ಕುಂಚಬ್ರಹ್ಮ ಮಿಣಜಗಿ ಹೆಸರಲ್ಲಿ ರಾಷ್ಟೀಯ ಟ್ರಸ್ಟ್ ಆಗಲಿ

KannadaprabhaNewsNetwork |  
Published : Oct 01, 2025, 01:01 AM IST
28ಎಚ್‌ಯುಬಿ34ಡಾ.ವಿ.ಬಿ. ನಿಟಾಲಿ ದಸರಾ ಚಿತ್ರೋತ್ಸವ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾರ್ವಜನಿಕ ವಲಯದಲ್ಲಿ ಕಲಾವಿದ ಮತ್ತು ಕಲಾ ಗ್ಯಾಲರಿ ಬೆಳೆಸುವುದು ಹಾಗೂ ಸಂರಕ್ಷಿಸುವುದು ಮುಖ್ಯವಾದ ಕಾರ್ಯವಾಗಿದೆ. ಕಲಾ ಶಾಲೆಯಲ್ಲಿ ಮೇಧಾವಿ ಕಲಾವಿದರ ಕಲಾಕೃತಿಯಿಂದ ಅನೇಕ ವಿಷಯಗಳು ಗ್ರಹಿಸಬಹುದಾಗಿದೆ.

ಹುಬ್ಬಳ್ಳಿ:

ರಾಜ್ಯದ ವಿವಿಧ ಸಾಧಕರ ಹೆಸರಿನಲ್ಲಿ ರೂಪಿಸಿದ ಟ್ರಸ್ಟ್‌ಗಳಂತೆ ನಾಡಿನ ಶ್ರೇಷ್ಠ ಚಿತ್ರಕಲಾವಿದ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಿಗಿ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿರ್ಮಿಸಬೇಕೆಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಡಾ. ಬಸವರಾಜ ಕಲೆಗಾರ ಹೇಳಿದರು.

ನಗರದಲ್ಲಿ ಕುಂಚಬ್ರಹ್ಮ ಡಾ ಎಂ.ವಿ. ಮಿಣಜಗಿ ಕಲಾಮಂದಿರ ಸಮಿತಿ ವತಿಯಿಂದ ನಡೆಯುತ್ತಿರುವ ದಸರಾ ಚಿತ್ರೋತ್ಸವ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಮಾತನಾಡಿದ ಅವರು, ಮಿಣಜಿಗಿ ಅವರಂತ ಶ್ರೇಷ್ಠ ಕಲಾವಿದರನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಮಾಡಬೇಕು ಎಂದರು.

ಡಾ. ವಿ.ಬಿ. ನಿಟಾಲಿ ಮಾತನಾಡಿ, ಕಲಾವಿದರ ಕಲ್ಪನೆಯಿಂದ ಬರುವ ಕಲಾಕೃತಿ ಅತ್ಯಂತ ಶ್ರೇಷ್ಠ ವಾಗಬಲ್ಲದಾಗಿದೆ ಎಂದರು.

ಛಾಯಾಗ್ರಾಹಕ ಶಶಿಧರ ಸಾಲಿ ಮಾತನಾಡಿ, ಸಾರ್ವಜನಿಕ ವಲಯದಲ್ಲಿ ಕಲಾವಿದ ಮತ್ತು ಕಲಾ ಗ್ಯಾಲರಿ ಬೆಳೆಸುವುದು ಹಾಗೂ ಸಂರಕ್ಷಿಸುವುದು ಮುಖ್ಯವಾದ ಕಾರ್ಯವಾಗಿದೆ. ಕಲಾ ಶಾಲೆಯಲ್ಲಿ ಮೇಧಾವಿ ಕಲಾವಿದರ ಕಲಾಕೃತಿಯಿಂದ ಅನೇಕ ವಿಷಯಗಳು ಗ್ರಹಿಸಬಹುದಾಗಿದೆ ಎಂದು ಹೇಳಿದರು.

ಸೆ. 28ರಿಂದ ಅ. 15ರ ವರೆಗೆ ವಿದ್ಯಾ ನಗರದ ಗುರುದತ್ತ ಭವನದ ಎದುರಿಗೆ ವಲಯ ಕಚೇರಿ 5 ಮೊದಲನೇ ಮಹಡಿಯಲ್ಲಿ ಬೆ‍ಳಗ್ಗೆ 4ರಿಂದ ಸಂಜೆ 6ರ ವರೆಗೆ ಪ್ರದರ್ಶನ ಜರುಗಲಿದೆ.

ಹಿರಿಯ ಕಲಾವಿದ ಆರ್.ಬಿ. ಗರಗ ಅಧ್ಯಕ್ಷೆತೆ ವಹಿಸಿದ್ದರು. ಈ ವೇಳೆ ಕೆ.ವಿ. ಶಂಕರ, ರಮೇಶ್ ಚಂಡಪ್ಪನವರ, ಮಂಜುನಾಥ ಕರಿಗಾರ, ಕೆ.ವಿ. ಮಂಜುಳಾ, ಅಜಯ ಯಡ್ರಾಮಿ, ಕುಮಾರ ಕಾಟೇನಹಳ್ಳಿ, ಸುರೇಶ ಅರ್ಕಸಾಲಿ, ದೇವೇಂದ್ರ ಬಡಿಗೇರ, ಸವಿತಾ ಬೆನಗಿ, ವಸಂತ ಬಳ್ಳಾರಿ, ಎಂ.ಎಸ್. ಲಂಗೋಟಿ, ಜಿ.ಆರ್. ಮಲ್ಲಾಪೂರ, ಸಿ.ಕೆ. ಯಡ್ರಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರಸಹಿತ ಇತಿಹಾಸಕಾರರನ್ನು ಪರಿಚಯಿಸಿ
ಬಿಜೆಪಿಯವರಿಗೆ ದ್ವೇಷ ಭಾಷಣ ಬೇಕಾ?: ಪದ್ಮರಾಜ್‌ ಪ್ರಶ್ನೆ