ತಾಂತ್ರಿಕ ದೋಷ: ಕಾಮನಹಳ್ಳಿ ಬಳಿ ಏರ್‌ಫೋರ್ಸ್ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್

KannadaprabhaNewsNetwork |  
Published : Nov 12, 2026, 02:00 AM IST
 | Kannada Prabha

ಸಾರಾಂಶ

ಕಾಮನಹಳ್ಳಿ ಗ್ರಾಮದ ಹಾದಿಮನಿ ಅವರ ಹೊಲದಲ್ಲಿ ಬುಧವಾರ ಸಂಜೆ 5.45ರ ಸುಮಾರಿಗೆ ಭಾರತೀಯ ವಾಯುಪಡೆಯ ZD 4050 ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಇಳಿದಿದೆ. ಹೆಲಿಕಾಪ್ಟರ್‌ನಲ್ಲಿ ದೀಪಕ್ ಶರ್ಮಾ ಸೇರಿದಂತೆ ವಾಯುಪಡೆಯ ಆರು ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

ಹಾವೇರಿ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ವೊಂದು ಶಿಗ್ಗಾವಿ ತಾಲೂಕು ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಜಮೀನಿನಲ್ಲಿ ಬುಧವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ.ಕಾಮನಹಳ್ಳಿ ಗ್ರಾಮದ ಹಾದಿಮನಿ ಅವರ ಹೊಲದಲ್ಲಿ ಬುಧವಾರ ಸಂಜೆ 5.45ರ ಸುಮಾರಿಗೆ ಭಾರತೀಯ ವಾಯುಪಡೆಯ ZD 4050 ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಇಳಿದಿದೆ. ಹೆಲಿಕಾಪ್ಟರ್‌ನಲ್ಲಿ ದೀಪಕ್ ಶರ್ಮಾ ಸೇರಿದಂತೆ ವಾಯುಪಡೆಯ ಆರು ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.ತಮಿಳುನಾಡಿನ ಸೋಲೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಹೆಲಿಕಾಪ್ಟರ್‌ ಅನ್ನು ಸುರಕ್ಷಿತವಾಗಿ ಜಮೀನಿನಲ್ಲಿ ಇಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಷಯ ತಿಳಿಯುತ್ತಿದ್ದಂತೆ ಶಿಗ್ಗಾವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು

ರಾಣಿಬೆನ್ನೂರು: ಚಲಿಸುವ ರೈಲಿಗೆ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಗರದ ಮೆಡ್ಲೇರಿ ರೈಲ್ವೆ ಗೇಟ್ ಬಳಿ ಸಂಭವಿಸಿದೆ.ಮೃತನು ಸುಮಾರು 25-30 ವರ್ಷದವನಿದ್ದು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು ಮೈಮೇಲೆ ನೀಲಿ ಬಣ್ಣದ ಶರ್ಟ್,ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕೆಂಪು ಬಣ್ಣದ ಅಂಡರ್‌ವೇರ್ ದೊರೆತಿರುತ್ತವೆ. ಮೃತನ ಕುತ್ತಿಗೆಯ ಹತ್ತಿರ ಕಿರೀಟ, ರಟ್ಟೆಯ ಹತ್ತಿರ ಏ ರಚು ಹಾಗೂ ಎದೆಯ ಮೇಲೆ mani ಎಂಬ ಹಚ್ಚೆ ಗುರುತುಗಳಿವೆ. ಮೃತನ ರಕ್ತ ಸಂಬಂಧಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ದಾವಣಗೆರೆ ರೈಲ್ವೇ ಪೊಲೀಸ್ ಠಾಣೆ (9480802123, 7892178080) ತಿಳಿಸುವಂತೆ ಕೋರಲಾಗಿದೆ. ಈ ಕುರಿತು ದಾವಣಗೆರೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌