ಗ್ರಾಪಂ ಮಹಿಳಾ ಸದಸ್ಯರು ದಕ್ಷತೆಯಿಂದ ಕೆಲಸ ಮಾಡಲಿ: ಪುಷ್ಪ

KannadaprabhaNewsNetwork | Published : Jun 17, 2024 1:39 AM

ಸಾರಾಂಶ

ತರೀಕೆರೆ, ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು ದಕ್ಷತೆಯಿಂದ ಕೆಲಸ ಮಾಡಬೇಕೆಂದು ತಾಲೂಕು ಸುಗ್ರಾಮ ಒಕ್ಕೂಟ ಅಧ್ಯಕ್ಷೆ ಪುಷ್ಪ ಹೇಳಿದ್ದಾರೆ.

ತರೀಕೆರೆಯಲ್ಲಿ ಗ್ರಾಪಂ ಮಹಿಳಾ ಸದಸ್ಯರಿಗೆ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು ದಕ್ಷತೆಯಿಂದ ಕೆಲಸ ಮಾಡಬೇಕೆಂದು ತಾಲೂಕು ಸುಗ್ರಾಮ ಒಕ್ಕೂಟ ಅಧ್ಯಕ್ಷೆ ಪುಷ್ಪ ಹೇಳಿದ್ದಾರೆ.

ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್, ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ತಾಲೂಕು ಒಕ್ಕೂಟ ತರೀಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು. ಗ್ರಾಮ ಪಂಚಾಯತಿಗಳಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಪ್ರತಿಯೊಂದು ಬಿಲ್ಲು ಚೆಕ್ ಮತ್ತು ಹಣಕಾಸಿನ ವ್ಯವಹಾರವನ್ನು ಸರಿಯಾಗಿ ನೋಡಿಕೊಂಡು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಬೇಕೆಂದು ಜೊತೆಗೆ ಮಾಡಿರುವಂತ ಕೆಲಸ ಕಾರ್ಯ, ಸೂಕ್ಷ್ಮತೆಗಳು ಮತ್ತು ಎಲ್ಲಾ ಇಲಾಖೆ ಗಳೊಂದಿಗೆ ಅಧಿಕಾರಿಗಳ ಸಹಕಾರದಿಂದ ತಮ್ಮ ವಾರ್ಡಿನ ಜನರಿಗೆ ಸೌಲಭ್ಯಗಳನ್ನು ಕೊಡಿಸು ವುದಲ್ಲದೆ ಬಡ ಕುಟುಂಬದ ಮಹಿಳೆಯರಿಗೆ ಪಿಂಚಣಿ ಕೊಡಿಸಿರುವ ಕುರಿತು ತಿಳಿಸಿದರು.ಸಾಕ್ಷರತಾ ಅಧಿಕಾರಿ ಎನ್ ಎಸ್ ಜಯಣ್ಣ ಮಾತನಾಡಿ ಎನ್ ಆರ್ ಎಲ್ ಎಂ ಸಂಘಗಳಿಗೆ ಬ್ಯಾಂಕ್ ಲೋನ್ ಕೊಡಿಸುವ ಬಗ್ಗೆ ಕೌಶಲ್ಯ ತರಬೇತಿಗಳ ಕುರಿತು ಮತ್ತು ಹೈನುಗಾರಿಕೆ ಬಗ್ಗೆ ಸಣ್ಣ ಸಣ್ಣ ಉದ್ಯಮ ಪ್ರಾರಂಭ ಮಾಡುವ ಬಗ್ಗೆ ಮಾಹಿತಿ ನೀಡಿದರು.ನಂತರ ಸುಗ್ರಾಮದ ಎಲ್ಲಾ ಮಹಿಳಾ ಸದಸ್ಯರು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಪ್ಲಾನ್ ಬಗ್ಗೆ ಚರ್ಚಿಸಿ ಬರವಣಿಗೆ ಮೂಲಕ ವಿಷಯ ಚರ್ಚಿಸಿ ಹಂಚಿಕೊಂಡರು, ತರಬೇತಿ ಮತ್ತು ಇಲಾಖೆಗಳ ವಿಸಿಟ್ ಮಾಡುವ ಕುರಿತು ತಪ್ಪಿಸಿಕೊಳ್ಳಬಾರದು, ನಮ್ಮ ಗ್ರಾಮ ಪಂಚಾಯಿತಿ ಮತ್ತು ನಮ್ಮ ವಾರ್ಡುಗಳಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ತೀರ್ಮಾನಿಸಿದರು. ದಿ ಹಂಗರ್ ಪ್ರಾಜೆಕ್ಟಿನ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಕಾರ್ಯಕ್ರಮ ಸಂಯೋಜಕ ಶ್ರೀನಿವಾಸ್ ಮಾತನಾಡಿ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರಾದ ತಾವುಗಳು ಹೆಸರು ಉಳಿಯುವಂತಹ ಕೆಲಸ ಮಾಡಬೇಕೆಂದು ತಿಳಿಸಿದರು. ನಂತರ ಸಿಡಿಪಿಒ ಚರಣ್ ಅವರನ್ನು ಭೇಟಿ ಮಾಡಿ ಇಲಾಖೆ ಮಾಹಿತಿಗಳನ್ನು ತಿಳಿದುಕೊಂಡು ಅಂಗನ ವಾಡಿಯಲ್ಲಿ ಇರುವಂತ ಆಹಾರಧಾನ್ಯಗಳ ಸಮಸ್ಯೆಗಳ ಕುರಿತು ಚರ್ಚಿಸಿದರು. ಅನಾಥ ಮಕ್ಕಳಿಗೆ ಸಿಗುವಂತ ಸೌಲಭ್ಯ ಎಂಬು ಬಗ್ಗೆ ಮಾಹಿತಿ ಪಡೆದರು.ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಇತರೆ ಯೋಜನೆಗಳ ಬಗ್ಗೆಯೂ ಸಹ ಚರ್ಚಿಸಿದರು. ಅಂಗನವಾಡಿಯಲ್ಲಿವ ಸಮಸ್ಯೆಗಳನ್ನ ತಾವುಗಳು ನನ್ನ ಜೊತೆ ಚರ್ಚಿಸಿದರೆ ಖುದ್ದು ನಾನು ಅಂಗನ ವಾಡಿಗಳನ್ನು ಭೇಟಿ ಮಾಡಿ ಅಲ್ಲಿರುವ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಿಡಿಪಿಒ ತಿಳಿಸಿದರು.ತಾಲೂಕು ಸುಗ್ರಾಮ ಒಕ್ಕೂಟದ ನಿರ್ದೇಶಕ ಅಲಮೇಲು ತಾಲೂಕು ಉಪಾಧ್ಯಕ್ಷೆ ಶಕುಂತಲಾ, ಜಿಲ್ಲಾ ಅಧ್ಯಕ್ಷೆ ಸುಧಾ, ಅಜ್ಜಂಪುರ ತಾಲೂಕು ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ಮಮತಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

16ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಗ್ರಾಪಂ ಮಹಿಳಾ ಸದಸ್ಯರಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Share this article