ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ತಾಲೂಕಿನ ಕೊಂಡ್ಲಹಳ್ಳಿ ಸಾಲೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಜನಾಂಗವಾಗಿರುವ ನೇಕಾರ ಸಮುದಾಯ ಒಳ ಪಂಗಡದ ಹೆಸರಲ್ಲಿ ಹರಿದು ಹಂಚಿಹೋಗಿದೆ. ಒಳಪಂಗಡ ಬಿಟ್ಟು ಒಟ್ಟಾಗಬೇಕು. ಸಮುದಾಯ ಜಾಗೃತರಾಗಬೇಕು. ಬಿನ್ನಾಭಿಪ್ರಾಯಗಳು ದೂರ ಸರಿಸಿ ಎಲ್ಲಾ ಪಂಗಡಗಳು ಒಂದಾಗಬೇಕು. ಇದರಿಂದ ಸಮುದಾಯದ ಶಕ್ತಿ ಇಮ್ಮಡಿಯಾಗಲಿದೆ ಎಂದರು.ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನೇಕಾರ ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬೇಕು. ಇದರಿಂದ ಸಮುದಾಯ ಸಮಾಜದಲ್ಲಿ ಸಬಲತೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದಾವಣಗೆಗೆ ಜಿಲ್ಲಾ ನೇಕಾರ ವೇದಿಕೆ ಉಪಾಧ್ಯಕ್ಷ ವಿ.ಪಿ.ಲಕ್ಷ್ಮೀ ನಾರಾಯಣ, ಕಿರುತೆರೆ ಕಲಾವಿದೆ ಸ್ವಪ್ನ ದೀಕ್ಷಿತ್, ನಿವೃತ್ತ ತಹಸೀಲ್ದಾರ್ ಗರುಮೂರ್ತಿ, ಪಿಎಸ್ಐ ರವಿಕುಮಾರ್, ಅಣ್ಣಪ್ಪ, ವಿ.ಪಿ.ರಾಜು ಸೇರಿದಂತೆ ಹಲವರು ಇದ್ದರು.