ಕನ್ನಡಪ್ರಭ ವಾರ್ತೆ ಕಲಬುರಗಿ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಹೈಕಶಿ ಸಂಸ್ಥೆಯ ಎಂಎಸ್ಐ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆಯಲ್ಲಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಮೊದಲು ತಮ್ಮಲ್ಲಿರುವ ಶಕ್ತಿ, ಸಾಮರ್ಥ್ಯದ ಬಗ್ಗೆ ಅರಿಯಬೇಕು, ಅದರಲ್ಲೂ ಗ್ರಾಮೀಣ ಯುವಜನತೆ ನಗರದ ಯುವಕರನ್ನು ಹೋಲಿಸಿಕೊಂಡು ಕೀಳರಿಮೆಯಲ್ಲಿ ನರಳುವುದನ್ನು ಕಂಡಿದ್ದೇನೆ. ಯಾರಿಗೇನು ಕಮ್ಮಿ ತಾವಲ್ಲವೆಂಬುದನ್ನು ಅರಿತುಕೊಂಡು ಸಮಾಜಮುಖಿ ಕೆಲಸಗಳತ್ತ ಲಕ್ಷ ಇಡಬೇಕು, ಹಾಗಂತ ಬೇರೆಲ್ಲವನ್ನು ಬಿಟ್ಟು ಬಿಡಬೇಕು ಅಂತಲ್ಲ, ಎಲ್ಲರ ಜೊತೆಗೆ, ಎಲ್ಲ ಸಕಾರಾತ್ಮಕ ವಿಷಯಗಳಲ್ಲಿ ಆಸಕ್ತಿ ತೋರುವ ಮೂಲಕ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಬೇಕೆಂದರು.ಸ್ವಯಂ ಸೇವೆ ಎನ್ನುವುದು ತುಂಬ ಮಹತ್ವದ್ದಾಗಿದೆ. ಎಲ್ಲರು ತಮ್ಮ ಇತಿಮಿತಿಗಳಲ್ಲಿ ಜವಾಬ್ದಾರಿ, ಹೊಣೆಗಾರಿಕೆ ಅರಿತು ದೇಶ ಕಟ್ಟುವ ಸೇವೆಗಳಲ್ಲಿ, ಪರೋಪಕಾರದ ಸೇವೆಗಳಲ್ಲಿ ತೊಡಗುವ ಮೂಲಕ ತಮ್ಮ ಭವಿತವ್ಯ ಕಟ್ಟಿಕೊಳ್ಳಬೇಕು, ಆ ಮೂಲಕ ದೇಶದ ಭವಿಷ್ಯಕ್ಕೂ ಭದ್ರಬುನಾದಿ ಹಾಕುವವರಾಗಬೇಕೆಂದರು.
ಸ್ವಯಂ ಸೇವೆಯ ಮಹತ್ವ ಸಾರುತ್ತಲೇ ಸಮಾಜ ಸೇವೆಯನ್ನು ಪರಿಚಯಿಸಿದ ಡಾ. ಹತ್ತಿ ಯುವಕರು ಓದಿನ ಜೊತೆಗೇ ಸಮಾಜದಲ್ಲ್ಲಿ ತಾವು ನಿಭಾಯಿಸಬೇಕಾಗಿರುವ ಪಾತ್ರ ಅರಿತು ಸರಿಯಾಗಿ ನಿಭಾಯಿಸುತ್ತ ಸಾಗಿದಲ್ಲಿ ತಮ್ಮ ಭವಿಷ್ಯ ತಾವೇ ಕಟ್ಟಿಕೊಳ್ಳಲು ಸಾಧ್ಯವೆಂದರು.
ಕಾರ್ಯಕ್ರಮದ ವೇದಿಕೆಯ ಮೇಲೆ ರೆಡ್ ಕ್ರಾಸ್ ಕಲ್ಬುರ್ಗಿ ಜಿಲ್ಲಾ ಶಾಖೆಯ ಸಭಾಪತಿ ಅರುಣಕುಮಾರ ಲೋಯಾ, ಉಪ ಸಭಾಪತಿ, ಸಮಾಜ ಸೇವಕಿ ಭಾಗ್ಯಲಕ್ಷ್ಮಿ ಎಂ, ರವೀಂದ್ರ ಶಾಬಾದಿ, ಎಂಎಸ್‌ಐ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಬೀರನಹಳ್ಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಜಂಟಿ ಕಾರ್ಯದರ್ಶಿ ಸುರೇಶ್ ಬಡಿಗೇರ್, ಕಾರ್ಯಕ್ರಮ ಸಂಯೋಜಕ ರಾಜೇ ಶಿವಶರಣಪ್ಪ, ಸಯ್ಯದ್ ಸನಾವುಲ್ಲಾ, ರಾಸೇಯೋ ಅಧಿಕಾರಿ ಡಾ. ಶಂಕರಪ್ಪ, ಡಾ. ಪ್ರಾಣೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.