ಪರೋಪಕಾರದ ಮನೋಭಾವನೆ ನಮ್ಮಲ್ಲಿರಲಿ

KannadaprabhaNewsNetwork |  
Published : Jun 09, 2025, 01:50 AM IST
ಪೋಟೊ7ಕೆಎಸಟಿ4: ಕುಷ್ಟಗಿ ತಾಲೂಕಿನ ಗುಮಗೇರಾದಲ್ಲಿ ನಡೆದ ಬಕ್ರೀದ ಹಬ್ಬದಲ್ಲಿ ಈದ್ಗಾ ಮೈದಾನ ಭೂದಾನಿ ಲಿಂಗಯ್ಯ ಬೆನಕನಾಳಮಠ ಅವರಿಗೆ ಸನ್ಮಾನಿಸಿದರು. | Kannada Prabha

ಸಾರಾಂಶ

ಮಾನವ ಧರ್ಮ ಶ್ರೇಷ್ಠವಾದದ್ದು, ಪ್ರತಿಯೊಬ್ಬರು ಮಾನವೀಯ ಮೌಲ್ಯ ಬೆಳೆಸಿಕೊಂಡು ಸಹಬಾಳ್ವೆಯಿಂದ ಬದುಕಬೇಕು

ಕುಷ್ಟಗಿ: ತ್ಯಾಗ, ಬಲಿದಾನ ನೆನಪಿಸುವ ಹಬ್ಬವೇ ಬಕ್ರೀದವಾಗಿದೆ ಎಂದು ಈದ್ಗಾ ಮೈದಾನದ ಭೂದಾನಿ ಲಿಂಗಯ್ಯ ಬೆನಕನಾಳಮಠ ಅಭಿಪ್ರಾಯಪಟ್ಟರು.

ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಬಕ್ರೀದ ಹಬ್ಬದ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನಾ ಸಮಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರತಿಯೊಬ್ಬರು ಈ ಹಬ್ಬದ ಮಹತ್ವ ಅರಿತು ಸಹಬಾಳ್ವೆಯಿಂದ ಬಾಳಬೇಕು ಎಂದರು.

ಮಾನವ ಧರ್ಮ ಶ್ರೇಷ್ಠವಾದದ್ದು, ಪ್ರತಿಯೊಬ್ಬರು ಮಾನವೀಯ ಮೌಲ್ಯ ಬೆಳೆಸಿಕೊಂಡು ಸಹಬಾಳ್ವೆಯಿಂದ ಬದುಕಬೇಕು ಮತ್ತು ಪರೋಪಕಾರದ ಮನೋಭಾವನೆ ನಮ್ಮಲ್ಲಿರಬೇಕು ಅಂದಾಗ ಮಾತ್ರ ಒಳ್ಳೆ ಕಾರ್ಯಗಳಾಗಲು ಸಾಧ್ಯ ಎಂದರು.

ಜನಾಬ್ ಗುಲಾಮ ರಸೂಲ್ ಬೈ ಪ್ರಾರ್ಥಿಸಿದರು. ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಫಯಾಜ್ ಹನೀಫ್ ಬಾವಿಕಟ್ಟಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸೊಹೇಲ್ ಕುಷ್ಟಗಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಫಕೀರಸಾಬ್‌ ಬಾವಿಕಟ್ಟಿ, ನಬಿಸಾಬ್‌ ಕುದುರಿ, ರಾಜಸಾಬ್‌ ಬಾವಿಕಟ್ಟಿ, ಅಲ್ಲಾಸಾಬ್‌ ಕುದರಿ, ಅಲ್ಲಸಾಬ್‌ ಕುಷ್ಟಗಿ, ಮುಸ್ತಾಪ್ ಭಾವಿಕಟ್ಟಿ, ಟಿಪ್ಪು ಸುಲ್ತಾನ್ ಬಾವಿಕಟ್ಟಿ, ರಾಜಾಸಾಬ್‌ ಬಾವಿಕಟ್ಟಿ, ಖಾಜಾಸಾಬ್‌ ಬಾವಿಕಟ್ಟಿ, ಯಮನೂರಸಾಬ್‌ ಟೆಂಗುಂಟಿ, ಮೌಲಾಸಾಬ್‌ ಕುದುರಿ, ದಾವಲಸಾಬ್‌ ಕುಷ್ಟಗಿ, ಶರೀಫ್ ಕಲಕಬಂಡಿ, ಹುಸೇನಸಾಬ್ ಕುದುರಿ ಮತ್ತು ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ