜಿಲ್ಲೆಯಲ್ಲಿ ಹನ್ನೆರಡು ಬೂತ್‍ಗಳಿದ್ದು, ಒಂದು ಬೂತ್‍ನಿಂದ 20 ಜನರನ್ನು ಗುರುತಿಸಿ ಜೊತೆಗೆ ನೂರು ಮಹಿಳೆಯರನ್ನು ಸೇರಿಸಿ. ಕಡ್ಡಾಯವಾಗಿ ಕ್ಯಾಂಪ್ ನಡೆಸಬೇಕು. ಅದಕ್ಕೆ ಬೇಕಾದ ಅನುಕೂಲವನ್ನು ಕಲ್ಪಿಸಲಾಗುವುದು. ಯಾವುದೇ ಕಾರಣಕ್ಕೂ ನೆಪ ಹೇಳಬಾರದು ಎಂದರು.ಮಹಿಳೆಯರ ಕಮಿಟಿ ಆಗಬೇಕು ಸೇವಾದಳದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಬೇಡ. ಒಗ್ಗಟ್ಟು ಗುಟ್ಟನ್ನು ಹೊರಗೆ ಬಿಡಬಾರದು. ಸೇವಾದಳದ ಕಾರ್ಯಕ್ರಮಗಳಿಗೆ ತಪ್ಪಿಸಿಕೊಳ್ಳಬೇಡಿ. ಸಂವಿಧಾನ ಉಳಿಸಿ ಪಥಸಂಚಲನ ಮಾಡೋಣ ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್ ಮಾತನಾಡಿ, ನಾಮ ನಿರ್ದೇಶನ ಸಮಿತಿಯಲ್ಲಿ ಜಿಲ್ಲೆಯ ಸೇವಾದಳದವರಿಗೆ ಆದ್ಯತೆ ನೀಡಬೇಕು. ಸೇವಾದಳ ಅಂದರೆ ಕಾಂಗ್ರೆಸ್. ಕಾಂಗ್ರೆಸ್ ಅಂದರೆ ಸೇವಾದಳ. ಅದಕ್ಕಾಗಿ ಸೇವಾದಳದಲ್ಲಿ ದುಡಿಯುತ್ತಿರುವವರಿಗೆ ಪ್ರಾಮುಖ್ಯತೆ ಕೊಡುವಂತೆ ರಾಮಚಂದ್ರಪ್ಪನವರಲ್ಲಿ ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ಸೇವಾದಳ ಮಹಿಳಾಧ್ಯಕ್ಷೆ ನೇತ್ರಾವತಿ, ರಾಜ್ಯ ಕಾರ್ಯದರ್ಶಿ ಮಹಮದ್ ಸೈಫುಲ್ಲಾ, ರಾಧಮ್ಮ, ಲತಾಮಣಿ, ತಿಪ್ಪೇಸ್ವಾಮಿ, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಸೀಂ, ಸೇವಾದಳದ ಸಹ ಸಂಘಟಕ ಡೋಲಿ ಚಂದ್ರಶೇಖರ್ ವೇದಿಕೆಯಲ್ಲಿದ್ದರು.