ಹಬ್ಬಗಳ ಆಚರಣೆಯಲ್ಲಿ ಸೌಹಾರ್ದತೆ ಇರಲಿ

KannadaprabhaNewsNetwork |  
Published : Mar 12, 2025, 12:52 AM IST
ತಾಳಿಕೋಟೆ 2 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಹಿಂದಿನಿಂದ ಹಬ್ಬಗಳ ಆಚರಣೆಗಳು ಕೋಮು ಸೌಹಾರ್ದತೆ ಭಾವನೆಯನ್ನು ಮೂಡಿಸುತ್ತ ಬಂದಿವೆ. ಆಯಾ ಹಬ್ಬಗಳನ್ನು ತಿಳಿದು ಆಚರಣೆ ಮಾಡಿದಲ್ಲಿ ಸೌಹಾರ್ದತೆ ಮೂಡಿಬರಲಿದೆ ಎಂದು ಮುದ್ದೇಬಿಹಾಳ ಸಿಪಿಐ ಮಹ್ಮದಪಶಿಉದ್ದೀನ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಿಂದಿನಿಂದ ಹಬ್ಬಗಳ ಆಚರಣೆಗಳು ಕೋಮು ಸೌಹಾರ್ದತೆ ಭಾವನೆಯನ್ನು ಮೂಡಿಸುತ್ತ ಬಂದಿವೆ. ಆಯಾ ಹಬ್ಬಗಳನ್ನು ತಿಳಿದು ಆಚರಣೆ ಮಾಡಿದಲ್ಲಿ ಸೌಹಾರ್ದತೆ ಮೂಡಿಬರಲಿದೆ ಎಂದು ಮುದ್ದೇಬಿಹಾಳ ಸಿಪಿಐ ಮಹ್ಮದಪಶಿಉದ್ದೀನ ಹೇಳಿದರು.

ಹೋಳಿ, ರಂಜಾನ್ ಹಬ್ಬ ಮತ್ತು ಶರಣಮುತ್ಯಾರ ರಥೋತ್ಸವ ಕುರಿತು ಸೋಮವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ತಾಳಿಕೋಟೆ ಪಟ್ಟಣದಲ್ಲಿ ೩ ಹಬ್ಬಗಳ ಆಚರಣೆ ಒಂದೇ ಬಾರಿಗೆ ಬಂದಿದೆ. ಹೋಳಿ ಹಬ್ಬ, ರಂಜಾನ್‌ ಹಬ್ಬ ಹಾಗೂ ಶ್ರೀ ಸಾಂಭಪ್ರಭು ಶರಣಮುತ್ಯಾ ರಥೋತ್ಸವ. ಈ ಸಮಯದಲ್ಲಿ ಸಾರ್ವಜನಿಕರು ಹಾಗೂ ಶಾಂತಿ ಸಮಿತಿಯ ಸದಸ್ಯರು ಯಾವುದೇ ತರಹದ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಮಾ.೧೩ ಹೋಳಿ ಸುಡುವದು, ಮಾ.೧೪ ಮತ್ತು ೧೫ ರಂದು ೨ದಿನ ಬಣ್ಣದಾಟ ನಡೆಯಲಿದೆ. ಮಾ.೧೯ಕ್ಕೆ ಶರಣ ಮುತ್ಯಾರ ರಥೋತ್ಸವ ಜರುಗಲಿದೆ. ರಂಜಾನ್ ಹಬ್ಬವೂ ಇದೆ. ಹಬ್ಬಗಳಲ್ಲಿ ಸಹಕಾರ ಮನೋಭಾವವಿರಲಿ ಎಂದು ಎಚ್ಚರಿಕೆ ನೀಡಿದರು.

ಪಿಎಸ್‌ಐ ರಾಮನಗೌಡ ಸಂಕನಾಳ ಮಾತನಾಡಿ, ಹೋಳಿ ಆಚರಣೆ ಸಮಯದಲ್ಲಿ ಪರೀಕ್ಷೆ ಪ್ರಾರಂಭವಾಗಲಿವೆ. ಆ ವಿದ್ಯಾರ್ಥಿಗಳ ಮೈಮೇಲಿ ಬಣ್ಣ ಎರಚಬಾರದು. ಕಾಮ ದಹನದ ವೇಳೆ ಎಚ್ಚರವಹಿಸಬೇಕು. ಇಲ್ಲವಾದರೆ ಪೊಲೀಸರು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಂತಿ ಸಮಿತಿ ಸದಸ್ಯರಾದ ಪ್ರಭುಗೌಡ ಮದರಕಲ್ಲ, ವಿಜಯಸಿಂಗ್ ಹಜೇರಿ, ಬಿ.ಎಸ್.ಪಾಟೀಲ(ಯಾಳಗಿ), ಶಿವಶಂಕರ ಹಿರೇಮಠ, ಶರಣಗೌಡ ಪಾಟೀಲ ಜೈಭೀಮ ಮುತ್ತಗಿ ಮಾತನಾಡಿ, ಈಗಾಗಲೇ ಜಾತ್ರೋತ್ಸವಕ್ಕೆ ಅಡೆತಡೆಯಾಗಬಾರದೆಂದು ಆ ಸ್ಥಳವನ್ನು ಸ್ವಚ್ಛ ಮಾಡಲಾಗಿದೆ. ಗದ್ದಲ ವಾತಾವರಣ ನಿರ್ಮಾಣವಾಗಬಾರದೆಂಬ ಉದ್ದೇಶದಿಂದ ಬ್ಯಾರಿಕೇಡ್ ಹಾಕಲಾಗುತ್ತದೆ. ಒಂದೆಡೆ ವಾಹನ, ಇನ್ನೊಂದೆಡೆ ಜನಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಮಾಡುವಂತೆ ಕೋರಿದರು.

ಈ ವೇಳೆ ಸಿದ್ದನಗೌಡ ಪಾಟೀಲ, ಮುರುಗೆಪ್ಪ ಸರಶೆಟ್ಟಿ, ಕಾಶಿನಾಥ ಮುರಾಳ, ಎಂ.ಕೆ.ಚೋರಗಸ್ತಿ, ಡಿ.ವ್ಹಿ.ಪಾಟೀಲ, ಅಣ್ಣಪ್ಪ ಜಗತಾಪ, ದತ್ತು ಹೆಬಸೂರ, ಆನಂದ ಹಜೇರಿ, ಮುತ್ತಪ್ಪ ಚಮಲಾಪೂರ, ಫಯಾಜ್ ಉತ್ನಾಳ, ನಿಂಗು ಕೋಂಟೋಜಿ, ಗುರಣ್ಣ ಹತ್ತೂರ, ಗನಿಸಾಬ ಲಾಹೋರಿ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಸಿದ್ದಣ್ಣ ಶರಣರ, ಈರಣ್ಣ ಶರಣರ, ಆಸೀಪ್ ಕೇಂಭಾವಿ, ಗೋಪಾಲ ಕಟ್ಟಿಮನಿ ಮೊದಲಾದವರು ಉಪಸ್ಥಿತರಿದ್ದರು.

ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ಭಂಗಿ ಸ್ವಾಗತಿಸಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ