ಸಂಗೀತ, ನೃತ್ಯ, ನಾಟಕ, ಜಾನಪದ ಕಲೆ ಅ‍ಳವಡಿಸಿಕೊಳ್ಳಲಿ: ಗಂಗಾಧರ

KannadaprabhaNewsNetwork |  
Published : Aug 10, 2026, 02:45 AM IST
ಫೋಟೋವಿವರ- (8ಎಚ್‌ಪಿಟಿ4,5) ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಶ್ರೀ ಸುಬ್ರಮಣ್ಯ (ಮುರುಗನ್ ದೇವಸ್ಥಾನದ) ಆಡಿಕೃತ್ತಿಕ ಉತ್ಸವದ ಪ್ರಯುಕ್ತ ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದಿಂದ ನಡೆದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮೂಹ ನೃತ್ಯ ಪ್ರದರ್ಶಿಸಿದರು | Kannada Prabha

ಸಾರಾಂಶ

ಭಾರತೀಯ ಸಂಸ್ಕೃತಿಯ ಕಲೆಗಳಾದ ಸಂಗೀತ, ನೃತ್ಯ, ನಾಟಕ, ಜಾನಪದ, ಸಂಪ್ರದಾಯ ಕಲೆಗಳನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹಂಪಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಂಗಾಧರ ಹೇಳಿದರು.

ಹೊಸಪೇಟೆ: ಯುವ ಜನಾಂಗ ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗದೆ ನಮ್ಮ ಭಾರತೀಯ ಸಂಸ್ಕೃತಿಯ ಕಲೆಗಳಾದ ಸಂಗೀತ, ನೃತ್ಯ, ನಾಟಕ, ಜಾನಪದ, ಸಂಪ್ರದಾಯ ಕಲೆಗಳನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹಂಪಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಂಗಾಧರ ಹೇಳಿದರು.

ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಶ್ರೀ ಸುಬ್ರಮಣ್ಯ (ಮುರುಗನ್ ದೇವಸ್ಥಾನದ) ಆಡಿಕೃತ್ತಿಕ ಉತ್ಸವದ ಪ್ರಯುಕ್ತ ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದಿನ ಕಾಲದ ನಮ್ಮ ಪೂರ್ವಜರು, ಜಾತ್ರೆ, ಉತ್ಸವ, ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಊರಿನ ಎಲ್ಲರೂ ಸೇರಿ ಸೌಹಾರ್ದದಿಂದ ಹಬ್ಬ, ಜಾತ್ರೆಗಳನ್ನು ನಡೆಸುವುದು ವಾಡಿಕೆಯಾಗಿದೆ. ಮನೋರಂಜನೆಗಾಗಿ ಸಂಗೀತ, ನೃತ್ಯ, ನಾಟಕ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೀಗ, ಪ್ರತಿಯೊಬ್ಬರು ಮೊಬೈಲ್‌ನಲ್ಲಿ ಬಿಜಿ ಆಗಿದ್ದಾರೆ. ಮನೋರಂಜನೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವಾಗಿವೆ ಎಂದು ಅವರು ಹೇಳಿದರು.

ಶ್ರೀ ಮರಿದೇವಾ ಸಂಗೀತಾ ಸಾಂಸ್ಕೃತಿಕ ಕಲಾವೃಂದದವರು ಹಂಪಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 30 ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಹಂಪಿಗೆ ಬರುವ ದೇಶ-ವಿದೇಶಿ ಪ್ರವಾಸಿಗರಿಗೆ ಮತ್ತು ಸ್ಥಳೀಯ ಭಕ್ತಾದಿಗಳಿಗೆ ಸಾಂಸ್ಕೃತಿಕ ಮನೋರಂಜನೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.ಹೊಸಪೇಟೆಯ ಭರತನಾಟ್ಯ ಶಿಕ್ಷಕ ಎಂ. ಅಲ್ಲಾಭಕ್ಷ, ಸ್ಥಳೀಯ ಮುಖಂಡರಾದ ಕೆ. ಗೋಪಾಲ್‌, ಕೆ. ಉದ್ದಾನಪ್ಪ, ನಾಗರಾಜ್ ಉಪ್ಪಾರಗಟ್ಟಿ, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ ಹಾಗೂ ಎಚ್.ಕೆ. ಶರಣೇಶ, ವಡಿವೇಲೂ, ರಾಜು ಸತ್ಯವೇಲು, ಗೋವಿಂದ ಚಿನ್ನಪ್ಪಯ್ಯ, ವಿ. ಯಲ್ಲಪ್ಪ. ಹಂಪಿ ಪೊಲೀಸ್ ಠಾಣೆಯ ಎ.ಎಸ್.ಐ. ಅಧಿಕಾರಿ ಶಂಭೂಲಿಂಗ, ಎಂ.ಪಿ. ತಿಪ್ಪೇಶ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಫೂರ್ತಿ ಹುಲಿಗಿ, ಮಧುಸೂದನ ಯಾದವ್, ಅಂಗಡಿ ಸಮರ್ಥ, ಯಲ್ಲಪ್ಪ ಭಂಡಾರ್‌ಧಾರ್ ಅವರಿಂದ ಸಂಗೀತ, ಮರಿಯಮ್ಮನಹಳ್ಳಿ ಪಲ್ಲವಿ ತಂಡ, ಹೊಸಪೇಟೆ ಸ್ವರ್ಣಮುಖಿ ಭರತನಾಟ್ಯ ಕಲಾಸಂಸ್ಥೆಯಿಂದ ಭರತನಾಟ್ಯ, ಹೊಸಪೇಟೆಯ ಹರ್ಪಿತಾ ತಂಡದಿಂದ ಸಮೂಹ ನೃತ್ಯ, ಕೀಬೋರ್ಡ್ ಗೋವಿಂದರಾಜ್, ತಬಲಾ ಮಹಾಂತೇಶ ಗುಂಡ್ಲವದ್ದಿಗೇರಿ, ಸತ್ಯನಾರಾಯಣ ಭಟ್, ರಿದಮ್ ಪ್ಯಾಡ್‌ನಲ್ಲಿ ಮಹೇಶ್ ಸೇರಿದಂತೆ ಸಹಕರಿಸಿದರು. ವಾಮದೇವ ಅಂಗಡಿ ಸ್ವಾಗತಿಸಿದರು. ಕೆ. ಪಂಪನಗೌಡ ವಂದಿಸಿದರು. ಎ.ದೊಡ್ಡಬಸಪ್ಪ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಸ್ಕೃತಿ ಉಳಿವಿಗೆ ಕೆಸರುಗದ್ದೆ ಕ್ರೀಡಾಕೂಟ ಪ್ರೇರಣೆ: ಎಎ. ಸೂಫಿ
ಸಂಘಟನಾ ಸೃಜನ್: ಪೊನ್ನಂಪೇಟೆ ಬ್ಲಾಕ್‌ ಕಾಂಗ್ರೆಸ್ ಮುಖಂಡರ ಸಭೆ