ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಅಲ್ಲಮ ಪ್ರಭು ಮೈದಾನದಲ್ಲಿ ಶುಕ್ರವಾರ ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮತದಾನ ಮಾಡುವುದು ನಮ್ಮ ಹಕ್ಕು. ಭಾರತೀಯ ನಮ್ಮ ಸಂವಿಧಾನವು ಯಾವುದೇ ರೀತಿಯ ತಾರತಮ್ಯ ಮಾಡದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮತದಾನ ಮಾಡೋಣ. ಮತದಾನದ ಮೂಲಕ ದೇಶವನ್ನು ಶ್ರೀಮಂತಗೊಳಿಸೋಣ ಎಂದು ಹೇಳಿದರು.
ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಮಾಡೋಣ. ಮತದಾನ ನಮ್ಮ ಹಕ್ಕು ಮತ್ತು ಜವಾಬ್ದಾರಿ ಎರಡೂ ಎಂದು ಭಾವಿಸಿ ಮತ ಹಾಕೋಣ. ಗ್ರಾಮಿಣ ಭಾಗದಲ್ಲಿ ಶೇ. 80ರಷ್ಟು ಮತದಾನ ಆಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಈ ಭಾರಿ ನಗರ ಪ್ರದೇಶದಲ್ಲಿ ಶೇ. 100 ರಷ್ಟು ಮತದಾನ ಮಾಡೋಣ ಎಂದು ಕರೆ ನೀಡಿದ ಅವರು ಸಾರ್ವಜನಿಕರಿಗೆ ಮತದಾನ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಿದರು.ಈ ಸಂಧರ್ಭದಲ್ಲಿ ಜಾಗೃತ ಮತದಾರರ ವೇದಿಕೆಯ ಕೆ ಸಿ ಬಸವರಾಜು, ಪಿಎಸ್‍ಐ ವಿನಯ್ ಎಂ, ಸಾಹಿತಿ ಸುಂದರ್ ರಾಜ್ , ಪರಿಸರತಜ್ಞ ಶೇಖರ್ ಗೌಳೇರ್ ಇತರರು ಉಪಸ್ಥಿತರಿದ್ದರು.
‘ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮಕ್ಕೆ ಚಾಲನೆಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ವತಿಯಿಂದ ನಗರದ ಸೈನ್ಸ್ ಮೈದಾನದ ಮತಗಟ್ಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆ ಕಡೆ’ ಕಾರ್ಯಕ್ರಮವನ್ನು ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಉದ್ಘಾಟಿಸಿದರು.ಈ ವೇಳೆ ಅವರು ಮಾತನಾಡಿ, ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಮತದಾರರಿಗೆ ಅನುಕೂಲಕ್ಕಾಗಿ ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಎಲ್ಲಾ ಮತದಾರರು ಸದುಪಯೋಗ ಪಡೆಸಿಕೊಂಡು ಮತದಾನದ ಹಬ್ಬದಲ್ಲಿ ಎಲ್ಲೂರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು, ಸ್ವೀಪ್ ತರಬೇತುದಾರ ನವೀದ್ ಪರ್ವೇಜ್ ಹಾಜರಿದ್ದರು.ವೋಟ್ ಹಾಕಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ: ಸಮನ್ವಯ ಕಾಶಿ
ಸಮೀಪದ ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಕುವೆಂಪು ವಿವಿ ಮಟ್ಟದ ರಾ.ಸೇ.ಯೋ.ಶಿಬಿರದಲ್ಲಿ ಪಟ್ಟಣ ಪಂಚಾಯತ್ ಹೊಳೆಹೊನ್ನೂರಿನ ಸಹಯೋಗದಲ್ಲಿ ನಡೆದ ಕಡ್ಡಾಯ ಮತದಾನದ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 200 ವರ್ಷಗಳ ಕಾಲ ನಮ್ಮನ್ನು ಪರಕೀಯರು ಆಳಿದ್ದಾರೆ. ಆದರೆ ಈಗ ನಾವು ಸ್ವತಂತ್ರರಾಗಿ ನಮ್ಮನ್ನು ನಾವೇ ಆಳುವ ಪ್ರಜಾಪ್ರಭುತ್ವವನ್ನು ರೂಪಿಸಿಕೊಂಡಿದ್ದೇವೆ. ಈ ಹೊತ್ತಿನಲ್ಲಿ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.ಹೊಳೆಹೊನ್ನೂರು ಪಟ್ಟಣ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮಂಜುನಾಥ್ ಮಾತನಾಡಿ, ಮತದಾನ ನಮ್ಮ ಹಕ್ಕು, ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವುದರ ಅಗತ್ಯವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಮದರು.
ಪ್ರಜಾಪ್ರಭುತ್ವ ಹಬ್ಬ ಯಶಸ್ವಿಯಾಗಲಿ: ರಮೇಶ್ ರಾವ್ ಕರೆ ಸೊರಬ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ಕೇಂದ್ರ ಮಹಿಳಾ ಮೀಸಲು ಪಡೆ ಪೊಲೀಸರು ಪಟ್ಟಣದ ವಿವಿಧ ಬೀದಿಗಳಲ್ಲಿ ಶುಕ್ರವಾರ ಪಥಸಂಚಲನ ನಡೆಸಿದರು.ಪಟ್ಟಣದ ಪುರಸಭೆ ಮುಂಭಾಗದಿಂದ ಮುಖ್ಯರಸ್ತೆ, ಕಾನಕೇರಿ, ಚಿಕ್ಕಪೇಟೆ, ಚಾಮರಾಜಪೇಟೆ ಸೇರಿದಂತೆ ಪ್ರಮುಖ ಆಯಕಟ್ಟಿನ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸುವ ಜೊತೆಗೆ ಚುನಾವಣೆಯಲ್ಲಿ ಶಾಂತಿ ಕಾಪಾಡಬೇಕು ಹಾಗೂ ಶಾಂತಿ ಕದಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಯಿತು.
ಪಥಸಂಚಲನದಲ್ಲಿ ಪಿಎಸ್‌ಐ ನಾಗರಾಜ್, ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಸಿ.ಜ್ಯೋತಿ ವೆಲ್ಲೂರು, ಸಬ್ ಇನ್ಸ್‌ಪೆಕ್ಟರ್ ಎನ್.ಪಿ.ಕಮಲಾವತಿ ಶಿರಸಿ, ಸೊರಬ ಪೊಲೀಸ್ ಠಾಣೆಯ ಹೆಡ್‌ಕಾನ್ಸ್ಟೇಬಲ್ ನಾಗೇಶ್, ರಾಘವೇಂದ್ರ, ಲೋಕೇಶ್, ವಿನಯ್, ಅರುಣ್, ಹೇಮಾ, ನಾಗರಾಜ್ ಸೇರಿದಂತೆ ಸಿಆರ್‌ಪಿಎಫ್ ಪಡೆ ಪಥ ಸಂಚಲನದಲ್ಲಿ ಇತ್ತು.