ಬಾಬುಜೀ ಮಾರ್ಗದರ್ಶನದಲ್ಲಿ ಯುವಕರು ಸಾಗಲಿ

KannadaprabhaNewsNetwork |  
Published : Apr 06, 2026, 02:15 AM IST
ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಾಬು ಜಗಜೀವನ್ ರಾಮ್ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಬಾಬು ಜಗಜೀವನ್ ರಾಮ್ ಆದರ್ಶ ಸಿದ್ಧಾಂತ ಪ್ರತಿಯೊಬ್ಬರು ಪಾಲಿಸಿಕೊಂಡು ಬರಬೇಕು, ಜಗಜೀವನ್ ರಾಮ್ ತಮ್ಮ ಅಧಿಕಾರಾವಧಿಯಲ್ಲಿ ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ

ಕುಕನೂರು: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಯುವಕರು ಸಾಗಿ ಮುಂದೆ ಬರಬೇಕು ಎಂದು ಮಾಜಿ ತಾ ಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಾಬು ಜಗಜೀವನ್ ರಾಮ್ 119ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಜಗಜೀವನ್ ರಾಮ್ ಹಲವು ಕಷ್ಟ ಅನುಭವಿಸಿ ಅನೇಕ ಸವಾಲು ಎದುರಿಸಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡರು, ದೇಶದ ಉನ್ನತ ಹುದ್ದೆ ಉಪ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿ ಹಸಿರು ಕ್ರಾಂತಿ ಹರಿಕಾರರಾಗಿ ಖ್ಯಾತಿ ಪಡೆದರು, ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವಕರು ಸಾಗಬೇಕು, ರಾಜಕೀಯದಲ್ಲಿ ಬೆಳೆದು ಮುಂದೆ ಬರಬೇಕು, ಒಗ್ಗಟಾಗಿ ಇದ್ದು ಪ್ರತಿಯೊಬ್ಬ ಮಹಾನ್ ನಾಯಕರ ಆದರ್ಶ ಪಾಲಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ದೊರಕಬೇಕು ಎಂದು ಹೇಳಿದರು.

ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು ಮಾತನಾಡಿ, ಬಾಬು ಜಗಜೀವನ್ ರಾಮ್ ಆದರ್ಶ ಸಿದ್ಧಾಂತ ಪ್ರತಿಯೊಬ್ಬರು ಪಾಲಿಸಿಕೊಂಡು ಬರಬೇಕು, ಜಗಜೀವನ್ ರಾಮ್ ತಮ್ಮ ಅಧಿಕಾರಾವಧಿಯಲ್ಲಿ ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ.ಅಂತಹ ಮಹಾನ್ ನಾಯಕರ ಜಯಂತಿ ಅರ್ಥಪೂರ್ಣವಾಗಿ ಆಚರಿಸಿ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ ತಾಪಂ ಇಓ ಸಂತೋಷ ಪಾಟೀಲ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ವಿಜಯಕುಮಾರ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಪಂ ಸದಸ್ಯ ರಾಮಣ್ಣ ಬಂಕದಮನಿ, ಯಮನೂರಪ್ಪ ಗೋರ್ಲೆಕೊಪ್ಪ, ಪರಶುರಾಮ ಸಕ್ರನ್ನವರ, ರಮೇಶ್ ಶಾಸ್ತ್ರಿ, ಶಿವಪ್ಪ ಭಂಡಾರಿ, ಬಸವರಾಜ ಬೂದಗುಂಪ, ಭೀಮಣ್ಣ ಗುಡದಳ್ಳಿ, ನಿಂಗಪ್ಪ ಗೋರ್ಲೆಕೊಪ್ಪ, ಮಹಾಂತೇಶ್ ಆರುಬೆರಳಿನ, ಲಕ್ಷ್ಮಣ್ ಬಾರಿಗೀಡದ, ಮಲ್ಲಿಕಾರ್ಜುನ್ ಗೋರ್ಲೆಕೊಪ್ಪ, ಶಂಕರ ಭಂಡಾರಿ, ಲಕ್ಷ್ಮಣ್ ಕಾಳಿ ನಿಂಗರಾಜ್ ಅಪ್ಪು, ವಿರೇಶ ಭಂಡಾರಿ, ಶ್ರೀಧರ್ ಭಂಡಾರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜೀ, ಅಂಬೇಡ್ಕರ್‌ ಸಮಾಜದ ಎರಡು ಕಣ್ಣುಗಳಿದ್ದಂತೆ
ದಲಿತೋದ್ಧಾರಕ ಬಾಬು ಜಗಜೀವನರಾಮ್