ಭಾರತೀಯ ಸಂಸ್ಕೃತಿಯಲ್ಲಿ ಮಹಾತ್ಮರು ಮತ್ತು ಯೋಧರನ್ನು ಸ್ಮರಿಸಬೇಕು. ಅಂತೆಯೇ ಮಹಾಮಹಾತ್ಮರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿರವರ ಸ್ಮರಣೆಯನ್ನು ಎಲ್ಲೆಡೆ ನಡೆಸಲಾಗುತ್ತಿದ್ದು ಶ್ರೀಗಳಿಗೆ ಶ್ರೀಗಳೇ ಸಾಟಿಯಾಗಿದ್ದಾರೆ. ಅವತ್ತಿನ ಕಾಲದಲ್ಲಿ ಸಿದ್ಧಗಂಗಾ ಮಠ ಬಡತನದಲ್ಲಿದ್ದ ಸಂದರ್ಭದಲ್ಲಿ ಶ್ರೀಗಳು ತಮ್ಮ ಕಾಯಕದಿಂದ ಮಠವನ್ನು ಅಭಿವೃದ್ಧಿಪಡಿಸಿದರು.
ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಕರೆ । ಬಸವ ಮಹಾಮನೆಯಲ್ಲಿ ಡಾ.ಶ್ರೀ ಶಿವಕುಮಾರಶ್ರೀಗಳ ಜಯಂತಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಕಾಯಕ ನಿಷ್ಠೆಯ ಪ್ರತೀಕ, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸೋಣ ಎಂದು ಮರಿಯಾಲ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ಅವಪಟ್ಟಣದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ನಗರದಲ್ಲಿರುವ ಬಸವ ಮಹಾಮನೆಯಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ನಗರ ನಿವಾಸಿಗಳು, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಶ್ರೀ ಬಸವ ಸೇವಾ ಪತ್ತಿನ ಸಹಕಾರ ಸಂಘ, ಬಸವ ಮಹಾ ಮನೆ ಟ್ರಸ್ಟ್ ಹಾಗೂ ಕೊಳ್ಳೇಗಾಲ ನಗರದ ವೀರಶೈವ ಲಿಂಗಾಯತ ಬಂಧುಗಳು
ಆಯೋಜಿಸಿದ್ದ ಡಾ.ಶ್ರೀ ಶಿವಕುಮಾರ ಸ್ಬಾಮೀಜಿ ಅವರ 119ನೇ ಜನ್ಮ ದಿನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಸವಾದಿ ಶರಣರ ಹಾದಿಯಲ್ಲಿ ನಿಸ್ವಾರ್ಥ ಕಾಯಕ ಮತ್ತು ದಾಸೋಹವನ್ನು ಮಾಡಿದವರು ಶಿವಕುಮಾರ ಸ್ವಾಮೀಜಿ. ಅವರು ಇಡೀ ಬದುಕನ್ನು ಸಮಾಜಕ್ಕೆ ಮುಡಿಪಾಗಿಟ್ಟರು. ಜೋಳಿಗೆ ಹಿಡಿದು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ದಾಸೋಹ ನೀಡಿದ ಮಹಾ ಸಂತರಾಗಿದ್ದಾರೆ , ಶ್ರೀಗಳು ಕಾಯಕದಿಂದಲೇ ನಡೆದಾಡುವ ದೇವರೆಂದು ಖ್ಯಾತರಾದರು ಎಂದರು.
ಮಳವಳ್ಳಿಯ ಧನಗೂರು ಶ್ರೀ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಾತ್ಮರು ಮತ್ತು ಯೋಧರನ್ನು ಸ್ಮರಿಸಬೇಕು. ಅಂತೆಯೇ ಮಹಾಮಹಾತ್ಮರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿರವರ ಸ್ಮರಣೆಯನ್ನು ಎಲ್ಲೆಡೆ ನಡೆಸಲಾಗುತ್ತಿದ್ದು ಶ್ರೀಗಳಿಗೆ ಶ್ರೀಗಳೇ ಸಾಟಿಯಾಗಿದ್ದಾರೆ. ಅವತ್ತಿನ ಕಾಲದಲ್ಲಿ ಸಿದ್ಧಗಂಗಾ ಮಠ ಬಡತನದಲ್ಲಿದ್ದ ಸಂದರ್ಭದಲ್ಲಿ ಶ್ರೀಗಳು ತಮ್ಮ ಕಾಯಕದಿಂದ ಮಠವನ್ನು ಅಭಿವೃದ್ಧಿಪಡಿಸಿದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ, ಆಶ್ರಯ ಮೂಲಕ ಬದುಕು ನೀಡಿದ್ದಾರೆ. ಶ್ರೀಗಳ ಜೀವನವೇ ಪಾವನವಾದದ್ದು, ಅವರ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಶ್ರೀಗಳು ಪುಸ್ತಕಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು, ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಂಸ್ಕಾರ, ಸಂಸ್ಕೃತಿ ಬಗ್ಗೆ ತಿಳಿಸಬೇಕು. ಮೊಬೈಲ್, ಟಿವಿ ಬಳಕೆಗೆ ಕಡಿವಾಣ ಹಾಕಬೇಕು ಎಂದರು.
ಇದಕ್ಕೂ ಮುನ್ನ ಕೊಳ್ಳೇಗಾಲ ಶ್ರೀ ಮಲೆ ಮಾದೇಶ್ವರ ಕಲಾ ತಂಡ ವತಿಯಿಂದ ಭಜನೆ ಕಾರ್ಯಕ್ರಮ ನೆರವೇರಿತು. ಸಮಾರಂಭ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.
ಮೈಸೂರು ಕಲ್ಲು ಮಠ, ಅಗರ ಹಾಗೂ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ಧಮಲ್ಲ ಸ್ವಾಮೀಜಿ, ಕೊಳ್ಳೇಗಾಲ ಭಿಕ್ಷದ ಮಠದ ಶಿವ ಸ್ವಾಮೀಜಿ, ಕಿರುತೆರೆ ಮತ್ತು ಚಲನಚಿತ್ರ ನಟ ಬಸವಟ್ಟಿ ಲೋಕೇಶ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಬಸವ ಮಹಾಮನೆ ಅಧ್ಯಕ್ಷ ಮಲ್ಲೇಶಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ನಂದೀಶ್, ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಸ್. ನಾಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್, ಹನೂರು ತಾಲೂಕು ಅಧ್ಯಕ್ಷ ಸೋಮಶೇಖರ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಉಪಾಧ್ಯಕ್ಷ ರಾಜು ತಿಮ್ಮರಾಜೀಪುರ, ಕಾರ್ಯದರ್ಶಿ ಮಹೇಶ್, ಸಾಹಿತಿ ಪುಟ್ಟಪ್ಪ, ಮಾಜಿ ಅಧ್ಯಕ್ಷ ಬಸಪ್ಪನ ದೊಡ್ಡಿ ಬಸವರಾಜು, ನಿರ್ದೇಶಕ ಮಹದೇವಸ್ವಾಮಿ ಯುಪಿಎಸ್, ನಗರಸಭೆ ಮಾಜಿ ಸದಸ್ಯರು ಜಿ.ಪಿ ಶಿವಕುಮಾರ್, ಸುಮ ಸುಬ್ಬಣ್ಣ, ಮಾಜಿ ಉಪಾಧ್ಯಕ್ಷ ಹರ್ಷ, ಲಯನ್ಸ್ ಸಂಸ್ಥೆಯ ಜಿ.ಎಸ್.ಎಂ ಮಹದೇವಪ್ರಸಾದ್ ಇನ್ನಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.