ವಿದ್ಯಾರ್ಥಿಗಳು ಆಡಂಬರದಿಂದ ದೂರವಿರಲಿ

KannadaprabhaNewsNetwork |  
Published : Feb 07, 2024, 01:46 AM IST
೬ಕೆಎನ್‌ಕೆ-೨                                                                 ಕಾರ್ಯಕ್ರಮವನ್ನು ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲ ಬಜರಂಗಬಲಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ನಗರ, ಪಟ್ಟಣಗಳಿಗಿಂತ ಹಳ್ಳಿ ವಿದ್ಯಾರ್ಥಿಗಳೇ ಟಾಫರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ನಗರಗಳಲ್ಲಿನ ವಿದ್ಯಾರ್ಥಿಗಳು ಆಡಂಬರ ಜೀವನಕ್ಕೆ ಆದ್ಯತೆ ನೀಡುವುದರಿಂದ ಓದಿನ ಆಸಕ್ತಿಗಿಂತ ತೋರ್ಪಡಿಕೆಯೇ ಹೆಚ್ಚಾಗಿದೆ

ಕನಕಗಿರಿ: ವಿದ್ಯಾರ್ಥಿಗಳಿಗೆ ಓದು ಮುಖ್ಯವಾಗಬೇಕೆ ಹೊರತು ಆಡಂಬರದ ಜೀವನವಲ್ಲ ಎಂದು ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಜರಂಗಬಲಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ನಗರ, ಪಟ್ಟಣಗಳಿಗಿಂತ ಹಳ್ಳಿ ವಿದ್ಯಾರ್ಥಿಗಳೇ ಟಾಫರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ನಗರಗಳಲ್ಲಿನ ವಿದ್ಯಾರ್ಥಿಗಳು ಆಡಂಬರ ಜೀವನಕ್ಕೆ ಆದ್ಯತೆ ನೀಡುವುದರಿಂದ ಓದಿನ ಆಸಕ್ತಿಗಿಂತ ತೋರ್ಪಡಿಕೆಯೇ ಹೆಚ್ಚಾಗಿದೆ. ಹೀಗಾಗಿ ನಗರಗಳಲ್ಲಿನ ವಿದ್ಯಾರ್ಥಿಗಳ ಮನಸ್ಥಿತಿ ಬದಲಾಗಬೇಕು. ಉಪನ್ಯಾಸಕರ ಸಲಹೆ ಪಡೆದು ಕಾಲೇಜಿಗೆ ಒಳ್ಳೆ ಫಲಿತಾಂಶ ತರುವಂತಾಗಬೇಕು ಎಂದರು.

ನಂತರ ಕಾಲೇಜಿನ ಪ್ರಾಂಶುಪಾಲ ಮಾರೆಪ್ಪ ಎನ್.ಮಾತನಾಡಿ, ಪುಸ್ತಕದ ಜತೆಗೆ ಸಾಮಾನ್ಯ ಜ್ಞಾನ ಅರಿತುಕೊಳ್ಳಬೇಕು. ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ನಡೆದಾಗ ಮಾತ್ರ ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗುತ್ತದೆ. ಅದರಂತೆ ನೀವೆಲ್ಲರೂ ಉತ್ತಮವಾಗಿ ಅಭ್ಯಾಸ ಮಾಡಿ ತಾಲೂಕಿನ ಹೆಸರನ್ನು ರಾಜ್ಯ ಮಟ್ಟದಲ್ಲಿಯೂ ಮಿಂಚುವಂತೆ ಮಾಡಬೇಕೆಂದು ತಿಳಿಸಿದರು.

ಇತ್ತಿಚೆಗೆ ಕಾಲೇಜಿನಿಂದ ವರ್ಗಾವಣೆಗೊಂಡ ಕನ್ನಡ ಉಪನ್ಯಾಸಕ ಇಮಾಮಸಾಬ ಹಡಗಲಿಗೆ ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕ ಪಂಪಾರೆಡ್ಡಿ ಗಚ್ಚಿನಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಹಿರಿಯ ಉಪನ್ಯಾಸಕ ಶಿವಪ್ಪ ಹಲ್ಕಿ ವಾರ್ಷಿಕ ವರದಿ ವಾಚಿಸಿದರು.

ಉಪನ್ಯಾಸಕ ಮಲ್ಲಿಕಾರ್ಜುನ ಜೀರ್, ತಿರುಕನಗೌಡ, ಹನುಮೇಶಗೌಡ, ಮಮ್ಮದ್ ಆಶೀಪ್, ಹನುಮಂತ, ವಿ.ಹನುಮೇಶ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಚೈತ್ರಾ, ಸಾನಿಯಾ ನಿರೂಪಿಸಿದರು, ದುರ್ಗಮ್ಮ ಸ್ವಾಗತಿಸಿದರೆ ಸಾನಿಯಾ ವಂದಿಸಿದರು.

ಪೊಲೀಸ್ ಬಂದೋಬಸ್ತ್ : ಜ. ೩೧ರಂದು ಪಟ್ಟಣದ ಅನುದಾನಿತ ಶಾಲೆಯೊಂದರ ವಾರ್ಷಿಕೋತ್ಸವ ಸಮಾರಂಭದ ವೇಳೆ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಪಿಯು ಕಾಲೇಜಿನ ಬೀಳ್ಕೊಡುವ ಸಮಾರಂಭದ ವೇದಿಕೆಯ ಸುತ್ತ ಮುಂಜಾಗ್ರತಾ ಕ್ರಮವಾಗಿ ಓರ್ವ ಪಿಎಸ್‌ಐ ಸೇರಿದಂತೆ ಐದು ಜನ ಪೊಲೀಸರನ್ನು ನಿಯೋಜಿಸಲಾಗಿತ್ತು. ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಇನ್ಮುಂದೆ ಶಾಲಾ-ಕಾಲೇಜುಗಳಲ್ಲಿನ ನಡೆಯುವ ಸಮಾರಂಭಗಳಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸುವುದು ಅನಿವಾರ್ಯವಾಗಿದ್ದು, ಪೊಲೀಸರಿಗೆ ತಲೆನೋವು ತರಿಸಿದಂತಾಗಿದೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ