ಉತ್ತಮ ಆರೋಗ್ಯಕ್ಕಾಗಿ ದೈನಂದಿನ ಚಟುವಟಿಕೆ ನಿರ್ವಹಿಸಬೇಕು. ನಡಿಗೆ, ವ್ಯಾಯಾಮ, ಆಟೋಟಗಳಲ್ಲಿ ಭಾಗವಹಿಸಬೇಕು.
ಹೂವಿನಹಡಗಲಿ: ಯುವಕರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ವೈದ್ಯ ಡಾ. ಎಸ್. ಸುಭಾಶ್ಚಂದ್ರ ಅಭಿಪ್ರಾಯಪಟ್ಟರು.
ಜೆಸಿಐ ಹೂವಿನಹಡಗಲಿ ರಾಯಲ್ ಪ್ರಣವ್ 2024 ಘಟಕವು, ಐಪಿಎಸ್ ಲಲಿತ್ ಫಾರ್ಮ್ ಹೌಸ್‌ನಲ್ಲಿ ಆಯೋಜಿಸಿದ್ದ, ಜೆಸಿಐ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತಮ ಆರೋಗ್ಯಕ್ಕಾಗಿ ದೈನಂದಿನ ಚಟುವಟಿಕೆ ನಿರ್ವಹಿಸಬೇಕು. ನಡಿಗೆ, ವ್ಯಾಯಾಮ, ಆಟೋಟಗಳಲ್ಲಿ ಭಾಗವಹಿಸಬೇಕು. ಹಸಿರು ಸೊಪ್ಪು, ಬೇಳೆ-ಕಾಳು, ತರಕಾರಿ ಹೆಚ್ಚು ಸೇವಿಸಿ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆ ಮತ್ತು ಕಾಳಜಿಯ ಬಗ್ಗೆ ಪ್ರಶಂಸಿಸಿದರು.
ಡಾ. ಮಲ್ಲಿಕಾರ್ಜುನಗೌಡ ಮಾತನಾಡಿ, ಏಳಿಗೆಗಾಗಿ ಇಂತಹ ಸಂಸ್ಥೆಗಳು ದುಡಿಯುತ್ತಿರುವುದು ಗಮನಾರ್ಹ ಹಾಗೆ, ತಾವು ಜೆಸಿ ಸಂಸ್ಥೆಯೊಟ್ಟಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಚ್.ಜಿ.ಎಫ್. ಡಾ.ಜೆ.ಡಿ. ಉಮೇಶ್, ತಮ್ಮ ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಕಾರ್ಯಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಲಲಿತ್ ಜೈನ್ ಮಾತನಾಡಿ, ಜೆಸಿ ಸಂಸ್ಥೆ ಕೈಗೊಂಡ ಹಲವಾರು ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಸಿಐನ ಹಿಂದಿನ ಅವಧಿಯ ಅಧ್ಯಕ್ಷರಾದ ಗಾಡ್ವಿನ್ ಸುಧಾಕರ್, ಸಂತೋಷ ಕೊಟಗಿ, ದ್ವಾರಕೀಶ್ ರೆಡ್ಡಿ, ಸೋಮಶೇಖರ್, ಸಂಸ್ಥೆಯ ಕಾರ್ಯದರ್ಶಿ ಕೋಡಿಹಳ್ಳಿ ವಿನಾಯಕ, ರಫೀನಾ ಬೇಗಂ,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.