ಗದಗ: ರಾಜ್ಯ ಸರ್ಕಾರದಿಂದ ಎಸ್ಐಆರ್ ತಿರಸ್ಕರಿಸಿ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಜಿಲ್ಲಾ ಸ್ಲಂ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ, ಸಿಐಟಿಯು ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ, ಮಹೇಶ ಹಿರೇಮಠ, ಗಣೇಶ ರಾಠೋಡ, ಮೌಲಾನಾ ಶಬ್ಬೀರಹ್ಮದ ಬೋದ್ಲೇಖಾನ, ಮಹ್ಮದಯೂಸುಫ ನಮಾಜಿ, ಬಾಬಾಜಾನ ಬಳಗಾನೂರ, ಕೃಷ್ಣಾ ಹಡಪದ, ಪುಷ್ಪಾ ಬಿಜಾಪೂರ, ಆರಾಧನಾ ಬಣಕಾರ, ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ವೆಂಕಟೇಶ ಬಿಂಕದಕಟ್ಟಿ, ಆಶಾ ಜೊಲಗುಡ್ಡ, ಸಾಕ್ರುಬಾಯಿ ಗೋಸಾಯಿ, ರಫೀಕ ಜಮಾಲಖಾನವರ, ಸಲೀಂ ಹರಿಹರ, ಫೈರುಜಾ ಗುಳಗುಂದಿ, ಮಹ್ಮದಸಾಬ ಗಡಾದ, ಬಾಷಾಸಾಬ ಡಂಬಳ, ರೇಷ್ಮಾ ನಾಗನೂರ, ಖಾಜಾಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಜಂದಿಸಾಬ ಢಾಲಾಯತ, ಮಲೀಕ ಉಮಚಗಿ, ಮೆಹಬೂಬ ಮುಲ್ಲಾ, ಗೌಸಸಾಬ ಅಕ್ಕಿ, ನಾರಾಯಣ ಗಾಯಕವಾಡ ಇದ್ದರು.
ರೋಣ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಬುಧವಾರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ಜರುಗಿದ್ದು, ಒಟ್ಟು ನಾಲ್ಕು ದೂರುಗಳು ಸಲ್ಲಿಕೆಯಾಗಿವೆ.ಹುಲ್ಲೂರು ಗ್ರಾಮದ ವೃದ್ಧೆ ಶಿವವ್ವ ಹೆರಕಲ್ಲ ವಿಧವಾವೇತನಕ್ಕೆ ಅರ್ಜಿ ಸಲ್ಲಿಸಲು ಗಂಡನ ಮರಣ ಪ್ರಮಾಣಪತ್ರ ನೀಡುವಲ್ಲಿ ಹುಲ್ಲೂರ ಗ್ರಾಪಂ ಮತ್ತು ಕಂದಾಯ ಇಲಾಖೆ ವಿಳಂಬ ಮಾಡುತ್ತಿದೆ. ಇದರಿಂದ ನನಗೆ ವಿಧವಾವೇತನ ಬರುತ್ತಿಲ್ಲ. ಗಂಡನ ಮರಣ ಪ್ರಮಾಣಪತ್ರಕ್ಕಾಗಿ ಅಲೆದು ಅಲೆದು ಸಾಕಾಗಿದೆ ಎಂದು ವೃದ್ಧೆ ಶಿವವ್ವ ಅಳಲು ತೋಡಿಕೊಂಡರು.
ಸಭೆಯಲ್ಲಿ ತಹಸೀಲ್ದಾರ್ ನಾಗರಾಜ ಕೆ., ತಾಪಂ ಇಒ ಚಂದ್ರಶೇಖರ ಕಂದಕೂರ, ಲೋಕಾಯುಕ್ತ ಸಿಪಿಐ ಪರಮೇಶ್ವರ ಕವಟಗಿ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಮತ್ತು ತಾಲೂಕು ಮಟ್ಟದ ಪ್ರಮುಖ ಅಧಿಕಾರಿಗಳಿದ್ದರು.