ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮುರಳೀಧರ ಭಾಗವತ್ಚಾರಿಟಬಲ್ಫೌಂಡೇಷನ್ ಮತ್ತು ವೀರವ್ರತಮ್ಫೌಂಡೇಷನ್ ಆಯೋಜಿಸಿದ್ದ ಸಾರ್ವಜನಿಕ ಸ್ಥಳ ಮತ್ತು ಕೆಲಸದ ಸ್ಥಳದಲ್ಲಿನ ಮಹಿಳೆಯರ ಸುರಕ್ಷತೆ ಕುರಿತ ಈ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಲವು ಮಹಿಳಾ ಸಂಘಟನೆಗಳು ಪಾಲ್ಗೊಂಡಿದ್ದವು.
ಕೆ.ಆರ್.ಎಸ್ರಸ್ತೆಯ ಪೂಜಾ ಭಾಗವತ್ಸ್ಮಾರಕ ಮಹಾಜನ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಆಯೋಗವು ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಿದೆ.ದೇಶದ ದ್ವಿತೀಯ ದರ್ಜೆ ನಗರಗಳಲ್ಲಿ ಈ ವಿಚಾರ ಸಂಕರಣ ಆಯೋಜಿಸುವ ಉದ್ದೇಶದಿಂದ ಮೈಸೂರಿನಲ್ಲಿ ಆಯೋಜಿಸಿದ್ದು, ಕಾನೂನಿನ ಪರಿಣಾಮಕಾಗಿ ಜಾರಿಗೊಳಿಸಿ ಮಹಿಳಾ ಸುರಕ್ಷತೆಯನ್ನು ಹೆಚ್ಚು ಮಾಡುವ ಉದ್ದೇಶ ಹೊಂದಿದೆ.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಆಯೋಗದ ಅಧ್ಯಕ್ಷೆ ವಿಜಯಾ ಭಾರತಿ ಸಯಾನಿ, ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಗೊಳಿಸುವ ಉದ್ದೇಶದಿಂದ ಕಾನೂನು ನೆರವು ಮತ್ತು ಮಹಿಳೆಯರಿಗಾಗಿ ನೀತಿ ರೂಪಿಸಿದೆ. ಅವುಗಳ ಪರಿಣಾಮಕಾರಿ ಜಾರಿ ಸಂಬಂಧ ಚರ್ಚಿಸಲಾಗುತ್ತಿದ. ಪ್ರಮುಖವಾಗಿ ಮಹಿಳೆಯರ ಕೆಲಸದ ಸ್ಥಳ ಮತ್ತು ಸಾರ್ಜವಿಕ ಸ್ಥಗಳಲ್ಲಿನ ರಕ್ಷಣೆ ಸಂಬಂಧ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.
ಸಿಎಫ್ಟಿಆರ್ಐ ನಿರ್ದೇಶಕಿ ಡಾ. ಶ್ರೀದೇವಿ ಅನುಪಮಾ ಸಿಂಗ್, ಛಾಯಾ ನಂಜಪ್ಪ, ಮಾಜಿ ಸಚಿವ ಎಸ್.ಎ. ರಾಮದಾಸ್ಸೇರಿದಂತೆ ಅನೇಕರು ಸಲಹೆ ಸೂಚನೆ ನೀಡಿದರು.