ಲಕ್ಷ್ಮೇಶ್ವರ: ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಬುಧವಾರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.
ಬುಧವಾರ ಮುಂಜಾನೆ ದರ್ಗಾ ಬಳಿ ಮೆರವಣಿಗೆಗೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಚಾಲನೆ ನೀಡಿ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದ ಅನೇಕ ಮಹನೀಯರಲ್ಲಿ ಪೈಗಂಬರರು ಓರ್ವರಾಗಿದ್ದು, ಭಗವಂತನ ಅನುಯಾಯಿಗಳಾದ ಮಹ್ಮದ ಪೈಗಂಬರ ಅವರು ಸಮಾಜಕ್ಕೆ ನೀಡಿದ ಮಾನವೀಯ ಮೌಲ್ಯಗಳನ್ನು ಸದಾ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಉತ್ಸವ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದರು.
ಡಿವೈಎಸ್‌ಪಿ ಮುರ್ತೂಜಾ ಖಾದ್ರಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡದ, ಕ್ರೈಂ ಪಿಎಸ್‌ಐ ಟಿ.ಕೆ. ರಾಥೋಡ, ಪ್ರಭಾರಿ ಪಿಎಸ್‌ಐ ರಮಾಕಾಂತ ಗುಗ್ಗರಿ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ದೂದನಾನಾ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ ಕಣಕೆ, ಪುರಸಭೆ ಮಾಜಿ ಉಪಾಧ್ಯಕ್ಷ ದಾದಾಪೀರ ಮುಚ್ಚಾಲೆ, ಪಿರ್ದೋಶ ಆಡೂರ, ಮಾಜಿ ಸದಸ್ಯ ಎಸ್.ಕೆ. ಹವಾಲ್ದಾರ, ಮುಸ್ತಾಕ್‌ಅಹ್ಮದ್ ಶಿರಹಟ್ಟಿ, ಸಿಕಂದರ ಕಣಕೆ, ವೀರಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಜಾಕೀರಹುಸೇನ್ ಹವಾಲ್ದಾರ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಅಬ್ದುಲ್‌ಕರೀಂ ಸೂರಣಗಿ, ಎನ್.ಎಂ. ಗದಗ, ದಾದಾಪೀರ ತಂಬಾಕದ, ಜಮೀಲ್ ಸೂರಣಗಿ, ಪೈಮ್ ಪಲ್ಲಿ, ಅಬ್ಜಲ್ ರಿತ್ತಿ, ಸುಬಾನ ಹೊಂಬಳ, ಮಲ್ಲಿಕ ಹೆಸರೂರ, ಮುಸ್ತಾಕ್ ಬಂಕಾಪೂರ, ದಾದಾಪೀರ ಬಂಕಾಪೂರ, ನಾಲಬಂದ್, ಮುಸ್ತಾಕ್ ಗದಗ, ಬಾಬಾ ಕೊರಗಿ, ಗೂಡುಸಾಬ್ ಮತ್ತಿತರರಿದ್ದರು.ಸಂಭ್ರಮದ ಈದ್ ಮಿಲಾದ್ ಆಚರಣೆ