ಕನ್ನಡಪ್ರಭ ವಾರ್ತೆ ಇಂಡಿ
ಒಂದು ಪಕ್ಷದಲ್ಲಿದ್ದು, ಅದೇ ಪಕ್ಷಕ್ಕೆ ದ್ರೋಹ ಎಸಗುವ ದೇಶದ್ರೊಹಿ, ಪಕ್ಷ ದ್ರೋಹಿಗಳಿಗೆ ಪಾಠ ಕಲಿಸುವ ನಿಷ್ಠಾವಂತ ನಾಯಿಗಳು ಬಿಜೆಪಿಯಲ್ಲಿವೆ ಎಂದು ಬಿಜೆಪಿ ಮುಖಂಡ ಹಣಮಂತ್ರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಬಿಜೆಪಿ ಇಂಡಿ ಮಂಡಲದ ವತಿಯಿಂದ ನಡೆದ ಮಹಾ ಕ್ಷೀರಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚರಂಡಿಯಂತೆ ಪಕ್ಷದಲ್ಲಿ ಗಬ್ಬು ವಾಸನೆ ಹರಡುವ ಕ್ರೀಮಿಗಳನ್ನು ನಾಶ ಮಾಡುವುದೇ ನಮ್ಮ ಗುರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ಧೈರ್ಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಚರಂಡಿಯಲ್ಲಿರುವ ಕ್ರಿಮಿಗಳಂತೆ, ಪಕ್ಷದಲ್ಲಿನ ಹೊಲಸು ಕ್ರಿಮಿಗಳನ್ನು ನಾಶಪಡಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ರವಿಕಾಂತ ಬಗಲಿ, ಕಾಸುಗೌಡ ಬಿರಾದಾರ, ಅನೀಲ ಜಮಾದಾರ, ಶೀಲವಂತ ಉಮರಾಣಿ, ರವಿ ವಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ದುರಾಡಳಿತ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿಯಿಂದ ಜನಾಕ್ರೋಶ ನಡೆಯುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದೇಶ, ಧರ್ಮ, ಪಕ್ಷದ ಅಭಿಮಾನಿಗಳಾಗಿ ಕೆಲಸ ಮಾಡಬೇಕು. ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಪಕ್ಷ ಸಮುದ್ರ ಇದ್ದಂತೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾವಚಿತ್ರಕ್ಕೆ
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಪ್ರಧಾನ ಕಾರ್ಯದರ್ಶಿ ದೇವೆಂದ್ರ ಕುಂಬಾರ, ಜಿಲ್ಲಾ ಮುಖಂಡರಾದ ರವಿ ಬಗಲಿ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಅನೀಲ ಜಮಾದಾರ, ಸಿದ್ಧಲಿಂಗ ಹಂಜಗಿ ಹಾಗೂ ಕಾರ್ಯಕರ್ತರು ಕ್ಷೀರಾಭಿಷೇಕ ಮಾಡಿದರು.ಬಿ.ಎಸ್.ಪಾಟೀಲ, ಮಹಾದೇವ ರಜಪೂತ, ರಾಚು ಬಡಿಗೇರ, ಸಂತೋಷ ಪಾಟೀಲ, ಮಲ್ಲಿಕಾರ್ಜುನ ದೇವರ, ಮಂಜು ದೇವರ, ಸೋಮು ನಿಂಬರಗಿಮಠ, ವಿಜಯಕುಮಾರ ಮಾನೆ, ಮಹಾದೇವ ಗುಡ್ಡೊಡಗಿ, ಅಶೋಕ ಅಕಲಾದಿ, ಜಟ್ಟು ಮದರಿ, ಉದಯ ಹಿರೇಮಠ, ವಿಜಯಲಕ್ಷ್ಮಿ ರೂಗಿಮಠ, ಶಾಮಲಾ ಬಗಲಿ, ಮಹೇಶ ಹೂಗಾರ ಮೊದಲಾದವರು ಇದ್ದರು.