ಕನ್ನಡಪ್ರಭ ವಾರ್ತೆ ಹಾಸನ
ಇದಕ್ಕೆ ಸಾಕ್ಷಿ ಎನ್ನುವಂತೆ ಗುರುವಾರ ಹಾಸನದ ಕೃಷ್ಣಾ ನಗರದಲ್ಲಿ ನಡೆದ ಕಾಂಗ್ರೆಸ್‌ನ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡುವ ವೇಳೆ "ನಾವೆಲ್ಲಾ ಸೇರಿ ಜೆಡಿಎಸ್ಸನ್ನು ಕಟ್ಟೋಣ " ಎಂದು ಹೇಳಿದ್ದಾರೆ.
ಸಮಾವೇಶದ ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಈ ವೇಳೆ ಶಿವಲಿಂಗೇಗೌಡರಿಗೆ ಸ್ವಾಗತ ಕೋರುವುದನ್ನು ಮರೆತಿದ್ದರು. ಇದರಿಂದ ಶಿವಲಿಂಗೇಗೌಡರು ಅಸಮಾಧಾನಗೊಂಡಿದ್ದರು. ಸ್ವಾಗತ ಮುಗಿದು ಒಂದಿಬ್ಬರು ಮಾತನಾಡಿದ ನಂತರ ಶಿವಲಿಂಗೇಗೌಡರಿಗೆ ಮಾತನಾಡುವ ಅವಕಾಶ ಬಂದಿತ್ತು. ಈ ವೇಳೆ ಮಾತನಾಡುತ್ತಾ ಇ ಡಿ ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಎಲ್ಲಿದೆ ಜೆಡಿಎಸ್ ಭದ್ರಕೋಟೆ. ಹಾಸನ ಜಿಲ್ಲೆಯಲ್ಲಿ ೨೮ ವರ್ಷಗಳ ನಂತರ ಸಂಸದ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ ಎಂದು ವಾಕ್‌ಪ್ರಹಾರ ನಡೆಸುತ್ತಲೇ " ನಾವೆಲ್ಲಾ ಒಂದಾಗಿ ಈ ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟುತ್ತೇವೆ " ಎಂದು ಹೇಳಿ ತಮ್ಮ ಭಾಷಣ ಮುಗಿಸಿದರು.