ಬಸವಣ್ಣನ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚು ಪಾಲ್ಗೊಳ್ಳಲಿ: ಡಾ.ಬಸವಪ್ರಭು ಸ್ವಾಮೀಜಿ

KannadaprabhaNewsNetwork |  
Published : May 02, 2025, 12:14 AM IST
1ಕೆಡಿವಿಜಿ 45ದಾವಣಗೆರೆಯಲ್ಲಿ ಬಸವ ಜಯಂತಿ, ಅಭಿನಂದನಾ ಸಮಾರಂಭದ ಅಂಗವಾಗಿ ನಡೆದ ಬೈಕ್ ರ‍್ಯಾಲಿಗೆ ಡಾ.ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು. ಅಭಾವೀಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಐಗೂರು ಸಿ.ಚಂದ್ರಶೇಖರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಮಾಜಿ ಮೇಯರ್ ಎಸ್.ಟಿ.ವೀರೇಶ ಇತರರು ಇದ್ದರು. | Kannada Prabha

ಸಾರಾಂಶ

ಬಸವ ಜಯಂತಿ ಉತ್ಸವ ಸಮಿತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ, ತಾಲೂಕು ಘಟಕ, ಯುವ ಘಟಕ, ಮಹಿಳಾ ಘಟಕ, ಎಲ್ಲ ಬಸವ ಸಂಘಟನೆಗಳು, ಬಸವ ಭಕ್ತರ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಿರುವುದು ಹೆಮ್ಮೆ ಎನಿಸಿದೆ.

ಬಸವ ಜಯಂತಿ, ಅಭಿನಂದನಾ ಸಮಾರಂಭ । ಅದ್ಧೂರಿ ಬೈಕ್ ರ‍್ಯಾಲಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಸವ ಜಯಂತಿ ಉತ್ಸವ ಸಮಿತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ, ತಾಲೂಕು ಘಟಕ, ಯುವ ಘಟಕ, ಮಹಿಳಾ ಘಟಕ, ಎಲ್ಲ ಬಸವ ಸಂಘಟನೆಗಳು, ಬಸವ ಭಕ್ತರ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಿರುವುದು ಹೆಮ್ಮೆ ಎನಿಸಿದೆ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲಗೊಳ್ಳಬೇಕು ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಕಾಯಿಪೇಟೆಯ ಬಸವೇಶ್ವರ ದೇವಸ್ಥಾನದ ಮುಂಭಾಗ ಗುರುವಾರ ಬೆಳಿಗ್ಗೆ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿವಿಧ ಬಸವ ಪರ ಸಂಘಟನೆಗಳ ಸಹಯೋಗದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ದಾವಣಗೆರೆಯ ಎಲ್ಲಾ ಬಸವ ಭಕ್ತರು ಸೇರಿ ವಿಶ್ವ ಗುರು ಬಸವಣ್ಣನವರ ಜಯಂತಿ ಆಚರಿಸುತ್ತಿದ್ದೇವೆ. ಈ ಬೈಕ್ ರ‍್ಯಾಲಿ ನಗರದಾದ್ಯಂತ ಬಸವ ಜ್ಯೋತಿಯನ್ನು ಬೆಳಗಲಿದೆ. ಈ ಕಾರ್ಯಕ್ರಮದಲ್ಲಿ ಸರ್ವ ಸಮಾಜದವರು ಭಾಗವಹಿಸಿದ್ದಾರೆ ಎಂದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಶಿವಕುಮಾರ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ದೇಶ, ರಾಜ್ಯ ಸೇರಿದಂತೆ ಎಲ್ಲೆಡೆ ಬಸವ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಇದನ್ನು ಮನಗಂಡು ದಾವಣಗೆರೆಯಲ್ಲಿ ಪ್ರಾರಂಭವಾದ ಬಸವ ಜಯಂತಿಯನ್ನು ಹರ್ಡೆಕರ್ ಮಂಜಪ್ಪ, ಮೃತ್ಯುಂಜಯ ಅಪ್ಪಗಳನ್ನು ಸ್ಮರಣೆ ಮಾಡುತ್ತ, ಇಂದು ಅದ್ಧೂರಿಯಾಗಿ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದೇವೆ ಎಂದರು.

ರ‍್ಯಾಲಿಯು ಕಾಯಿಪೇಟೆ ಬಸವೇಶ್ವರ ದೇವಸ್ಥಾನದಿಂದ ಆರಂಭವಾಗಿ ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆ, ಹಗೇದಿಬ್ಬ ಸರ್ಕಲ್, ಶ್ರೀ ದುರ್ಗಾಂಬಿಕಾ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮ (ಅರುಣ ಟಾಕೀಸ್) ಸರ್ಕಲ್, ರಾಮ್ ಅಂಡ್ ಕೋ ವೃತ್ತ, ಸಿಜಿ ಆಸ್ಪತ್ರೆ ರಸ್ತೆ, ಗುಂಡಿ ಮಹದೇವಪ್ಪ ಸರ್ಕಲ್, ಡೆಂಟಲ್ ಕಾಲೇಜು ರಸ್ತೆ, ವಿದ್ಯಾನಗರ ಎಸ್.ಎಸ್.ಕಲ್ಯಾಣ ಮಂಟಪ, 60 ಅಡಿ ರಸ್ತೆ, ಎಚ್‌ಕೆಆರ್ ಸರ್ಕಲ್ ರಸ್ತೆ, ಕೆಟಿಜೆ ನಗರ ಪೊಲೀಸ್ ಠಾಣೆ ರಸ್ತೆ, ಡಾಂಗೆ ಪಾರ್ಕ್ ರಸ್ತೆ, ಶಿವಪ್ಪಯ್ಯ ಸರ್ಕಲ್ ಮೂಲಕ ಜಯದೇವ ವೃತ್ತದಲ್ಲಿ ಕೊನೆಗೊಂಡಿತು.

ಅಭಾವೀಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಐಗೂರು ಸಿ.ಚಂದ್ರಶೇಖರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಮಾಜಿ ಮೇಯರ್ ಎಸ್.ಟಿ.ವೀರೇಶ, ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ, ಶಿವಗಂಗಾ ಶ್ರೀನಿವಾಸ, ತಾಲೂಕು ಘಟಕದ ಅಧ್ಯಕ್ಷ ಶಂಭು ಉರೆಕೊಂಡಿ, ಸಿದ್ದಗಂಗಾ ಸಂಸ್ಥೆಯ ನಿರ್ದೇಶಕ ಡಿ.ಎಸ್.ಹೇಮಂತ್, ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್, ಎಚ್.ಎನ್.ಶಿವಕುಮಾರ್, ಶಿವನಗೌಡ ಪಾಟೀಲ, ಸೋಗಿ ಗುರು, ಧನಂಜಯ, ಬಸವ ಕಲಾಲೋಕದ ಶಶಿಧರ್, ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶ್, ಸ್ಪೂರ್ತಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆವರಗೆರೆ ರುದ್ರಮುನಿ, ವಚನಾಮೃತ ಬಳಗದ ಸೌಮ್ಯ ಸತೀಶ, ಪ್ರೇಮಾ ಮಂಜುನಾಥ, ವಿನುತಾ ರವಿ, ವಿರಕ್ತಮಠ ಸಮಿತಿಯ ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ, ಅಕ್ಕಿ ಪ್ರಭು, ಅರುಣ, ಚೇತನ್, ನರೇಶ್, ನ್ಯಾಮತಿ ಶಿವಕುಮಾರ್, ಅಡಿವೆಪ್ಪ, ಮಲ್ಲಿಕಾರ್ಜುನ ಜವಳಿ, ಎ.ಎಚ್.ಸಿದ್ದಲಿಂಗೇಶ್, ಶಿವಪ್ರಸಾದ ಕರ್ಜಗಿ, ಎಂ.ಎಸ್‌.ಚನ್ನಬಸವ, ಕೆ.ಸಿ.ಉಮೇಶ, ಡೋಲಿ ಚಂದ್ರು, ಬಸವ ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?