ಪರಂಪರೆಯ ರಕ್ಷಣೆಯಲ್ಲಿ ಯುವಜನತೆ ತೊಡಗಿಸಿಕೊಳ್ಳಲಿ: ಡಿ. ಸ್ಮಿತಾ

KannadaprabhaNewsNetwork |  
Published : Apr 23, 2026, 02:30 AM IST
ಹಾನಗಲ್ಲ ತಾಲೂಕಿನ ಕಲಕೇರಿಯ ಕೆರೆಯ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಲಾದ ಸ್ಮಾರಕಗಳ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ನಿರ್ದೇಶಕಿ ಡಿ. ಸ್ಮಿತಾ ಅವರು ಮಾತನಾಡಿದರು. | Kannada Prabha

ಸಾರಾಂಶ

ಹಾವೇರಿ ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ, ಇತಿಹಾಸ ವಿಭಾಗ ಹಾಗೂ ಜಿಲ್ಲಾ ಪರಂಪರೆ ಕೂಟ ಇವುಗಳ ಸಹಯೋಗದಲ್ಲಿ ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ಹಾನಗಲ್ಲ ತಾಲೂಕಿನ ಕಲಕೇರಿಯ ಕೆರೆಯ ಸೋಮೇಶ್ವರ ದೇವಾಲಯದಲ್ಲಿ ಸ್ಮಾರಕಗಳ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಾಗಾರ ನಡೆಯಿತು.

ಹಾವೇರಿ: ದೇಶದ ಪರಂಪರೆ ಉಳಿದು ಬಂದಿರುವುದು ಗ್ರಾಮೀಣ ಪ್ರದೇಶಗಳಲ್ಲಿ, ಹೀಗಾಗಿ ಕಲಕೇರಿಯಂತಹ ಪ್ರದೇಶದಲ್ಲಿನ ಪ್ರಾಚೀನ ಸ್ಮಾರಕಗಳನ್ನು ರಕ್ಷಿಸಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ಯುವಜನತೆ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಪ್ರಾಚ್ಯವಸ್ತು, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ನಿರ್ದೇಶಕಿ ಡಿ. ಸ್ಮಿತಾ ಹೇಳಿದರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ, ಇತಿಹಾಸ ವಿಭಾಗ ಹಾಗೂ ಜಿಲ್ಲಾ ಪರಂಪರೆ ಕೂಟ ಇವುಗಳ ಸಹಯೋಗದಲ್ಲಿ ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ಹಾನಗಲ್ಲ ತಾಲೂಕಿನ ಕಲಕೇರಿಯ ಕೆರೆಯ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಲಾದ ಸ್ಮಾರಕಗಳ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಶಾಸನ ತಜ್ಞರಾದ ಡಾ.ವಿ. ಸಂಧ್ಯಾ ಅವರು ಮಾತನಾಡಿ, ಕಲಕೇರಿಯ ಶಾಸನಗಳನ್ನಾಧರಿಸಿ ಅಲ್ಲಿನ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸುತ್ತ ಪಲ್ಲವ ವೀರನೊಳಂಬ ದೊರೆ ಉದಯಾದಿತ್ಯ ಹಾಗೂ ರಾಣಿ ಮಾಳಲದೇವಿಯರು ಅಲ್ಲಿನ ಸೋಮೇಶ್ವರ ದೇವಾಲಯಕ್ಕೆ ದಾನ ನೀಡಿದ್ದನ್ನು ವಿವರಿಸಿದರು. ರಾಯಚೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೀರೇಶ ಡಿ., ಅಲ್ಲಿನ ಸ್ಮಾರಕಗಳ ಕುರಿತು ಪ್ರತ್ಯಕ್ಷ ವಿವರಗಳನ್ನು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ರಮೇಶ ಅಜರೆಡ್ಡಿ ಪ್ರಾಚೀನ ಸ್ಮಾರಕಗಳು ನಮ್ಮ ಪ್ರಾಚೀನ ಸಂಸ್ಕೃತಿಯ ಪ್ರತಿಬಿಂಬಗಳು. ನಮ್ಮ ಪ್ರಾಚೀನ ಪರಂಪರೆ ಭವ್ಯವಾಗಿದೆ. ಹಬ್ಬ ಹರಿದಿನಗಳು, ಆಚಾರ ವಿಚಾರಗಳು, ಆಹಾರ ಪದ್ಧತಿ, ಆಟಗಳು, ಜಾತ್ರೆಗಳು ಮುಂತಾದವುಗಳು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ರೂಪಿತವಾಗಿವೆ. ಆಧುನಿಕತೆಯ ಪ್ರಭಾವದಿಂದ ಇವುಗಳು ಇಂದು ವಿನಾಶದ ಅಂಚಿನಲ್ಲಿದ್ದು, ಇವುಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಮಹಾವಿದ್ಯಾಲಯದ 70ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಕೇರಿ ಗ್ರಾಮದ ಕೆರೆ ಸೋಮೇಶ್ವರ ದೇವಾಲಯ ಮತ್ತು ಆವರಣದಲ್ಲಿರುವ ಇತರ ಸ್ಮಾರಕಗಳನ್ನು ಸ್ವಚ್ಛಗೊಳಿಸಿದರು. ಪರಂಪರೆ ಕೂಟದ ಸಂಚಾಲಕ ಡಾ. ಶರಣಪ್ಪ ಜಗ್ಗಲ ಕಾರ್ಯಕ್ರಮವನ್ನು ನಿರೂಪಿಸಿದರು. ಹಾವೇರಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ ಹಂಚಿನಮನಿ, ಮಲ್ಲಿಕ್ ನದಾಫ, ಪ್ರೊ. ಸೌಭಾಗ್ಯ ಕೋಳಿವಾಡ ಹಾಗೂ ಗ್ರಾಮದ ಹಿರಿಯ ನಾಗರೀಕರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಾದ ಕಾವ್ಯಾ ಓಲೇಕಾರ ಹಾಗೂ ನಾಜ್ರೀನ ಭಾನು ಸೇತಸನದಿ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್.ಆರ್. ಕೋರಿಶೆಟ್ಟರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಅಬ್ಬರಕ್ಕೆ ತತ್ತರಿಸಿದ ಜನ, ಜಾನುವಾರು
ಮಧ್ಯಪ್ರಾಚ್ಯ ಯುದ್ಧದಿಂದ ವಿದೇಶಾಂಗ ನೀತಿ ಪಲ್ಲಟ