ಶಿಕ್ಷಣದ ಜೊತೆ ಸಂಸ್ಕಾರ ಇರಲಿ: ಶ್ರೀ

KannadaprabhaNewsNetwork |  
Published : Sep 30, 2024, 01:26 AM IST
ಹರಪನಹಳ್ಳಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಉಪ್ಪಾರ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಿತಿ ಇಲ್ಲದ ಜ್ಞಾನ ಒಂದು ಒಂದು ಸಾರಿ ಪಡೆದುಕೊಂಡರೆ ಬಂಡೆಗಲ್ಲು ಹಾಗೆ ಗಟ್ಟಿ ಆಗುತ್ತದೆ. ನೀನು ಇರುವರೆಗೂ ಜ್ಞಾನ ನಿನ್ನ ಜೊತೆಗಿರುತ್ತದೆ.

ಹರಪನಹಳ್ಳಿ: ಗುಣಮಟ್ಟದ ಶಿಕ್ಷಣ ಎಂದರೆ ಶಿಕ್ಷಣದ ಜೊತೆ ಸಂಸ್ಕಾರ ಇರಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಉಪ್ಪಾರ ನೌಕರರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ್ತಿ ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಸಾನಿದ್ಯ ವಹಿಸಿ ಭಾನುವಾರ ಮಾತನಾಡಿದರು.

ಮಿತಿ ಇಲ್ಲದ ಜ್ಞಾನ ಒಂದು ಒಂದು ಸಾರಿ ಪಡೆದುಕೊಂಡರೆ ಬಂಡೆಗಲ್ಲು ಹಾಗೆ ಗಟ್ಟಿ ಆಗುತ್ತದೆ. ನೀನು ಇರುವರೆಗೂ ಜ್ಞಾನ ನಿನ್ನ ಜೊತೆಗಿರುತ್ತದೆ. ವಿದ್ಯೆ ಪಡೆದ ಜ್ಞಾನಿ ಎಲ್ಲ ಕಡೆಗೆ ಗೌರವ ಪ್ರೀತಿಗೆ ಪಾತ್ರವಾಗುತ್ತಾರೆ ಎಂದು ಹೇಳಿದರು.

ಶಿಕ್ಷಣ ಜೊತೆಗೆ ಸಂಸ್ಕಾರ, ಸತ್ಕಾರ ಇರಬೇಕು. ಆಗ ಮಾತ್ರ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ತಂದೆ -ತಾಯಿಗಳಿಗೆ ರಾಜ್ಯಕ್ಕೆ ರಾಷ್ಟ್ರಕ್ಕೆ ಗೌರವ ಸಿಗುತ್ತದೆ. ಶಿಕ್ಷೆ ಇಲ್ಲದೇ ಶಿಕ್ಷಣ ಸಾಧ್ಯವಿಲ್ಲ ಎಂದು ಶ್ರೀಗಳು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ವಿಶೇಷ ಉಪನ್ಯಾಸ ನೀಡಿ, ಇದು ಸ್ಫೂರ್ತಿ ನೀಡುವಂತಹ ಕಾರ್ಯಕ್ರಮವಾಗಿದೆ. ನಾವು ಯಾವಾಗಲೂ ವಿಚಾರವಂತರಾಗಬೇಕು. ಬುದ್ಧಿವಂತರಾಗಬೇಕು. ಸೃಜನಶೀಲರಾದಾಗ ಮಾತ್ರ ಸುಸಜ್ಜಿತ ಸಮಾಜ ನಿರ‍್ಮಾಣವಾಗುತ್ತದೆ ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ಮೊಬೈಲ್‌, ಟಿವಿ, ಧಾರಾವಾಹಿಗಳಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಉಪ್ಪಾರರ ನೌಕರ ಸಂಘದ ಅಧ್ಯಕ್ಷ ಎಸ್.ಎನ್. ಚಂದ್ರಪ್ಪ ಮಾತನಾಡಿ, ಪ್ರತಿ ವರ್ಷ ನಾನು ಉಪ್ಪಾರ ಸಮಾಜಕ್ಕೆ ನನ್ನದೊಂದು ಚಿಕ್ಕ ಅಳಿಲು ಸೇವೆ ನೀಡುತ್ತೇನೆ ₹1 ಲಕ್ಷ ಬಡ ಮಕ್ಕಳಿಗೆ ಪುಸ್ತಕ ರೂಪದಲ್ಲಿ ನೀಡುತ್ತೇನೆ ಎಂದರು.

ಡಾ.ಉಮೇಶ್ ಬಾಬು ತಾಲೂಕು ಉಪ್ಪರ ನೌಕರ ಸಂಘಕ್ಕೆ ₹50 ಸಾವಿರ ಚೆಕ್‌ನ್ನು ನೀಡಿದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಸಂಗಪ್ಪನವರ ಮಾತನಾಡಿ. ತಬ್ಬಲಿ ಸಮುದಾಯಗಳು ಶಿಕ್ಷಣ ಸಂಘಟನೆ ಹೋರಾಟ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಎಂದರು.

ನೌಕರ ಸಂಘದ ಅಧ್ಯಕ್ಷ ಕೆ.ಅಂಜನಪ್ಪ, ಸಾರಿಗೆ ಘಟಕದ ವ್ಯವಸ್ಥಾಪಕಿ ಎಂ.ಮಂಜುಳಾ, ಉಪ್ಪಾರ ಸಮಾಜದ ಅಧ್ಯಕ್ಷ ಟಿ.ತಿಮ್ಮಪ್ಪ, ಕೆ.ತಿಮ್ಮಪ್ಪ ಸವಿತಾ ಎಂ., ಪಿ.ಗಣೇಶ, ಅಂಜಿನಪ್ಪ, ಪಿ.ಸುಮಾ, ಬಸವರಾಜ್ ಸಂಗಪ್ಪನವರು, ಕಾಡಜ್ಜಿ ಮಂಜುನಾಥ, ಎಸ್.ರಾಮಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಿ. ರಾಜಶೇಖರ್, ಪತ್ತಿನ ಸಂಘದ ಅಧ್ಯಕ್ಷ ಬಿ.ಚಂದ್ರಮೌಳಿ, ಸುಭದ್ರಮ್ಮ ಕೆ ಶೈಲಜಾ. ಕಬ್ಬಳ್ಳಿ ಗೀತಾ. ಗಿರಿಜಾ . ಲಕ್ಷ್ಮಿ ದೇವಿ.ನಾಗರಾಜ್ ಯು. ಹುಚ್ಚಪ್ಪ ಬಣಕಾರ್. ಬಸವರಾಜ ಎ ಅಗ್ನಿಶಾಮಕ ದಳ. ರಾಮಚಂದ್ರಪ್ಪ. ಪ್ರಕಾಶ ಯು. ಇದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ