ಇತಿಹಾಸದಲ್ಲಿ ಬಿಟ್ಟು ಹೋದ ಸಂಗತಿಗಳು ಮರು ನಿರೂಪಣೆಯಾಗಲಿ: ಡಾ. ಜೆ.ಪಿ. ದೊಡಮನಿ

KannadaprabhaNewsNetwork |  
Published : Jan 06, 2025, 01:04 AM IST
5ಡಿಡಬ್ಲೂಡಿ2ಗಣಕರಂಗ ಸಂಸ್ಥೆಯು 207ನೇ ಭೀಮಾ ಕೋರೆಗಾಂವ ಶೌರ್ಯ ದಿನಾಚರಣೆ ಪ್ರಯುಕ್ತ ಧಾರವಾಡದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ದೇಶದ ಇತಿಹಾಸವನ್ನು ಬ್ರಿಟಿಷರು ಕಟ್ಟಿಕೊಟ್ಟಷ್ಟು ವಸ್ತುನಿಷ್ಠವಾಗಿ ಮತ್ತು ಸತ್ಯ ನಿಷ್ಠವಾಗಿ ಬೇರೆ ಯಾರೂ ಕಟ್ಟಿಕೊಟ್ಟಿಲ್ಲ ಎಂದು ನಿವೃತ್ತ ಪ್ರಾಚಾರ್ಯ ಡಾ. ಜೆ.ಪಿ. ದೊಡಮನಿ ಹೇಳಿದರು.

ಧಾರವಾಡ: ದೇಶದ ಇತಿಹಾಸದಲ್ಲಿ ಕೆಲ ವೈಯಕ್ತಿಕ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಕೆಳವರ್ಗದವರ ಇತಿಹಾಸವನ್ನು ಮರೆಮಾಚಿರುವುದನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ನಿಜವಾದ ಇತಿಹಾಸ ಶೋಧಿಸಿ ಪಠ್ಯದಲ್ಲಿ ಸೇರಿಸುವ ಕೆಲಸವಾಗಬೇಕು ಎಂದು ಅಥಣಿಯ ನಿವೃತ್ತ ಪ್ರಾಚಾರ್ಯ ಡಾ. ಜೆ.ಪಿ. ದೊಡಮನಿ ವಿಷಾಧಿಸಿದರು.

ಗಣಕರಂಗ ಸಂಸ್ಥೆಯು 207ನೇ ಭೀಮಾ ಕೋರೆಗಾಂವ ಶೌರ್ಯ ದಿನಾಚರಣೆ ಪ್ರಯುಕ್ತ ಇಲ್ಲಿಯ ರಾ.ಹ. ದೇಶಪಾಂಡೆ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಇತಿಹಾಸವನ್ನು ಬ್ರಿಟಿಷರು ಕಟ್ಟಿಕೊಟ್ಟಷ್ಟು ವಸ್ತುನಿಷ್ಠವಾಗಿ ಮತ್ತು ಸತ್ಯ ನಿಷ್ಠವಾಗಿ ಬೇರೆ ಯಾರೂ ಕಟ್ಟಿಕೊಟ್ಟಿಲ್ಲ. ಆದರೆ, ನಮ್ಮ ದೇಶದ ಅನುಕೂಲಸಿಂಧು ಇತಿಹಾಸಕಾರರಿಂದ ಮರೆಮಾಚಿದ, ತಿರುಚಿದ, ಉದ್ದೇಶಪೂರ್ವಕವಾಗಿ ಬಿಟ್ಟು ಹೋದ ಇತಿಹಾಸವನ್ನು ಮರುನಿರೂಪಿಸಿಬೇಕಾಗಿದೆ. ಅಂದು 1927ರಲ್ಲಿ ಬಾಬಾಸಾಹೇಬರು ಇತಿಹಾಸದ ಕಾಲಗರ್ಭದಲ್ಲಿ ಹೂತು ಹೋಗಿದ್ದ ಭೀಮಾ ಕೋರೆಗಾಂವ ವೀರ ಯೋಧರ ಚರಿತೆಯನ್ನು ನಮಗೆಲ್ಲ ಪರಿಚಯಿಸಿದ್ದರಿಂದ ಗೊತ್ತಾಯಿತು. ಇಲ್ಲದಿದ್ದರೆ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದರು.

ಕೃತಿ ಬಿಡುಗಡೆ

ಇದೇ ಸಂದರ್ಭದಲ್ಲಿ ಹಿಪ್ಪರಗಿ ಸಿದ್ಧರಾಮ ಸಂಪಾದಿತ “ನಮ್ಮ ಸಂವಿಧಾನ” ಕಥಾಸಂಕಲನ ಮತ್ತು ಗಣಪತಿ ಗೋ. ಚಲವಾದಿ (ಗಗೋಚ) ವಿರಚಿತ “ಎದ್ಯಾಗಿನ ಬ್ಯಾನಿ” ಕಥಾಸಂಕಲನವನ್ನು ಬೆಳಗಾವಿಯ ಪ್ರೊ. ಹರೀಶ ಕೋಲ್ಕಾರ ಲೋಕಾರ್ಪಣೆ ಮಾಡಿ, ಸ್ವಾತಂತ್ರ್ಯದ ಹೆಜ್ಜೆಗಳನ್ನು ಶೋಧಿಸಬೇಕಿ ಎಂದರು.ಎರಡೂ ಕೃತಿಗಳನ್ನು ಅಧ್ಯಾಪಕ ಡಾ. ವಿ.ಜಿ. ಪೂಜಾರ ಪರಿಚಯಿಸಿದರು. ಎರಡು ಕೃತಿಯಲ್ಲಿನ ಕಥೆಗಳು ದಲಿತ ಮಹಿಳೆ ಸಂವೇದನೆ, ದಲಿತರ ಮೇಲಿನ ಶೋಷಣೆ, ಕ್ರೌರ್ಯ, ಜಾತಿ, ಬಡವ-ಶ್ರೀಮಂತ ಹಾಗೂ ಸಂವಿಧಾನ ಕುರಿತಾಗಿವೆ. ಮಾನವೀಯ ಮೌಲ್ಯಗಳನ್ನು ಕೇಂದ್ರೀಕರಿಸಿ ಬರೆಯಲಾಗಿದೆ. ಒಟ್ಟಾರೆ ಸಂವಿಧಾನ ಎಲ್ಲರ ಬದುಕಿನ ಗ್ರಂಥವಾಗಬೇಕೆಂಬ ಅಂಶವೂ ಇದೆ ಎಂದರು.

ನಂತರ ವಿವಿಧ ಕ್ಷೇತ್ರದ ಸಾಧಕರಾದ ಡಾ. ಜಗನ್ನಾಥ ದೊಡಮನಿ (ಜಾಗೃತಿ), ಪ್ರಭಾ ಭೋರಗಾಂವಕರ (ಪ್ರಕಾಶನ), ಡಾ. ಶರಣಮ್ಮ ಪಾಟೀಲ (ಶಿಕ್ಷಣ), ಡಾ. ವೈ,ವೈ. ಕೊಕ್ಕನವರ (ಸಾಹಿತ್ಯ), ಗಾಯತ್ರಿ ಹಡಪದ (ರಂಗಭೂಮಿ), ಬಸವರಾಜ ಹಿರೇಮಠ (ಪತ್ರಿಕಾರಂಗ), ಶ್ರೀಶೈಲಗೌಡ ಕಮತರ (ಸಮಾಜಸೇವೆ), ಮಹೇಶ ಎಂ. ತುಪ್ಪದ (ಸಮಾಜಸೇವೆ), ಪಾರ್ವತಿದೇವಿ ತುಪ್ಪದ (ಸಾಹಿತ್ಯ) ಮುಂತಾದವರನ್ನು ಸನ್ಮಾನಿಸಲಾಯಿತು. ಗಣಕರಂಗ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?