ನೀಚ ಉಗ್ರರಿಗೆ ತಕ್ಕ ಶಿಕ್ಷೆಯಾಗಲಿ

KannadaprabhaNewsNetwork |  
Published : Apr 25, 2025, 11:48 PM IST
ಫೋಟೋ 25ಪಿವಿಡಿ3.25ಪಿವಿಡಿ4ಪಾವಗಡ,ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ವಿರೋಧಿಸಿ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದ ರೈತ ಸಂಘದ ವತಿಯಿಂದ ಗ್ರೆಡ್‌ 2ತಹಸೀಲ್ದಾರ್‌ ವೆಂಕಟೇಶ್‌ ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಉಗ್ರರಿಗೆ ತಕ್ಕ ಶಾಸ್ತಿ ಆಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ವಿಭಾಗದ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ ಬೇಸಿಗೆ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರ ಕಾಶ್ಮೀರ ಪಹಲ್ಗಾಮ್‌ನಲ್ಲಿ ಉಗ್ಗರು ಏಕಾಏಕಿ ದಾಳಿ ನಡೆಸಿ ಭಾರತಿಯನ್ನು ಹತ್ಯೆಗೈದಿದ್ದು ಪೈಚಾಚಿಕ ಕೃತ್ಯವಾಗಿದೆ. ಈ ನೀಚ ಉಗ್ರರಿಗೆ ತಕ್ಕ ಶಾಸ್ತಿ ಆಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ವಿಭಾಗದ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಆಗ್ರಹಿಸಿದರು.ಕರ್ನಾಟಕ ರಾಜ್ಯ ರೈತ ಪಾವಗಡ ತಾಲೂಕು ಶಾಖೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಬಳಿಕ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರು ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಮಟ್ಟಹಾಕುವಂತೆ ಆಗ್ರಹಿಸಿದರು.

ಕೇಂದ್ರ ಮತ್ತು ಕಾಶ್ಮೀರ ರಾಜ್ಯಗಳ ಭದ್ರತಾ ವೈಫಲ್ಯದ ಪರಿಣಾಮ ನರಹತ್ಯೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಹೆಚ್ಚಿನ ಮಿಲಿಟರಿ ಸೇನೆ ನಿಯೋಜಿಸಬೇಕು. ಘಟನೆಯಲ್ಲಿ ಸಿಕ್ಕಿಕೊಂಡ ಗಾಯಾಳುಗಳಿಗೆ ತುರ್ತು ಚಿಕಿತ್ಸೆ, ನೀರು,ಆಹಾರ ಇತರೆ ಅಗತ್ಯ ಸೇವೆ ಕಲ್ಪಿಸಿದ ಕಾಶ್ಮೀರದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಈ ಘಟನೆಯಲ್ಲಿ ಒಬ್ಬ ಕುದುರೆ ಸವಾರ ಸಹ ಸಾವಿಗಿಡಾಗಿದ್ದು ಅತ್ಯಂತ ನೋವಿನ ಸಂಗತಿ. ಉಗ್ರಗಾಮಿಗಳನ್ನು ಪತ್ತೆ ಹಚ್ಚಿ ಅವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮೃತರ ಕುಟುಂಬದ ಸದಸ್ಯರಿಗೆ ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಿ ಸಾಂತ್ವನ ಹೇಳುವಂತೆ ಒತ್ತಾಯಿಸಿದರು.

ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡನೂರು ಶಿವು, ಕನ್ನಮೇಡಿ ಕೃಷ್ಣಮೂರ್ತಿ,ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ,ತಾಲೂಕು ಕಾರ್ಯದರ್ಶಿ, ರಮೇಶ್‌, ಸಿ.ಕೆ.ಪುರದ ನಾಗಪ್ಪ,ಗೋವಿಂದಪ್ಪ,ಈಶ್ವರಪ್ಪ, ಹೊಸಕೋಟೆ ಗೋಪಾಲ್, ನಾಗಪ್ಪ,ಕಿಲಾರ್ಲಹಳ್ಳಿಯ ಈರಣ್ಣ, ರಾಮಪ್ಪ, ಹನುಮಂತರಾಯಪ್ಪ, ನಾಗೇಂದ್ರ, ವಿ.ಇ.ಈಶ್ವರಪ್ಪ, ಈರಣ್ಣ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ