ಧಾರವಾಡ: ಭಾರತದ ಐಕ್ಯಮಂತ್ರದ ಉನ್ನತ ಪರಂಪರೆ ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ಭಾವೈಕ್ಯದ ಬದುಕನ್ನು ರೂಢಿಸಿಕೊಳ್ಳಬೇಕೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶೀವಲೀಲಾ ವಿನಯ ಕುಲಕರ್ಣಿ ಮಾತನಾಡಿ, ಪಾಲಕರು ಮತ್ತು ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳೆಂದು ಭೇದ ಭಾವ ಎಣಿಸದೇ ಎಲ್ಲರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ. ಮಹಿಳೆಯರು ಉನ್ನತ ವಿದ್ಯಾರ್ಜನೆ ಮಾಡಿದಾಗ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆಯಲು ಸಾಧ್ಯ ಎಂದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ ಹಾಗೂ ಶಾಲೆಯ ಪ್ರಾಚಾರ್ಯ ಅಶ್ವಿನಿ ಚಿಕ್ಕಬಳ್ಳಾಪೂರ ಮಾತನಾಡಿದರು. ಪಾಲಿಕೆ ಸದಸ್ಯರುಗಳಾದ ಶಂಕರ ಶೇಳಕೆ, ದೀಪಾ ನೀರಲಕಟ್ಟಿ, ಎ.ಆರ್.ಸಿ. ಪ್ರತಿಷ್ಠಾನದ ನಿರ್ದೇಶಕಿ ಸುಜಾತಾ ಚರಂತಿಮಠ, ಪಕ್ಷಿ ತಜ್ಞ ಪ್ರಕಾಶ ಗೌಡರ, ನ್ಯಾಯವಾದಿ ಭೈರವ ಚರಂತಿಮಠ, ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಇದ್ದರು. ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಗುಂಪು ನೃತ್ಯ, ಲೇಝಿಮ್ ನೃತ್ಯ, ಭರತ ನಾಟ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.