ಸದೃಡ ಸಮಾಜ ನಿರ್ಮಿಸುವ ಶಕ್ತಿ ಯುವಜನಾಂಗಕ್ಕೆ ಬರಲಿ: ಶಾಸಕ ಬೇಳೂರು

KannadaprabhaNewsNetwork |  
Published : Oct 09, 2025, 02:00 AM IST
ದಿ.8-ಅರ್.ಪಿ.ಟಿ.1ಪಿರಿಪ್ಪನಪೇಟೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ರಿಪ್ಪನ್‍ಪೇಟೆ ಸವಿತಾ ಸಮಾಜ  ಹಾಗೂ ವಿನಾಯಕ ಕ್ರಿಕೆಟರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ರಾಜ್ಯ ಅರಣ್ಯ  ಕೈಗಾರಿಕಾಭಿವೃದ್ದಿ ನಿಗಮದ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕ್ರೀಡೆಗಳು ನಮ್ಮ ನವೋಲ್ಲಾಸವನ್ನು ಹೆಚ್ಚಿಸುವ ಮೂಲಕ ಆರೋಗ್ಯ ಪೂರ್ಣ ಶರೀರ ಸದೃಡವಾಗುವುದಕ್ಕೆ ಸಹಕಾರಿಯಾಗುವುದೆಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಕ್ರೀಡೆಗಳು ನಮ್ಮ ನವೋಲ್ಲಾಸವನ್ನು ಹೆಚ್ಚಿಸುವ ಮೂಲಕ ಆರೋಗ್ಯ ಪೂರ್ಣ ಶರೀರ ಸದೃಡವಾಗುವುದಕ್ಕೆ ಸಹಕಾರಿಯಾಗುವುದೆಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ರಿಪ್ಪನ್‍ಪೇಟೆ ಸವಿತಾ ಸಮಾಜ ಹಾಗೂ ವಿನಾಯಕ ಕ್ರಿಕೆಟರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟಗಳಿಂದ ದ್ವೇಷ ಅಸೂಯೆ ದೂರವಾಗುವ ಮೂಲಕ ಮನಸ್ಸು ಗಟ್ಟಿಗೊಳಿಸುವ ಶಕ್ತಿಯಿದ್ದು, ಸದೃಡ ಸಮಾಜ ನಿರ್ಮಿಸುವ ಶಕ್ತಿ ಯುವಜನಾಂಗಕ್ಕೆ ಬರಬೇಕಿದೆ. ಮಾದಕ ವಸ್ತುಗಳ ಅತಿಯಾದ ಸೇವನೆಯಿಂದಾಗಿ ನಮ್ಮ ಯುವಕರು ಹಾಳಾಗುತ್ತಿದ್ದಾರೆ.ಆದಷ್ಟು ಮಾದಕ ವಸ್ತುಗಳ ಸೇವನೆಯಿಂದ ದೂರವಿರುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಿಸುವತ್ತ ಮುಂದಾಗುವಂತೆ ಕರೆ ನೀಡಿದರು.

ಸವಿತಾ ಸಮಾಜದ ಅಧ್ಯಕ್ಷ ಸಿದ್ದೇಶ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಆತಿಥಿಗಳಾಗಿ ಮಾಜಿ ಸಚಿವ ಹರತಾಳು ಹಾಲಪ್ಪ, ಶಿವಮೊಗ್ಗ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಬಾಲು ಎಂ.ಜಿ.,ಗ್ರಾಮ ಪಂಚಾಯಿತಿ ಅದ್ಯಕ್ಷೆ ಧನಲಕ್ಷ್ಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ ಅಲುವಳ್ಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಸಬ್‍ಇನ್ಸ್ಪೆಕ್ಟರ್‌ ಬಿ.ಪಿ.ರಾಜುರೆಡ್ಡಿ, ಜಿಲ್ಲಾ ಯುವಘಟಕ ಶಿಕಾರಿಪುರ ಸವಿತ ಸಮಾಜದ ಆಧ್ಯಕ್ಷ ರಾಘವೇಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಅಸೀಫ್ ಭಾಷಾ, ನಿರೂಪ್‌ ಕುಮಾರ್‌ ಹಾಗೂ ಸವಿತ ಸಮಾಜ ಘಟಕದ ಪದಾಧಿಕಾರಿಗಳು ಕ್ರೀಡಾ ಅಭಿಮಾನಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ