ದೃಶ್ಯ ವೈಭವ ಜೊತೆ ಅಭಿನಯವೆಂಬ ಆಧ್ಯಾತ್ಮವಿರಲಿ: ಮಂಡ್ಯ ರಮೇಶ್‌

KannadaprabhaNewsNetwork |  
Published : Nov 17, 2025, 12:30 AM IST
16ಕೆಡಿವಿಜಿ7, 8-ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ ಕಲಾ ಗ್ಯಾಲರಿಯಲ್ಲಿ ಭಾನುವಾರ ಅನ್ವೇಷಕರು ಆರ್ಟ್ ಫೌಂಡೇಷನ್‌ನಿಂದ ಕಲಾವಿದ ಯು.ಅಶೋಕ್‌ರವರ ವರ್ಣ ವಿಕಾಸ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ, ವೀಕ್ಷಿಸಿದ ಹಿರಿಯ ರಂಗಕರ್ಮಿ, ಚಿತ್ರನಟ ಮಂಡ್ಯ ರಮೇಶ. | Kannada Prabha

ಸಾರಾಂಶ

ರಂಗಭೂಮಿಯು ಅತ್ಯಂತ ಸರಳ, ಸೌಂದರ್ಯದಿಂದ ಕೂಡಿದ ಮಾಧ್ಯಮವಾಗಿದ್ದು, ನಾಟಕಗಳಲ್ಲಿ ದೃಶ್ಯವೈಭವ ಎಷ್ಟೇ ಇದ್ದರೂ ಅಭಿನಯವೆಂಬ ಅಧ್ಯಾತ್ಮ ಇಲ್ಲದಿದ್ದರೆ ಪ್ರಯೋಜನವೇ ಇಲ್ಲ ಎಂದು ಹಿರಿಯ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ ಹೇಳಿದ್ದಾರೆ.

- ಯು.ಅಶೋಕ್‌ ವರ್ಣವಿಕಾಸ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಂಗಭೂಮಿಯು ಅತ್ಯಂತ ಸರಳ, ಸೌಂದರ್ಯದಿಂದ ಕೂಡಿದ ಮಾಧ್ಯಮವಾಗಿದ್ದು, ನಾಟಕಗಳಲ್ಲಿ ದೃಶ್ಯವೈಭವ ಎಷ್ಟೇ ಇದ್ದರೂ ಅಭಿನಯವೆಂಬ ಅಧ್ಯಾತ್ಮ ಇಲ್ಲದಿದ್ದರೆ ಪ್ರಯೋಜನವೇ ಇಲ್ಲ ಎಂದು ಹಿರಿಯ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ ಹೇಳಿದರು.

ನಗರದ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ ಕಲಾ ಗ್ಯಾಲರಿಯಲ್ಲಿ ಭಾನುವಾರ ಅನ್ವೇಷಕರು ಆರ್ಟ್ ಫೌಂಡೇಷನ್‌ನಿಂದ ಕಲಾವಿದ ಯು.ಅಶೋಕ್‌ ಅವರ ವರ್ಣವಿಕಾಸ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದರಾದ ಅಶೋಕ ಅವರ ರೇಖಾಚಿತ್ರಗಳಲ್ಲಿ ಸರಳಕೆಯೇ ಸೌಂದರ್ಯವಾಗಿದೆ. ಆಳವಾದ ಅರಿವು ಮತ್ತು ಮನಸ್ಸಿನ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ಚಿತ್ರಕಲೆಗೆ ಆದ್ಯತೆ ಕೊಟ್ಟಿರುವ ರೀತಿಯಲ್ಲೇ ಮುಂದಿನ ದಿನಗಳಲ್ಲಿ ರಂಗಭೂಮಿ, ಜಾನಪದ ಕಲಾ ಪ್ರಾಕಾರಗಳಿಗೂ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಅನ್ವೇಷಕರು ಆರ್ಟ್ ಫೌಂಡೇಷನ್‌ನ ಟ್ರಸ್ಟಿ, ಹಿರಿಯ ರಂಗಕರ್ಮಿ ಎಸ್.ಎಸ್. ಸಿದ್ದರಾಜು ಮಾತನಾಡಿ, ರಂಗಭೂಮಿಯು ಸದಾ ಜೀವಂತವಾಗಿರಬೇಕು. ರಂಗಭೂಮಿ ಮತ್ತು ಚಿತ್ರಕಲೆಗೆ ಅವಿನಾಭಾವ ಸಂಬಂಧವಿದೆ. 2027ರಿಂದ ಪ್ರತಿ ನವೆಂಬರ್ ತಿಂಗಳಿನಲ್ಲಿ ಚಿತ್ರಕಲೆಗೆ ಸಂಬಂಧಿಸಿದ ಪ್ರದರ್ಶನಗಳನ್ನು ಅನ್ವೇಷಕರು ಫೌಂಡೇಷನ್‌ನಿಂದ ಆಯೋಜಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಸತೀಶಕುಮಾರ ಪಿ. ವಲ್ಲೇಪುರೆ ಅಧ್ಯಕ್ಷತೆ ವಹಿಸಿದ್ದರು. ಸರ್‌ಎಂವಿ ಪಿಯು ಕಾಲೇಜು ಕಾರ್ಯದರ್ಶಿ ಎಸ್.ಜೆ.ಶ್ರೀಧರ್, ಕಲಾವಿದ ಅಶೋಕ ಯು., ಹಿರಿಯ ಕಲಾವಿದ ಮಹಲಿಂಗಪ್ಪ, ಚಿತ್ರಕಲಾ ಶಿಕ್ಷಕ ಎನ್.ಟಿ.ರಾಘವೇಂದ್ರ ನಾಯಕ, ಕಲಾ ವಿಮರ್ಶಕ ದತ್ತಾತ್ರೇಯ ಎನ್. ಭಟ್ಟ ಇತರರು ಇದ್ದರು.

- - -

-16ಕೆಡಿವಿಜಿ7, 8.ಜೆಪಿಜಿ:

ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ ಕಲಾ ಗ್ಯಾಲರಿಯಲ್ಲಿ ಭಾನುವಾರ ಅನ್ವೇಷಕರು ಆರ್ಟ್ ಫೌಂಡೇಷನ್‌ನಿಂದ ಆಯೋಜಿಸಿದ್ದ ಕಲಾವಿದ ಯು.ಅಶೋಕ್‌ ಅವರ ವರ್ಣವಿಕಾಸ ಚಿತ್ರಕಲಾ ಪ್ರದರ್ಶನವನ್ನು ರಂಗಕರ್ಮಿ, ಚಿತ್ರನಟ ಮಂಡ್ಯ ರಮೇಶ್‌ ಉದ್ಘಾಟಿಸಿ ಕೃತಿಗಳನ್ನು ವೀಕ್ಷಿಸಿದರು.

PREV

Recommended Stories

ಶಿವಮೊಗ್ಗದಲ್ಲಿ ಮುಂದುವರಿದ ಕಾಡಾನೆ ಉಪಟಳ
ಭೀಮ್‌ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಅಕ್ರಮ: ರಾಘವೇಂದ್ರ ನಾಯ್ಕ