ಸಾಹಿತ್ಯದಓದು ನನ್ನನ್ನು ಗಟ್ಟಿಗೊಳಿಸಿತು.ಆತ್ಮವಿಶ್ವಾಸವನ್ನು ಮೂಡಿಸಿತು.ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನತೆ ಮೊಬೈಲ್ ಗೀಳಿಗೆ ಒಳಗಾಗದೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು.
ಸಂಡೂರು: ಕನ್ನಡ ನಾಡು ಉಜ್ವಲ ಸಂಸ್ಕೃತಿ, ಇತಿಹಾಸ ಹೊಂದಿದ ನಾಡು. ಇಲ್ಲಿನ ಉಜ್ವಲ ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರೂಒಟ್ಟಾಗಿ ಶ್ರಮಿಸೋಣಎಂದು ಸಂಸದ ಈ ತುಕಾರಾಂಅಭಿಪ್ರಾಯಪಟ್ಟರು.
ಪಟ್ಟಣದತಿಮ್ಮಪ್ಪನಗುಡಿರಸ್ತೆಯಲ್ಲಿಜಿಲ್ಲಾಖನಿಜ ನಿಧಿ ಅನುದಾನ೧.೬೦ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವಕನ್ನಡ ಸಾಹಿತ್ಯ ಪರಿಷತ್ನಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದೇಶಕ್ಕೆ ಕಳಸವಿದ್ದಂತಿದೆ.ಸರ್ಕಾರಕ್ಕೆ ಹೆಚ್ಚಿನಆದಾಯ ನೀಡುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮಹರಾಷ್ಟçದ ನಂತರಎರಡನೇ ಸ್ಥಾನವಿದೆ.ದೇಶದ ಪ್ರಗತಿಗೆರಾಜ್ಯದಕೊಡುಗೆ, ರಾಜ್ಯಕ್ಕೆಜಿಲ್ಲೆಯಕೊಡುಗೆ ಹಾಗೂ ಜಿಲ್ಲೆಯಅಭಿವೃದ್ಧಿಗೆತಾಲ್ಲೂಕಿನಕೊಡುಗೆಅಪಾರವಾಗಿದೆ.ಮುಖ್ಯಮಂತ್ರಿಗಳ ಮೂಲ ಸೌಕರ್ಯಅಭಿವೃದ್ಧಿಯೋಜನೆ (ಸಿಎಂಐಡಿಪಿ) ಅನುದಾನ೧.೨೫ಕೋಟಿ ವೆಚ್ಚದಲ್ಲಿಕನ್ನಡ ಸಾಹಿತ್ಯ ಭವನದ ಮೇಲೆ ಸಭಾ ಭವನಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ.ಈ ಭವನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಲಿ ಎಂದು ಶುಭಹಾರೈಸಿದರು.
ಕನ್ನಡ ಭಾಷೆ ನಾಡಿನಜನತೆಯಅಸ್ಮಿತೆ :ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಸಭಾ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕಿ ಅನ್ನಪೂರ್ಣ ಈ ತುಕಾರಾಮ್, ಕನ್ನಡ ಭಾಷೆ ನಾಡಿನಜನತೆಯ ಅಸ್ಮಿತೆ. ಉದ್ಘಾಟನೆಯಾಗಿರುವಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನ ಸಾಹಿತಿಗಳನ್ನು ಹುಟ್ಟು ಹಾಕುವ ಕೇಂದ್ರವಾಗಲಿ.ಈ ಕೇಂದ್ರದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ.ಈ ಭವನ ನಮ್ಮ ನಾಡಿನ ಅಸ್ಮಿತೆಯನ್ನು ಉಳಿಸುವ ಶಕ್ತಿಯನ್ನು ನೀಡುತ್ತದೆ. ಹಲವರ ಶ್ರಮದ ಫಲವಾಗಿ ಈ ಭವನ ನಿರ್ಮಾಣಗೊಂಡಿದೆಎAದರು.
ಕಥೆ, ಕಾದಂಬರಿ ಮುಂತಾದ ಸಾಹಿತ್ಯ ಕೃತಿಗಳ ಓದುತಮ್ಮ ಮೇಲೆ ಬೀರಿದ ಪರಿಣಾಮವನ್ನು ವಿವರಿಸಿದ ಶಾಸಕರು, ಸಾಹಿತ್ಯದಓದು ನನ್ನನ್ನು ಗಟ್ಟಿಗೊಳಿಸಿತು.ಆತ್ಮವಿಶ್ವಾಸವನ್ನು ಮೂಡಿಸಿತು.ಇಂದಿನ ವಿದ್ಯಾರ್ಥಿಗಳು ಹಾಗೂ ಯುವಜನತೆ ಮೊಬೈಲ್ ಗೀಳಿಗೆ ಒಳಗಾಗದೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು.ಕನ್ನಡಅತ್ಯಂತ ಶ್ರೀಮಂತ ಹಾಗೂ ಗಟ್ಟಿತನಇರುವ ಭಾಷೆ. ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರಕರ್ತವ್ಯವಾಗಿದೆಎಂದರು.
ಸಾನಿಧ್ಯವಹಿಸಿದ್ದ ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿಯವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಾಲ್ಲೂಕುಘಟಕದಅಧ್ಯಕ್ಷರಾಗಿರುವಡಾ.ಬಿ. ನಾಗನಗೌಡರಅಧ್ಯಕ್ಷಅವಧಿತಾಲ್ಲೂಕಿನ ಕಸಾಪ ಇತಿಹಾಸದಲ್ಲಿ ಸುವರ್ಣಯುಗವಾಗಿದೆ. ರಾಜ್ಯದಲ್ಲಿಯೇಅತಿ ಹೆಚ್ಚು ದತ್ತಿಗಳನ್ನು ತಾಲ್ಲೂಕಿನಲ್ಲಿ ಕಸಾಪಕ್ಕೆ ಸಂಗ್ರಹಿಸಲಾಗಿದೆ. ಕನ್ನಡ ಸಾಹಿತ್ಯವನ್ನುಜನತೆಗೆ, ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ದೇಶದಅತಿ ಪ್ರಾಚೀನ ಭಾಷೆಗಳನ್ನು ಕನ್ನಡವೂಒಂದಾಗಿದೆ. ಸುಂದರಕನ್ನಡ ಲಿಪಿ, ಲಿಪಿಗಳ ರಾಣಿ ಎನಿಸಿದೆ.ಇಂತಹಉಜ್ವಲ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಾಲ್ಲೂಕುಘಟಕದಅಧ್ಯಕ್ಷರಾದಡಾ.ಬಿ. ನಾಗನಗೌಡಅವರುತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ಬಗೆ, ಕಾರ್ಯಚಟುವಟಿಕೆಗಳು, ಸಾಧನೆಗಳು ವಿವರಿಸಿ,ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಹಕರಿಸಿದವರನ್ನು ಸ್ಮರಿಸಿದರು.
ಸಾಹಿತಿಡಾ.ವಸುಂಧರಾ ಭೂಪತಿ ಹಾಗೂ ಕಸಾಪ ಬೆಂಗಳೂರು ಘಟಕದಅಧ್ಯಕ್ಷರಾದಪ್ರಕಾಶಮೂರ್ತಿಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕುಘಟಕದ ವತಿಯಿಂದದತ್ತಿ ದಾನಿಗಳಾದ ತಾಳೂರಿನ ಬಂಡ್ರಿಯAಕಪ್ಪ, ತೋರಣಗಲ್ಲಿನಅಂಗಡಿ ಮಧು ಹಾಗೂ ಸಂಡೂರಿನ ಹೆಚ್.ಈರಣ್ಣಅವರನ್ನು, ಜಿಲ್ಲಾಮಟ್ಟದಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಷಣ್ಮುಖರಾವ್ಜಾಧವ್, ಶಾರದಮ್ಮ ಹೆಚ್ ಹಾಗೂ ಸುರೇಶ, ಕಸಾಪ ತಾಲ್ಲೂಕುಘಟಕದ ಮಾಜಿಅಧ್ಯಕ್ಷರಾದ ಬಿ.ಆರ್.ಮಸೂತಿ, ಸಿ.ಎಂ.ಶಿಗ್ಗಾವಿ, ಕೆ.ಮೊಹಮ್ಮದ್ಅಯೂಬ್, ಡಾ.ಎ. ವೃಷಭೆಂದ್ರಾಚಾರ್, ಡಾ.ಬಿ. ನಾಗನಗೌಡಅವರನ್ನು ಸನ್ಮಾನಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಜಿ. ವೀರೇಶ್ ಸ್ವಾಗತಿಸಿದರು.ಡಾ. ತಿಪ್ಪೇರುದ್ರ ಸಂಡೂರುಕಾರ್ಯಕ್ರಮ ನಿರೂಪಿಸಿದರು. ಹೆಚ್.ಎನ್. ಭೋಸ್ಲೆ ವಂದಿಸಿದರು.
ನಾಡೋಜಡಾ.ವಿ.ಟಿ. ಕಾಳೆ, ರಾಜ್ಯಖನಿಜ ನಿಗಮದಉಪಾಧ್ಯಕ್ಷ ಹೆಚ್. ಲಕ್ಷö್ಮಣ, ಸಾಹಿತಿಗಳಾದ ಡಾ.ಮೃತ್ಯಂಜಯರುಮಾಲೆ, ಚಂದ್ರಕಾAತ ವಡ್ಡು, ಡಾ. ಶಂಕ್ರಪ್ಪತೋರಣಗಲ್ಲು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ,ಆರ್.ಅಕ್ಕಿ, ಕಸಾಪ ಜಿಲ್ಲಾಧ್ಯಕ್ಷಡಾ. ನಿಷ್ಠಿ ರುದ್ರಪ್ಪ, ಜಿಲ್ಲಾಗೌರವ ಕಾರ್ಯದರ್ಶಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು, ಕಸಾಸ ತಾಲ್ಲೂಕುಘಟಕದಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಕೋಶಾಧ್ಯಕ್ಷಎಂ.ಟಿ.ರಾಥೋಡ್, ಸಂಘಟನಾ ಕಾರ್ಯದರ್ಶಿ ರಮೇಶ್ಗಡಾದ್, ಪರಿಶಿಷ್ಟ ಜಾತಿ ಪ್ರತಿನಿಧಿ ಎಚ್. ಮಲ್ಲಿಕಾರ್ಜುನ,ಪರಿಶಿಷ್ಟ ಪಂಗಡದ ಪ್ರತಿನಿಧಿ ನಾಗರಾಜ ಸೂರಮ್ಮನಹಳ್ಳಿ, ಅಲ್ಪಸಂಖ್ಯಾತರ ಪ್ರತಿನಿಧಿ ಕೆ. ಬಷೀರ್ಅಹ್ಮದ್, ಮಹಿಳಾ ಪ್ರತಿನಿಧಿಗಳಾದ ಡಾ.ಹೆಚ್.ಎಂ. ಉಮಾ, ಜಿ. ನೀಲಾಂಬಿಕೆ, ಪ್ರಾಚಾರ್ಯಡಾ.ಬಸವರಾಜ ಹೆಚ್, ಸದಸ್ಯರಾದ ಎ.ಎಂ.ಶಿವಮೂರ್ತಿ, ಟಿ.ಕೆ. ಮಂನುನಾಥ, ಕಸಾಪ ತೋರಣಗಲ್ಲು ಹೋಬಳಿ ಘಟಕದಅಧ್ಯಕ್ಷರಾಜೇಸಾಬ ಬಿ ನಾಯಕ, ಚೋರನೂರು ಹೋಬಳಿ ಘಟಕದಅಧ್ಯಕ್ಷಎನ್.ಹೆಚ್ ಹೂಲೇಶ್, ವಿವಿಧ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು, ಕನ್ನಡ ಸದಸ್ಯರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.