ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲಾ ಒಳಪಂಗಡಗಳು ಒಂದಾಗಬೇಕು. ಆಗ ಮಾತ್ರ ಸಾಮಾಜಿಕ, ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ. ಜಾತಿ ತಾರತಮ್ಯ ಮಾಡದೆ, ಬಡವ, ಶ್ರೀಮಂತ ಎನ್ನದೇ ವೀರಶೈವ ಲಿಂಗಾಯತರು ಒಂದಾಗಿಬೇಕು ಎಂದು ಸಲಹೆ ನೀಡಿದರು.
ಹಿರೇಮಠ ಧಾರ್ಮಿಕ, ಸಾಮಾಜಿಕವಾಗಿ ಬಹಳ ಉತ್ತಮ ಕಾರ್ಯ ಮಾಡುತ್ತಿದೆ. ಶ್ರೀಮಠ ಸದ್ಭಕ್ತರು ನನ್ನನ್ನು ಕರೆಸಿ ಗೌರವಿಸಿದ್ದಕ್ಕಾಗಿ ಶ್ರೀಮಠಕ್ಕೆ ಚಿರಋಣಿ ಎಂದರು.
ಸಮಾಜದ ಮುಖಂಡ ಎಂ.ಎಂ. ವಿರಕ್ತಮಠ ಮಾತನಾಡಿ, ಶಂಕರ ಬಿದರಿಯವರು ಪೊಲೀಸ್ ಮಹಾನಿರ್ದೇಶಕರಾಗಿ ಬಹಳ ಒಳ್ಳೆಯ ಕಾರ್ಯ ಮಾಡಿದ್ದಾರೆ. ಈಗ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರಾಗಿ ಎಲ್ಲರನ್ನು ಒಂದುಗೂಡಿಸಿ ಸದೃಢ ಸಮಾಜ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದಾರೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಡಾ.ಚಂದ್ರಶೇಖರ ಸ್ವಾಮೀಜಿ ವಹಿಸಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಒಂದು. ನಾವೆಲ್ಲರೂ, ಪರಶಿವನ ಬಂಧುಗಳು ಎಂದು ಬಹಳ ಗಟ್ಟಿಧ್ವನಿಯಿಂದ ತಿಳಿಸಿದವರು ಶಂಕರ ಬಿದರಿಯವರು. ಕರ್ನಾಟಕ ಕಂಡ ದಕ್ಷ ಪ್ರಾಮಾಣಿಕ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೀರಶೈವ ಲಿಂಗಾಯತ ಸಮಾಜಕ್ಕೆ ಬಿದರಿಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷರು ನಮ್ಮ ಮಠಕ್ಕೆ ಭೇಟಿ ನೀಡಿದ್ದು ನಮಗೆ ಬಹಳ ಸಂತಸವಾಗಿದೆ. ಆ ಭಗವಂತನ ಆಶೀರ್ವಾದ ಅವರ ಮೇಲೆ ಸದಾಕಾಲ ಇರಲಿ ಎಂದು ಡಾ.ಚಂದ್ರಶೇಖರ ಸ್ವಾಮಿಜಿ ಆರ್ಶಿರ್ವದಿಸಿದರು.
ಮಠದ ಸದ್ಭಕ್ತರಾದ ಬಿ.ಕೆ. ಮಠದ, ಸಂಕಣ್ಣ ಗಂಗಣ್ಣವರ, ಶಿವಪ್ಪ ಚೌಧರಿ, ಹೊಳಬಸು ಕೊಟಗಿ, ಶಂಕರ ಗಿಡಿಕೆಂಚನ್ನವರ, ಸೋಲಬಣ್ಣ ತೇಲಿ, ಅಣ್ಣಯ್ಯ ವೀರಕ್ತಮಠ, ಮಲ್ಲು ಚೌಧರಿ, ದುಂಡಯ್ಯ ಶಿರಕೋಳಮಠ, ರಾಮಣ್ಣಾ ನಾವಲಗಿ, ಸುನೀಲ ವಸ್ತçದ, ದುಂಡಯ್ಯ ಸಾಲಿಮಠ ಅಪಾರ ಸಂಖ್ಯೆಯ ಭಕ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.