ಮಾದಕ ವಸ್ತುಗಳ ವಿರುದ್ಧ ಇನ್ನಷ್ಟು ಜಾಗೃತಿಯಾಗಲಿ

KannadaprabhaNewsNetwork |  
Published : Sep 04, 2026, 02:30 AM IST
ರೋಟರಿ ಕ್ಲಬ್ ಆಫ್ ಬೇಲೂರು, ಧಾರವಾಡ ಗ್ರೋತ್ ಸೆಂಟರ್ ಇಂಡಸ್ಟ್ರೀಸ್ ಅಸೋಸಿಯೇಷನ್ ​​ಸಹಯೋಗದೊಂದಿಗೆ ಗುರುವಾರ ಬೇಲೂರಿನ ಸಿಡಾಕ್‌ ಸಭಾಂಗಣದಲ್ಲಿ 'ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಕಾರ್ಯಕ್ರಮ ಉದ್ಘಾಟನೆ. | Kannada Prabha

ಸಾರಾಂಶ

ಪ್ರಸ್ತುತ ಆಧುನಿಕ ಮಾಧ್ಯಮಗಳ ಪ್ರಭಾವದಿಂದ ಯುವ ಜನರು ಮಾದಕ ವಸ್ತುಗಳ ಬೆನ್ನು ಬಿದ್ದಿದ್ದಾರೆ. ಉತ್ತಮ ಶಿಕ್ಷಣ, ಉದ್ಯೋಗ ಪಡೆದು ಒಳ್ಳೆಯ ಭವಿಷ್ಯದೊಂದಿಗೆ ದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾಲು ನೀಡಬೇಕಾದ ಯುವ ಜನಾಂಗ ಹತ್ತು-ಹಲವು ಮಾದಕ ವಸ್ತುಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದೆ.

ಧಾರವಾಡ:

ರೋಟರಿ ಕ್ಲಬ್ ಆಪ್‌ ಬೇಲೂರು, ಧಾರವಾಡ ಗ್ರೋತ್ ಸೆಂಟರ್ ಇಂಡಸ್ಟ್ರೀಸ್ ಅಸೋಸಿಯೇಷನ್ ​​ಸಹಯೋಗದೊಂದಿಗೆ ಗುರುವಾರ ಬೇಲೂರಿನ ಸಿಡಾಕ್‌ ಸಭಾಂಗಣದಲ್ಲಿ ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಯಿತು.

ರೋಟರಿ ಅಧ್ಯಕ್ಷ ಸುಧೀಂದ್ರ ದೇಶಪಾಂಡೆ, ಪ್ರಸ್ತುತ ಆಧುನಿಕ ಮಾಧ್ಯಮಗಳ ಪ್ರಭಾವದಿಂದ ಯುವ ಜನರು ಮಾದಕ ವಸ್ತುಗಳ ಬೆನ್ನು ಬಿದ್ದಿದ್ದಾರೆ. ಉತ್ತಮ ಶಿಕ್ಷಣ, ಉದ್ಯೋಗ ಪಡೆದು ಒಳ್ಳೆಯ ಭವಿಷ್ಯದೊಂದಿಗೆ ದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾಲು ನೀಡಬೇಕಾದ ಯುವ ಜನಾಂಗ ಹತ್ತು-ಹಲವು ಮಾದಕ ವಸ್ತುಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮಂತ ಕ್ಲಬ್‌ಗಳು ಜನರಲ್ಲಿ ಇಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಮಹತ್‌ ಕಾರ್ಯ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿರೀಶ ಉಪ್ಪಿನ, ಮಾದಕ ದ್ರವ್ಯ ಸೇವನೆ ವಿರುದ್ಧ ಇನ್ನಷ್ಟು ಕಠಿಣ ಕಾನೂನು ಜಾರಿಯಾಗಬೇಕೆಂದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಾತನಾಡಿದರು. ಡಿಮ್ಹಾನ್ಸ್ ನಿರ್ದೇಶಕ ಅರುಣಕುಮಾರ ಚವ್ಹಾಣ, ಕರ್ನಾಟಕ ಮತ್ತು ಧಾರವಾಡದಲ್ಲಿ ಮಾದಕ ವಸ್ತುಗಳ ದುರುಪಯೋಗದ ಪ್ರಸ್ತುತ ಪರಿಸ್ಥಿತಿ ಹಾಗೂ ಅಂಕಿ-ಅಂಶಗಳ ಕುರಿತು ವಿವರ ನೀಡಿದರು. ಅಥರ್ವ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ಕುರಿತಾದ ಜಾಗೃತಿ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಬಿಂಬಿಸುವ ಕಿರು ನಾಟಕ ಪ್ರದರ್ಶಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಪರಶುರಾಮ, ಮಂಜುನಾಥ ಗೋಕವಿ ಇದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂದೀಪ ಹೊನ್ನಾವರ, ಅಶೋಕ ಸರದೇಸಾಯಿ, ರವಿ ಹುಂಜೆ ಮತ್ತು ಪ್ರಕಾಶ ಚಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ್ಗಕ್ಕೆ ಗ್ಯಾರಂಟಿ ಯೋಜನೆ ವರದಾನ: ಪಿ.ಟಿ. ಪರಮೇಶ್ವರ ನಾಯ್ಕ
ಬಿಜೆಪಿ ಪಾದಯಾತ್ರೆ ಇಂದು ಕಾರಟಗಿ ಪ್ರವೇಶ