ಹರಪನಹಳ್ಳಿ: ವಾಲ್ಮೀಕಿ ನಾಯಕ ಸಮುದಾಯ ಈ ನಾಡು, ನುಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ಇಂತಹ ಭವ್ಯ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಸಮುದಾಯ ಜಾತ್ರೆಯ ಮೂಲಕ ಜಾಗೃತರಾಗಬೇಕಿದೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಜಾತ್ರೆಗಳು ಜಾತ್ಯಾತೀತ ಮನೋಭಾವನೆಯ ಮೂಲಕ ಎಲ್ಲರಲ್ಲೂ ಸಾಮರಸ್ಯ ಬೆಸೆಯುವ ಕೊಂಡಿಯಾಗಿದೆ. ಅದನ್ನು ಇಂದಿಗೂ ಆಚರಿಸಿಕೊಂಡು ಮುಂದುವರೆಯುತ್ತಿವೆ. ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ 28 ಜಿಲ್ಲೆಗಳು ಹಾಗೂ 175 ತಾಲೂಕುಗಳ ಪ್ರವಾಸ ಮಾಡಿ ಜಾತ್ರೆಗೆ ಅಹ್ವಾನ ನೀಡುವ ಮೂಲಕ ರಾಜ್ಯದ 4ನೇ ಅತಿ ದೊಡ್ಡ ಸಮುದಾಯವನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಕೂಡ ಜಾತ್ರೆ ಯಶಸ್ವಿಯಾಗಲು ನಿಮ್ಮಗಳ ಸಹಕಾರ ಅಗತ್ಯವಾಗಿದೆ ಎಂದರು.ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಾದ ಸಾಂವಿಧಾನಿಕ ಹಕ್ಕಿಗಾಗಿ ಆಗ್ರಹಿಸುವ ಮಹಾ ವೇದಿಕೆಯಾಗಬೇಕು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಂಘಟಿತರಾಗಬೇಕು ಎಂಬ ಸದುದ್ದೇಶದಿಂದ ವಾಲ್ಮೀಕಿ ಜಾತ್ರೆ ಆರಂಭಿಸಲಾಯಿತು ಎಂದು ಹೇಳಿದರು.
ಮೀಸಲಾತಿ ಹೆಚ್ಚಳ ಹೋರಾಟದಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಿದೆ. ನಮ್ಮ ಸಮಾಜದ ಮಕ್ಕಳಿಗೆ ಶೈಕ್ಷಣಿಕ, ಉದ್ಯೋಗದಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಆದರೂ ಜಲ್ವಂತ ಸಮಸ್ಯೆಗಳಿವೆ. ಪ್ರಮುಖವಾಗಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡು ನಿಜವಾದ ನಾಯಕರಿಗೆ ಅನ್ಯಾಯವಾಗುತ್ತಿದ್ದು, ನಾವು ಸಂಘಟಿತರಾಗಬೇಕು ಜಾಗೃತರಾಗಬೇಕು ಎಂದರು.ಫೆಬ್ರವರಿ 8 ಮತ್ತು 9ರಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಗೆ, ಜಾತ್ರಾ ಸಮಿತಿಯ ತಾಲೂಕು ಅಧ್ಯಕ್ಷರಾಗಿ ತಾಲೂಕಿನ ಹಿರೆಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ, ಮಾಜಿ ಅಧ್ಯಕ್ಷರಾದ ಕೆ.ಉಚ್ಚೆಂಗೆಪ್ಪ, ಶಿರಹಟ್ಟಿ ದಂಡೆಪ್ಪ, ಸಮಾಜದ ಗೌರವ ಅಧ್ಯಕ್ಷ ಎಚ್.ಕೆ. ಹಾಲೇಶ್, ಪುರಸಭೆ ಸದಸ್ಯರಾದ ದ್ಯಾಮಜ್ಜಿ ರೊಕ್ಕಪ್ಪ, ಸಮಾಜದ ಪ್ರಧಾನ ಕಾರ್ಯದರ್ಶಿ ಜಿಟ್ಟಿನಕಟ್ಟಿ ಎಚ್.ಕೆ. ಮಂಜುನಾಥ, ಮುಖಂಡರಾದ ಬಾಣದ ಅಂಜಿನಪ್ಪ, ತೆಲಗಿ ಟಿ.ಉಮಾಕಾಂತ, ಇಟ್ಟಿಗುಡಿ ಅಂಜಿನಪ್ಪ, ಆಲದಹಳ್ಳಿ ಷಣ್ಮುಖಪ್ಪ, ಎಂ.ಪ್ರಾಣೇಶ್, ನೀಲಗುಂದ ವಾಗೀಶ್, ಶಿವಾನಂದ, ಗಿರಜ್ಜಿ ನಾಗರಾಜ, ಬಾಗಳಿ ಆನಂದಪ್ಪ, ತೆಲಿಗಿ ಅಂಜಿನಪ್ಪ,ಶಿವಪ್ಪ, ಯಡಿಹಳ್ಳಿ ರಾಮಪ್ಪ, ತೆಲಿಗಿ ಕೆ.ಯೊಗೇಶ, ದುಗ್ಗಾವತಿ ಮಂಜುನಾಥ, ಪೈಲ್ವಾನ ಬಸಪ್ಪ, ರಂಗಾಪುರ ಶಿವರಾಜ, ದ್ಯಾಮಜ್ಜಿ ಹನುಮಂತಪ್ಪ, ಗಿಡ್ಡಳ್ಳಿ ನಾಗರಾಜ, ಮೈದೂರು ಮಾರುತಿ, ರಾಯದುರ್ಗದ ಪ್ರಕಾಶ, ಗುಡೆಕೋಟಿಕೇರಿ ರಾಜಪ್ಪ, ಪೂಜಾರ್ ಅರುಣಕುಮಾರ, ಹುಲಿಕಟ್ಟಿ ಲಕ್ಯೆಪ್ಪ, ಚಿಕ್ಕೇರಿಬಸಪ್ಪ, ಮತ್ತಿಹಳ್ಳಿ ಕರಿಬಸಪ್ಪ,ಟಿ.ಪದ್ಮಾವತಿ, ಮಂಜುಳಾ, ಶೋಭಾ, ಆಲೂರು ಶ್ರೀನಿವಾಸ, ಆರ್.ಪ್ರಕಾಶ್, ಆರ್.ಲೋಕೇಶ್, ನಿಟ್ಟೂರು ಸಣ್ಣಹಾಲಪ್ಪ, ಕೆಂಚನಗೌಡ, ರೇವಣಸಿದ್ದಪ್ಪ, ಎಚ್.ಶಿವರಾಜ, ಕೆಂಗಳ್ಳಿ ಪ್ರಕಾಶ್, ಮೈದೂರು ಮಾರುತಿ, ಮಹಾಂತೇಶ್ ಇದ್ದರು.
ಹರಪನಹಳ್ಳಿ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವ ಭಾವಿ ಸಭೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿದರು.