ಕನ್ನಡಪ್ರಭ ವಾರ್ತೆ ಬೀದರ್
ಅವರು ಬೀದರ್ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಿಕಾ ರಂಗವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿದ್ದು ಪತ್ರಕರ್ತರು ವಸ್ತುನಿಷ್ಠ, ನಿಖರ ಸುದ್ದಿ ಪ್ರಸಾರ ಮಾಡಬೇಕು ಅಂದಾಗ ಸಮಾಜದಲ್ಲಿ ಬದಲಾವಣೆಯಾಗುತ್ತದೆ ಎಂದರು.
ಸಮಾಜದಲ್ಲಿನ ಲೋಪ-ದೋಷ ಎತ್ತಿ ಹಿಡಿಯುವದು ಪತ್ರಿಕಾ ರಂಗದ ಧರ್ಮವಾಗಿದೆ ಮತ್ತು ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಹಿಂದಿನ ದಿನಗಳಲ್ಲಿ ಯಾವುದೇ ಸಾಮಾಜಿಕ ಮಾಧ್ಯಮಗಳು ಇಲ್ಲದ ಸಮಯದಲ್ಲಿ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಪತ್ರಿಕೆಗಳು ಮಾಡಿವೆ. ಯಾವುದೇ ಒಂದು ಸಮಸ್ಯೆ ಸುದ್ದಿಮಾಧ್ಯಮಗಳಲ್ಲಿ ಬಂದಾಗ ಮಾತ್ರ ಅದಕ್ಕೆ ಹೆಚ್ಚಿನ ಮಹತ್ವ ಸಿಗುತ್ತದೆ.ರಾಷ್ಟ್ರೀಯತೆ ಸಂದರ್ಭದಲ್ಲಿ ಗಾಂಧೀಜಿ, ಬಾಲಗಂಗಾಧರ ತಿಲಕ ಮತ್ತು ಅಂಬೇಡ್ಕರಂತಹ ಹಲವಾರು ನಾಯಕರು ಪತ್ರಿಕೆಗಳ ಮುಖಾಂತರ ಜನರಿಗೆ ಮಾಹಿತಿ ತಲುಪಿಸುವ ಮೂಲಕ ಜನರಿಗೆ ಜಾಗೃತಿಗೊಳಿಸುತ್ತಿದ್ದರು ಎಂದು ನುಡಿದರು.
ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ವಿಶ್ವಾಸಾರ್ಹತೆಯಿಂದ ಕೆಲಸ ಮಾಡುವ ಮೂಲಕ ಪತ್ರಿಕಾ ರಂಗದ ಆಳ ಮತ್ತು ಅಗಲ ತಿಳಿದುಕೊಳ್ಳಬೇಕು. ಗ್ರಾಮೀಣ ಭಾಗದ ಪತ್ರಕರ್ತರ ಬಸ್ ಪಾಸ ವಿತರಣೆಯು ಚುನಾವಣೆ ಬಂದ ಕಾರಣ ವಿಳಂಬವಾಗಿದೆ. ಸುಳ್ಳು ಸುದ್ದಿ ಹಾಗೂ ಬ್ಲ್ಯಾಕ್ ಮೇಲ ಮಾಡುವ ಪತ್ರಕರ್ತರನ್ನು ದೂರ ಮಾಡುವ ಕೆಲಸ ನಾವೇ ಮಾಡಬೇಕಿದೆ ಸಮಾಜದ ಒಳಿತಿಗಾಗಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ವೇಂಕಟಸಿಂಗ ಪತ್ರಕರ್ತರ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪರಾವ ಸೌದಿ ನಿರೂಪಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ದೇವಪ್ಪ ಪ್ರಾಸ್ತಾವಿಕ ಮಾತನಾಡಿ, ಪತ್ರಕರ್ತರ ಸಮಸ್ಯೆಗಳ ಕುರಿತು ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಸ್ವಾಗತಿಸಿದರು. ಮಾಳಪ್ಪ ಅಡಸಾರೆ ವಂದಿಸಿದರು.