ಧಾರವಾಡ:
ಕವಿವಿಯ ಸೆನಟ್ ಸಭಾಭವನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ ವಿಕಸಿತ ಭಾರತ ಯುವ ಸಂಸತ್ತು ಉದ್ಘಾಟಿಸಿದ ಅವರು, ಯುವ ಸಂಸತ್ತಿನ ಆಶಯವು ವಿದ್ಯಾರ್ಥಿಗಳಲ್ಲಿ ಚರ್ಚೆ, ಸಂವಾದ, ತಾರ್ಕಿಕ ಚಿಂತನೆ ಹುಟ್ಟಿಸಲಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ ಹಾಗೂ ನಾಯಕತ್ವದ ಸಾಮರ್ಥ್ಯವನ್ನು ಬೆಳೆಸುವುದಾಗಿದೆ. ಇಂತಹ ವೇದಿಕೆಗಳು ವಿದ್ಯಾರ್ಥಿಗಳಿಗೆ ಸಂಸದೀಯ ಕಾರ್ಯವೈಖರಿ, ಪ್ರಜಾಪ್ರಭುತ್ವದ ಪ್ರಕ್ರಿಯೆ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ತಿಳಿದುಕೊಳ್ಳಲು ಸಹಕಾರಿ ಎಂದರು.
ನ್ಯಾಯವಾದಿ ಶರಣು ಅಂಗಡಿ ಮಾತನಾಡಿ, ಯುವಜನರು ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ, ಶಿಸ್ತು, ಸಾಮಾಜಿಕ ಬದ್ಧತೆ. ಸಂವಿಧಾನದ ಮೌಲ್ಯ ಹಾಗೂ ರಾಷ್ಟ್ರೀಯ ಏಕತೆಯ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಪ್ರಗತಿಗೆ ಪ್ರತಿಯೊಬ್ಬರು ಕೊಡುಗೆ ಅಗತ್ಯ. ಜ್ಞಾನ, ಕೌಶಲ್ಯ ಮತ್ತು ಉತ್ತಮ ಚಿಂತನೆಗಳ ಮೂಲಕ ವಿಕಸಿತ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.ಮೈ ಭಾರತ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಸಂಗ್ರಾಮ ಸಾವಂತ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಎಂ.ಬಿ. ದಳಪತಿ, ಶಿವಾಜಿ ಕಡ್ಡೆಪ್ಪನವರ, ಬಸವರಾಜ ಗುಡ್ಡಪ್ಪನವರ ಇದ್ದರು.